ಕಾರವಾರ(ಉತ್ತರ ಕನ್ನಡ):ಪರಿಸರ ಸಂರಕ್ಷಣೆ ಮತ್ತು ಕಸ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯುವ ಪರಿಸರ ಪ್ರೇಮಿ ನಾಗರಾಜ್ ಬಜಲ್ ಅವರು 'ಹಸಿರು ನಡಿಗೆ' ಜಾಥಾ ಕೈಗೊಂಡಿದ್ದಾರೆ. ಕಾರವಾರದಿಂದ ಮಂಗಳೂರಿನವರೆಗೆ ಸುಮಾರು 300 ಕಿ. ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕೇವಲ 8 ದಿನಗಳಲ್ಲಿ ಕ್ರಮಿಸುವ ಗುರಿಯನ್ನು ಇವರು ಹೊಂದಿದ್ದಾರೆ. ಈ ಜಾಥಾದ ಪ್ರಧಾನ ಉದ್ದೇಶ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸ ನಿರ್ವಹಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು ಸಾಮಾನ್ಯವಾಗಿದ್ದು, ಇದರ ಪರಿಣಾಮ ನದಿ, ಹಳ್ಳ ಮತ್ತು ಸಮುದ್ರ ಸೇರಿದಂತೆ ಅನೇಕ ಜಲಮೂಲಗಳು ಮಲಿನವಾಗುತ್ತಿವೆ.
ಭೂಮಿಯ ಮೇಲೆ ಎಸೆದ ಪ್ಲಾಸ್ಟಿಕ್ ತ್ಯಾಜ್ಯಗಳು ಅಂತಿಮವಾಗಿ ಸಮುದ್ರ ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಅಭಿಯಾನ:ನಾಗರಾಜ್ ಬಜಲ್ ಅವರ 'ಹಸಿರು ನಡಿಗೆ' ಜಾಥಾ ಕರಾವಳಿಯ ತೀರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕಸ ಸಮುದ್ರ ಸೇರದಂತೆ ತಡೆಯುವ ಜಾಗೃತಿ ಅಭಿಯಾನವಾಗಿದೆ. ಜಾಥಾ ವೇಳೆ ನಾಗರಾಜ್ ಅವರು ಶಾಲಾ-ಕಾಲೇಜುಗಳು, ಧಾರ್ಮಿಕ ಸಂಸ್ಥೆಗಳು, ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಪಂಚಾಯಿತಿಗಳಿಗೆ ಭೇಟಿ ನೀಡಿ, ಕಸ ನಿರ್ವಹಣೆ ಮತ್ತು ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲಿದ್ದಾರೆ. ದ. ಕನ್ನಡದ 10 ಪಂಚಾಯತ್‌ಗಳನ್ನು ಶೂನ್ಯ ತ್ಯಾಜ್ಯ ಗ್ರಾಮಗಳನ್ನಾಗಿಸುವ ಗುರಿ:'ಹಸಿರು ದಳ' ಎಂಬ ಸಂಸ್ಥೆಯ ಯೋಜನಾ ವ್ಯವಸ್ಥಾಪಕರಾಗಿರುವ ನಾಗರಾಜ್ ಬಜಲ್ ಅವರು, ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಪಂಚಾಯತ್‌ಗಳನ್ನು "ಜೀರೋ ವೆಸ್ಟ್ ಗ್ರಾಮ" (ಶೂನ್ಯ ತ್ಯಾಜ್ಯ ಗ್ರಾಮ)ಗಳನ್ನಾಗಿಸುವ ಗುರಿಯನ್ನು ಹೊಂದಿದ್ದಾರೆ. ಕಾರವಾರದಲ್ಲಿ ಅತಿ ದೊಡ್ಡ ಗಾತ್ರದ ಅಟ್ಲಾಸ್ ಪತಂಗ ಪತ್ತೆ: ಕಾರವಾರ ನಗರದ ಗುಡ್ಡೆಹಳ್ಳಿಯಲ್ಲಿ ಅತೀ ದೊಡ್ಡ ಗಾತ್ರದ ಪತಂಗ ಎಂದೇ ಗುರುತಿಸಲ್ಪಟ್ಟಿರುವ 'ಅಟ್ಲಾಸ್ ಮೋತ್' (Attacus atlas) ಪತ್ತೆಯಾಗಿದೆ. ಸ್ಥಳೀಯ ಹವ್ಯಾಸಿ ಛಾಯಾಗ್ರಾಹಕ ರವಿ ಗೌಡ ಪತಂಗದ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಕೀಟ ತಜ್ಞರ ಪ್ರಕಾರ ಇದು ಲೆಪಿಡಾಪ್ಟೆರಾ ವರ್ಗಕ್ಕೆ ಸೇರಿದ ಒಂದು ವಿಶೇಷ 'ಪತಂಗ' ಆಗಿದೆ. ವೈಜ್ಞಾನಿಕವಾಗಿ Attacus atlas ಎಂದು ಕರೆಯಲ್ಪಡುವ ಈ ಪತಂಗವು ತನ್ನ ಗಾತ್ರದಿಂದಲೇ ಪ್ರಸಿದ್ಧವಾಗಿದೆ.
ಇದರ ರೆಕ್ಕೆಗಳ ವಿಸ್ತೀರ್ಣವು ಸುಮಾರು 24 ಸೆಂ. ಮೀ. ಗಳಷ್ಟು ಇದ್ದು, ಇದು ಅತಿ ದೊಡ್ಡ ರೆಕ್ಕೆಗಳ ವಿಸ್ತೀರ್ಣ ಹೊಂದಿದೆ. ಈ ಅಟ್ಲಾಸ್ ಪತಂಗಕ್ಕೆ ಬಾಯಿ ಅಥವಾ ಜೀರ್ಣಾಂಗ ವ್ಯವಸ್ಥೆ ಇಲ್ಲ. ಕರಾವಳಿ ಹಾಗೂ ಮಲೆನಾಡು ಕಾಡುಗಳಲ್ಲಿ ಕಾಣಿಸುವ ಈ ಪತಂಗವು ಕೆಲ ನಿರ್ದಿಷ್ಟ ಮರಗಳ ಎಲೆಗಳಲ್ಲಿ ಇಟ್ಟ ಮೊಟ್ಟೆಯಿಂದ ಹೊರಬಂದ ನಂತರ ಅದೇ ಎಲೆಗಳನ್ನು ಯಥೇಚ್ಛವಾಗಿ ತಿಂದು ತನ್ನ ಜೀವನಕ್ಕೆ ಬೇಕಾದ ಸಂಪೂರ್ಣ ಶಕ್ತಿಯನ್ನು ಸಂಗ್ರಹಿಸಿಕೊಳ್ಳುತ್ತದೆ.








