ಖಮ್ಮಂ (ತೆಲಂಗಾಣ):ರೈತರ ಬೆಳೆಗಳಿಗೆ ಮಂಗಳಗಳ ಕಾಟ ಇತ್ತೀಚೆಗೆ ಕಾಮನ್ ಎಂಬಂತಾಗಿದೆ. ಮಂಗಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಮಂಗಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳಲು ಇಲ್ಲೊಬ್ಬ ವ್ಯಕ್ತಿ, ವಿಚಿತ್ರವಾದರೂ ಹೊಸ ಐಡಿಯಾವೊಂದನ್ನು ಕಂಡುಕೊಂಡಿದ್ದಾನೆ. ಸುಗ್ಗಿಯ ಋತುವಿನಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳ ಮತ್ತು ಭತ್ತವನ್ನು ಮಂಗಗಳು ಹಾಳು ಮಾಡುತ್ತಿವೆ. ಹೀಗಾಗಿ ಖಮ್ಮಂ ಜಿಲ್ಲೆಯ ಮಂಚುಕೊಂಡ ಗ್ರಾಮದ ಯುವಕ ಇದಕ್ಕೆ ತನ್ನ ಸೃಜನಶೀಲತೆಯನ್ನು ಬಳಕೆ ಮಾಡಿಕೊಂಡಿದ್ದಾನೆ.
ತಮ್ಮ ಊರಿನಲ್ಲಿ ಮಂಗಗಳಿಂದ ಹೇಗಾದರೂ ಬೆಳೆಗಳನ್ನು ಕಾಪಾಡಬೇಕು ಎಂದು ಕೊತಪಲ್ಲಿ ಜಾನಕಿರಾಮ್ ಹರಸಾಹಸ ಪಡುತ್ತಿದ್ದರು. ಇದಕ್ಕಾಗಿ ಯೂಟ್ಯೂಬ್ ಮೊರೆ ಹೋಗಿದ್ದ ಅವರು, ಅಲ್ಲಿ ಮಂಗಗಳು ಚಿಂಪಾಂಜಿ ಕಂಡರೆ ಭಯ ಪಡುತ್ತವೆ ಎಂಬುದನ್ನು ಕಂಡುಕೊಂಡಿದ್ದರು. ಇದು ತಿಳಿದ ತಕ್ಷಣವೇ ಚಿಂಪಾಜಿ ಅವತಾರ ತಾಳುವ ನಿರ್ಧಾರ ಮಾಡಿದ್ದರು. ಅಷ್ಟೇ ಅಲ್ಲ, ಚಿಂಪಾಜಿಗಳ ಚಲನವಲನಗಳ ಬಗ್ಗೆ ತಿಳಿದುಕೊಂಡಿದ್ದರು. ಅವು ಯಾವ ರೀತಿ ಶಬ್ದ ಮಾಡುತ್ತವೆ, ಅವುಗಳ ನಡುವಳಿಕೆ ಏನು ಎಂಬುದರ ಕುರಿತು ಸಂಪೂರ್ಣ ಅಧ್ಯಯನ ನಡೆಸಿದ್ದರು.
ಇದಾದ ಬಳಿಕ ವಿಜಯವಾಡಕ್ಕೆ ತೆರಳಿ 1000 ಕೊಟ್ಟು ಚಿಂಪಾಜಿ ವೇಷವನ್ನು ಖರೀದಿಸಿ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದರು. ಈ ಚಿಂಪಾಜಿ ವೇಷ ತೊಟ್ಟ ಜಾನಕಿರಾಮ್, ಗ್ರಾಮವನ್ನು ಗಸ್ತು ತಿರುಗುವ ಮೂಲಕ ಊರಿನ ಸುತ್ತ ಇದ್ದ ಮಂಗಗಳನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಈ ಯೋಜನೆ ಯಶಸ್ವಿಯಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ತಮ್ಮ ಬೆಳೆಗಳ ರಕ್ಷಣೆ ಮಾಡಿಕೊಡುವಂತೆ ಈತನ ಮೊರೆ ಹೋಗಿದ್ದರು. ದಿನವೊಂದಕ್ಕೆ ಸಾವಿರ ರೂ ಶುಲ್ಕ:ಉಳಿದ ರೈತರ ಕೋರಿಕೆ ಮೇಲೆ,ಈ ಯುವಕ ಚಿಂಪಾಂಜಿ ವೇಷ ತೊಟ್ಟು ಮಂಗಳಗನ್ನು ಓಡಿದ್ದಾರೆ. ಈ ರೀತಿ ಕಾರ್ಯ ನಿರ್ವಹಣೆಗೆ ದಿನವೊಂದಕ್ಕೆ 1000 ರೂ ಶುಲ್ಕ ಪಡೆಯುವ ಮೂಲಕ ಇದನ್ನು ಆದಾಯ ಗಳಿಸುವ ಮಾರ್ಗವಾಗಿಸಿಕೊಂಡಿದ್ದಾರೆ.
ಸಕ್ಸಸ್ ಕಂಡ ಜಾನಕಿರಾಮನ ವೇಷ:ಜಾನಕಿರಾಮ್ ಅವರ ಈ ಚಿಂಪಾಜಿ ಯೋಜನೆ ಯಶಸ್ವಿಯಾಗಿದ್ದು, ಇದರಿಂದ ಶೇ 90ರಷ್ಟು ಮಂಗಗಳ ಕಾಟ ತಪ್ಪಿದೆ. ಜಾನಕಿರಾಮ್ ಅವರ ಕ್ರಿಯಾತ್ಮಕ ಪರಿಹಾರ ಇದೀಗ ನಮಗೆ ನೆಮ್ಮದಿ ನೀಡಿದೆ ಅಂತಿದ್ದಾರೆ ಇಲ್ಲಿನ ರೈತರು. ಇದರಿಂದ ಗಳಿಕೆ ಮಾಡುವ ಅವರ ಉದ್ಯಮಶೀಲ ಮನೋಭಾವ ಇತರರಿಗೆ ಸ್ಫೂರ್ತಿಯನ್ನೂ ನೀಡಿದೆ. ಮನುಷ್ಯನ ಬುದ್ದಿವಂತಿಕೆ ಮತ್ತು ಯೋಜನಾ ಶಕ್ತಿ ಹೇಗೆಲ್ಲ ತೋರಿಸಬಹುದು ಎಂಬುದಕ್ಕೆ ಜಾನಕಿರಾಮ್ ಉದಾಹರಣೆಯಾಗಿ ನಿಂತಿದ್ದಾರೆ. ಚಿಂಪಾಂಜಿ ಮನುಷ್ಯ ಎಂದು ಕರೆಯಿಸಿಕೊಳ್ಳುತ್ತಿರುವ ಜಾನಕಿರಾಮ್: ಜಾನಕಿರಾಮ್ ಉದ್ಯಮದ ಜೊತೆ ಸ್ಥಳೀಯವಾಗಿ ಗುರುತಿಸಿಕೊಳ್ಳುತ್ತಿದ್ದು, ಚಿಂಪಾಜಿ ಮನುಷ್ಯ ಎಂಬ ಖ್ಯಾತಿಯನ್ನು ಪಡೆಯುತ್ತಿದ್ದಾರೆ.
ತಮ್ಮ ಹೊಸ ಆಲೋಚನೆ ಪರಿಣಾಮವಾಗಿ ಸ್ಥಳೀಯವಾಗಿ ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಜಾನಕಿರಾಮ್ ಅವರ ಈ ಯೋಜನೆ ಅಸಾಂಪ್ರದಾಯಿಕವಾಗಿದ್ದರೂ ಪರಿಣಾಮಕಾರಿ ಪರಿಹಾರ ನೀಡುತ್ತಿದೆ. ಇದರಿಂದಾಗಿ ನಮ್ಮ ಬೆಳೆಗಳ ರಕ್ಷಣೆಯಾಗುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.








