ಸೂಪರ್ ಸಾಫ್ಟ್ ಸ್ಪಂಜಿನಂತಹ ದೋಸೆ ತಯಾರಿಸಲು ಸರಳ ಟಿಪ್ಸ್

ಸೂಪರ್ ಸಾಫ್ಟ್ ಸ್ಪಂಜಿನಂತಹ ದೋಸೆ ತಯಾರಿಸಲು ಸರಳ ಟಿಪ್ಸ್
By Published : October 30, 2025 at 4:38 PM IST

Super Soft Sponge Dosa Recipe:ಹಲವರಿಗೆ ದೋಸೆ ಎಂದರೆ ಬಲು ಇಷ್ಟದ ತಿಂಡಿ. ಮಸಾಲಾ ದೋಸೆ, ಉತ್ತಪ್ಪ, ಈರುಳ್ಳಿ ದೋಸೆ, ಸೆಟ್​ ದೋಸೆ ಹೀಗೆ ವಿವಿಧ ಬಗೆಯಲ್ಲಿ ದೋಸೆಗಳನ್ನು ತಯಾರಿಸುತ್ತಾರೆ. ಇಂತಹ ದೋಸೆಗಳನ್ನು ತಿಂದು ಬೇಸರವಾಗಿದ್ದರೆ, ಅದಕ್ಕಾಗಿಯೇ ಈ ಬಾರಿ ವಿಭಿನ್ನಿ ರೀತಿಯ ಸ್ಪಂಜಿನಂತಹ ದೋಸೆಗಳನ್ನು ಮಾಡಿ. ತುಂಬಾ ಸಾಫ್ಟ್ ಆಗಿರುವ ದೋಸೆಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಈ ದೋಸೆಗಳನ್ನು ಈರುಳ್ಳಿ, ಕೊಬ್ಬರಿ ಚಟ್ನಿ ಸೇರಿದಂತೆ ಯಾವುದೇ ಚಟ್ನಿಯ ಜೊತೆಗೆ ಸವಿದರೂ ಸಖತ್ ರುಚಿಯಾಗಿರುತ್ತದೆ.

ಮೀನಿನ ಕರಿ ಇಲ್ಲವೇ ಚಿಕನ್ ಗ್ರೇವಿಯೊಂದಿಗೆ ತಿಂದರೂ ರುಚಿ ಅದ್ಭುತವಾಗಿರುತ್ತದೆ. ರುಚಿಕರ ಸೂಪರ್ ಸಾಫ್ಟ್ ದೋಸೆ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಸ್ಪಂಜಿನಂತಹ ದೋಸೆಗಾಗಿ ಬೇಕಾಗುವ ಪದಾರ್ಥಗಳು:ಅಕ್ಕಿ - 2 ಕಪ್ಉದ್ದಿನಬೇಳೆ - 4 ಟೀಸ್ಪೂನ್ಮೆಂತೆ ಕಾಳು - 2 ಟೀಸ್ಪೂನ್ಉಪ್ಪು - ರುಚಿಗೆ ತಕ್ಕಷ್ಟುಸ್ಪಂಜಿನಂತಹ ದೋಸೆ ತಯಾರಿಸುವ ವಿಧಾನ:ಅತ್ಯಂತರುಚಿಕರವಾದ ಸ್ಪಂಜಿನಂತಹ ದೋಸೆ ಮಾಡಲು ಮೊದಲಿಗೆ ಒಂದು ಬಟ್ಟಲಿನಲ್ಲಿ ಎರಡು ಕಪ್ ಅಕ್ಕಿ (ಇಡ್ಲಿ ಅಕ್ಕಿ) ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಬಳಿಕ ನೀರು ಹಾಕಿ ಐದು ಗಂಟೆಗಳ ಕಾಲ ನೆನೆಸಿಡಿ. ಎರಡು ಪ್ರತ್ಯೇಕ ಬಟ್ಟಲುಗಳನ್ನು ತೆಗೆದುಕೊಂಡು ಒಂದರಲ್ಲಿ ನಾಲ್ಕು ಟೀಸ್ಪೂನ್ ಉದ್ದಿನಬೇಳೆ ಮತ್ತು ಇನ್ನೊಂದರಲ್ಲಿ ಎರಡು ಟೀಸ್ಪೂನ್ ಮೆಂತ್ಯ ಹಾಕಿ.

ಇದಕ್ಕೆ ನೀರು ಹಾಕಿ ಮತ್ತು ಐದು ಗಂಟೆಗಳ ಕಾಲ ನೆನೆಸಿಡಿ. ಐದು ಗಂಟೆಗಳ ಬಳಿಕ ಮೊದಲು ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಮಿಕ್ಸರ್ ಜಾರ್‌ನಲ್ಲಿ ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಅಕ್ಕಿ ಮತ್ತು ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ನಂತರ ತಯಾರಿಸಿದ ಈ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಬೇಕು. ಮರುದಿನ ಬೆಳಿಗ್ಗೆ ಒಂದು ಬಟ್ಟಲಿನಲ್ಲಿ ರುಬ್ಬಿದ ಹಿಟ್ಟಿನಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು, ಸಾಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಅಂದರೆ, ಹಿಟ್ಟು ತೆಳುವಾಗಿದೆಯೆ ಎಂದು ನೋಡಿರಿ. ಇನ್ನೊಂದೆಡೆ ಒಲೆಯ ಮೇಲೆ ಪ್ಯಾನ್ ಇಟ್ಟು, ಒಂದು ಟೀಸ್ಪೂನ್ ಬಳಸಿ ಹಿಟ್ಟನ್ನು ತೆಗೆದುಕೊಂಡು ಅದನ್ನು ಪ್ಯಾನ್ ಮೇಲೆ ದೋಸೆ ಆಕಾರದಲ್ಲಿ ಹಾಕಬೇಕು. ದೋಸೆಯ ಅಂಚುಗಳ ಸುತ್ತಲೂ ಎಣ್ಣೆ ಹಾಕಿ ಬಳಿಕ ಮುಚ್ಚಿ ಬೇಯಿಸಬೇಕು. ಬಳಿಕ ಇವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡರೆ ಬಿಸಿಬಿಸಿಯಾದ ಸ್ಪಂಜಿನಂತಹ ದೋಸೆಗಳು ಸವಿಯಲು ಸಿದ್ಧ. ಈರುಳ್ಳಿ ಚಟ್ನಿಗಾಗಿ ಬೇಕಾಗುವ ಪದಾರ್ಥಗಳೇನು?:ಬೆಳ್ಳುಳ್ಳಿ- 2ಉಪ್ಪು - ಸ್ವಲ್ಪಜೀರಿಗೆ - ಸ್ವಲ್ಪಈರುಳ್ಳಿ ( ಸಣ್ಣಗೆ ಕತ್ತರಿಸಿದ್ದು )- ಒಂದೂವರೆ ಕಪ್ಖಾರದ ಪುಡಿ - ಒಂದೂವರೆ ಟೀಸ್ಪೂನ್ಹುಣಸೆಹಣ್ಣು - ಸ್ವಲ್ಪಈರುಳ್ಳಿ ಚಟ್ನಿ ಸಿದ್ಧಪಡಿಸುವ ವಿಧಾನ:ಮೊದಲಿಗೆ2 ಬೆಳ್ಳುಳ್ಳಿ ಎಸಳುಗಳು, ಸ್ವಲ್ಪ ಉಪ್ಪು ಹಾಗೂ ಸ್ವಲ್ಪ ಜೀರಿಗೆಯನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ.

ಬಳಿಕ ಒಂದೂವರೆ ಕಪ್ ಕತ್ತರಿಸಿದ ಈರುಳ್ಳಿ, ಒಂದೂವರೆ ಟೀಸ್ಪೂನ್ ಖಾರದ ಪುಡಿ ಹಾಗೂ ಸಣ್ಣ ಹುಣಸೆ ಹಣ್ಣಿನ ತಿರುಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿ. ಮತ್ತೊಂದೆಡೆ ಒಲೆ ಆನ್ ಮಾಡಿ ಹಾಗೂ ಒಗ್ಗರಣೆಗಾಗಿ ಕಡಾಯಿಯಲ್ಲಿ ಎರಡು ಟೀಸ್ಪೂನ್ ಎಣ್ಣೆಯನ್ನು ಸೇರಿಸಿ. ಎಣ್ಣೆ ಬಿಸಿಯಾದ ಬಳಿಕ ಒಂದು ಟೀಸ್ಪೂನ್ ಜೀರಿಗೆ, ಒಂದು ಟೀಸ್ಪೂನ್ ಸಾಸಿವೆ ಹಾಗೂ ಸ್ವಲ್ಪ ಕರಿಬೇವು ಸೇರಿಸಿ ಹುರಿಯಿರಿ. ಬಳಿಕ ರುಬ್ಬಿದ ಈರುಳ್ಳಿ ಮಿಶ್ರಣವನ್ನು ಒಗ್ಗರಣೆಯಲ್ಲಿ ಹಾಕಿ ಮಿಕ್ಸ್​ ಮಾಡಿ.

ಈಗ ಅದನ್ನು ಎರಡು ನಿಮಿಷ ಬಿಟ್ಟು ಒಲೆ ಆಫ್ ಮಾಡಬೇಕು. ಇದೀಗ ರುಚಿ ರುಚಿಯಾದ ಈರುಳ್ಳಿ ಚಟ್ನಿ ಸಿದ್ಧ. ಸ್ಪಂಜಿನಂತಹ ದೋಸೆಗಳಿಗೆ ಈರುಳ್ಳಿ ಚಟ್ನಿ ಸೇರಿಸಿ ತಿಂದರೆ ಸೂಪರ್ ಆಗಿರುತ್ತದೆ. ಇವುಗಳನ್ನೂ ಓದಿ:.

📚 Related News