ಇಳಿಕೆಯ ಹಾದಿಯಲ್ಲಿ ಚಿನ್ನ: ಬೆಲೆ ಏರಿಳಿತಕ್ಕೆ ಕಾರಣಗಳು ಇವು

ಇಳಿಕೆಯ ಹಾದಿಯಲ್ಲಿ ಚಿನ್ನ: ಬೆಲೆ ಏರಿಳಿತಕ್ಕೆ ಕಾರಣಗಳು ಇವು
By Published : October 29, 2025 at 4:48 PM IST

ನವದೆಹಲಿ:ಸಾರ್ವಕಾಲಿಕ ದಾಖಲೆಯ ಬೆಲೆ ಕಂಡ ಬಳಿಕ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಗಳಲ್ಲಿ ಇಳಿಕೆ ಕಾಣುತ್ತಿದೆ. ಇಂದು 176 ರೂ ಇಳಿದು 10 ಗ್ರಾಂ ಬೆಲೆ 1,19,470 ರೂ ಆಗಿದೆ. ಆದರೂ ಹೂಡಿಕೆದಾರರು ಅಮೆರಿಕದ ಫೆಡರಲ್​ ರಿಸರ್ವ್​​ ಹಣಕಾಸು ನೀತಿ ನಿರ್ಧಾರದ ಬಗ್ಗೆ ಎಚ್ಚರವಹಿಸುವುದು ಅಗತ್ಯ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ. ಈ ವರ್ಷ ಚಿನ್ನದ ಬೆಲೆಯಲ್ಲಿ ಸುಮಾರು ಶೇ. 50ರಷ್ಟು ಏರಿಕೆಯಾಗಿದೆ.

ಇದಕ್ಕೆ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ಬಲವಾದ ಕೇಂದ್ರ ಬ್ಯಾಂಕ್ ಖರೀದಿ ಮತ್ತು ಕರೆನ್ಸಿ ಅಪಮೌಲ್ಯೀಕರಣದ ಕಳವಳಗಳು ಕಾರಣವಾಗಿವೆ. ಮಾರುಕಟ್ಟೆಯ ಪರಿಸ್ಥಿತಿಗಳು ಇನ್ನೂ ಅನಿಶ್ಚಿತವಾಗಿಯೇ ಇದ್ದು, ಏರಿಳಿತದ ಮಾದರಿಗಳು ಮುಂಬರುವ ಅಂತಾರಾಷ್ಟ್ರೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದದ ನಿರೀಕ್ಷೆಯು ಚಿನ್ನದ ಮೇಲಿನ ಆಕರ್ಷಣೆಯನ್ನು ಕಡಿಮೆ ಮಾಡಿದೆ ಎಂದು ಆಗ್ಮಾಂಟ್‌ನ ಸಂಶೋಧನಾ ಮುಖ್ಯಸ್ಥೆ ರೆನಿಶಾ ಚೈನಾನಿ ತಿಳಿಸಿದರು. ಹೂಡಿಕೆದಾರರು ಫೆಡರಲ್ ರಿಸರ್ವ್‌ನ ಬಡ್ಡಿದರ ಘೋಷಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಿದ್ದರೂ ಈ ವಾರದ ನಿರೀಕ್ಷಿತ ದರ ಇಳಿಕೆಯೊಂದಿಗೆ ಫೆಡ್ ನಿಲುವನ್ನು ಅಳವಡಿಸಿಕೊಂಡರೆ, ಇದನ್ನು ಎದುರಿಸಬಹುದು.

ಕಡಿಮೆ ಬಡ್ಡಿದರಗಳು ಚಿನ್ನದಂತಹ ಬಡ್ಡಿರಹಿತ ಸ್ವತ್ತುಗಳ ಮೇಲಿನ ಆಸಕ್ತಿ ಹೆಚ್ಚಿಸಬಹುದು ಎಂಬುದು ತಜ್ಞರ ಮಾತು. ಭಾರತದ ಮನೆಗಳಲ್ಲಿ ಎಷ್ಟು ಮೌಲ್ಯದ ಚಿನ್ನವಿದೆ?:ಚಿನ್ನದ ಬೆಲೆ ದ್ವಿಗುಣಗೊಂಡಿರುವುದರಿಂದ ಭಾರತೀಯ ಮನೆಗಳಲ್ಲಿ ಬಂಗಾರದ ನಿವ್ವಳ ಮೌಲ್ಯ ಸುಮಾರು 3. 24 ಟ್ರಿಲಿಯನ್ ರೂ. ಗಳಿಗೆ ಏರಿಕೆಯಾಗಿದೆ ಎಂದು ಸಿಸ್ಟಮ್ಯಾಟಿಕ್ಸ್ ರಿಸರ್ಚ್ ವರದಿ ತಿಳಿಸಿದೆ. ಈ ಹೆಚ್ಚಳವು 2024ರಿಂದ ಚಿನ್ನದ ಬೆಲೆಯಲ್ಲಿ ಶೇ.

100 ಏರಿಕೆಯನ್ನು ಪ್ರತಿನಿಧಿಸುತ್ತದೆ. ಇದು ದೇಶಾದ್ಯಂತ ಮನೆಯ ಸಂಪತ್ತಿನಲ್ಲಿ ಚಿನ್ನದ ಮಹತ್ವದ ಪಾತ್ರವನ್ನು ತೋರಿಸುತ್ತದೆ ಎಂದು ವರದಿ ಹೇಳಿದೆ. ಭಾರತೀಯ ಕುಟುಂಬಗಳು ಒಟ್ಟಾರೆ ಸುಮಾರು 24,000 ಟನ್ ಚಿನ್ನ ಹೊಂದಿದ್ದು, ವಿಶ್ವದ ಚಿನ್ನದ ನಿಕ್ಷೇಪಗಳಲ್ಲಿ ಆಭರಣ ರೂಪದಲ್ಲಿ ಶೇ. 11ರಷ್ಟಿದೆ ಎಂದು ವರದಿ ತಿಳಿಸಿದೆ. ಚಿನ್ನದ ಬೆಲೆ ದ್ವಿಗುಣಗೊಳ್ಳುವುದರೊಂದಿಗೆ ಒಟ್ಟಾರೆ ಮನೆಗಳಲ್ಲಿನ ಬಂಗಾರದ ನಿವ್ವಳ ಮೌಲ್ಯವು 3.

24 ಟ್ರಿಲಿಯನ್ ರೂ. ಗಳಿಗೆ ಏರಿಕೆಯಾಗಿದೆ. ಮನೆಯಲ್ಲಿರುವ ಬಂಗಾರದ ಸಂಪತ್ತಿನಲ್ಲಿ ಈ ತೀವ್ರ ಏರಿಕೆಯ ಹೊರತಾಗಿಯೂ, ನೈಜ ಬಳಕೆಯ ಮೇಲಿನ ಪರಿಣಾಮವು ಕಡಿಮೆಯಾಗಿದೆ ಎಂದು ವರದಿ ಗಮನಿಸಿದೆ. ಇವುಗಳನ್ನೂ ಓದಿ:.

📚 Related News