ಮಂಗಳೂರು: ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ದೇಶ-ವಿದೇಶದ ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾಳುಗಳಿಗೆ ವಿಶ್ವ ಶ್ರೇಯಾಂಕದಲ್ಲಿ ರೇಟಿಂಗ್ ಹೆಚ್ಚಿಸಿಕೊಳ್ಳಲು ಅಂಕಗಳು ಸಿಗಲಿವೆ. ಬಿಡಬ್ಲ್ಯುಎಫ್ ಆಯೋಜನೆಯಲ್ಲಿ ಯೋನೆಕ್ಸ್-ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿ ನಗರದ ನ್ಯೂ ಉರ್ವದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ (DKBA) ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದೊಂದಿಗೆ ಪ್ರತಿಷ್ಠಿತ ಕ್ರೀಡಾಕೂಟ ಆಯೋಜನೆಗೊಂಡಿದೆ. ಬಿಡಬ್ಲ್ಯು ಎಫ್‌ನಿಂದ ನಡೆಯುತ್ತಿರುವ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ಪಟುಗಳು ಭಾಗವಹಿಸಿ ತಮ್ಮ ಸಾಮರ್ಥ್ಯ ತೊರಿಸುತ್ತಿದ್ದಾರೆ.
ಅ. 28ರಿಂದ ಪಂದ್ಯಗಳು ಆರಂಭಗೊಂಡಿದ್ದು ನ. 2 ರವರೆಗೆ ನಡೆಯಲಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ನಡೆಯುತ್ತಿರುವುದು ವಿಶೇಷ. ಈ ಪಂದ್ಯಾವಳಿಯಲ್ಲಿ ಭಾರತ, ಯುಎಸ್ಎ, ಯುಎಇ, ಇಂಗ್ಲೆಂಡ್, ಕೆನಡಾ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಸೇರಿದಂತೆ ಏಷ್ಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳ 12 ರಾಷ್ಟ್ರಗಳ 435ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದಾರೆ.
ಹೊರದೇಶದ ಸುಮಾರು ಶೇ. 70ರಷ್ಟು ಆಟಗಾರರು ಭಾಗವಹಿಸಿದ್ದಾರೆ. ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಮಹಿಳಾ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಿಶ್ರ ವಿಭಾಗಗಳಲ್ಲಿ ಪಂದ್ಯಗಳು ನಡೆಯುತ್ತಿವೆ. ಆಟಗಾರರಿಗೆ ಉತ್ತಮ ಊಟೋಪಚಾರ, ವಸತಿ, ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮಾಲ್ಡೀವ್ಸ್ ಮೂಲದ ಆಲಿ ಮುಖ್ಯ ತೀರ್ಪುಗಾರರಾಗಿದ್ದಾರೆ.
ರಾಜೀವ್ ಮೆಹ್ರಾ, ರಾಜೇಶ್ ಶೇಖರ್ ಮತ್ತು ಬಾಲ ಮುಖ್ಯ ಅಂಪೈರ್‌ಗಳಾಗಿ ಸಹಕರಿಸುತ್ತಿದ್ದಾರೆ. ಈ ಟೂರ್ನಮೆಂಟ್‌ನಲ್ಲಿ 400 ಅಂಕಗಳಿದ್ದು, ಈ ಅಂಕಗಳನ್ನು ಬ್ಯಾಡ್ಮಿಂಟನ್ ಆಟಗಾರರು ಪಡೆದುಕೊಳ್ಳಲಿದ್ದಾರೆ. ಇದರಿಂದ ತಮ್ಮ ಶ್ರೇಯಾಂಕದ ರೇಟಿಂಗ್ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ. ಈ ಬಗ್ಗೆ ಮಾತನಾಡಿದ ಟೂರ್ನಮೆಂಟ್ ಆಯೋಜಕರಾದ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಕರ್ನಾಟಕದಲ್ಲಿ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜನೆ ಗೊಂಡಿದೆ. ಮೂರನೇ ಹಂತದ ಬ್ಯಾಡ್ಮಿಂಟನ್ ಟೂರ್ನಮೆಂಟ್ ಇದಾಗಿದ್ದು, ಇದರಲ್ಲಿ 400 ಪಾಯಿಂಟ್ಗಳು ಆಟಗಾರರಿಗೆ ಸಿಗುತ್ತದೆ.
ಇದರ ಮೂಲಕ ಅವರು ಮುಂದಿನ ಹಂತಕ್ಕೆ ತಲುಪಲು ಪಾಯಿಂಟ್ ಪಡೆಯುತ್ತಾರೆ. ಇದು ಸತತ ಆರು ದಿವಸಗಳ ಕಾಲ ನಡೆಯುತ್ತದೆ. ಈ ಟೂರ್ನಮೆಂಟ್‌ನಲ್ಲಿ 435 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಇದರಲ್ಲಿ 70 ಕ್ರೀಡಾಪಟುಗಳು ವಿದೇಶಿ ಕ್ರೀಡಾಳುಗಳಿದ್ದಾರೆ. ಭಾರತ ಸೇರಿ ಒಟ್ಟು 12 ದೇಶದ ಆಟಗಾರು ಇದರಲ್ಲಿ ಭಾಗಿ ಆಗಿದ್ದಾರೆ. ವಿಶ್ವದ 50ನೇ ಶ್ರೇಯಾಂಕದ ಮೇಲೆ ಇರುವ ಕ್ರೀಡಾಪಟುಗಳು ಇಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಈ ಬಗ್ಗೆ ಮಾತನಾಡಿದ ಥೈಲ್ಯಾಂಡ್ನ ಬ್ಯಾಡ್ಮಿಂಟನ್ ಕ್ರೀಡಾಪಟು ಟನಡೋನ್ ಪನ್ಪಾನಿಚ್ (Tanadon punpanich) ಇಲ್ಲಿ ಟೂರ್ನಮೆಂಟ್ ಆಯೋಜನೆ ಉತ್ತಮವಾಗಿ ಮಾಡಿದ್ದಾರೆ. ಉತ್ತಮ ವ್ಯವಸ್ಥೆಯಿದೆ ಎಂದು ಪ್ರಶಂಸಿಸಿದರು.








