ಏರ್​ಪೋರ್ಟ್​ನಲ್ಲಿ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​: ತಪ್ಪಿದ ಭಾರಿ ಅನಾಹುತ

ಏರ್​ಪೋರ್ಟ್​ನಲ್ಲಿ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​: ತಪ್ಪಿದ ಭಾರಿ ಅನಾಹುತ
By Published : October 28, 2025 at 4:23 PM IST

ನವದೆಹಲಿ:ರಾಷ್ಟ್ರ ರಾಜಧಾನಿಯ ಜನನಿಬಿಡ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನರ್​ 3ನ ಆವರಣದಲ್ಲಿ ನಿಲ್ಲಿಸಿದ್ದ ಏರ್​ ಇಂಡಿಯಾ ವಿಮಾನದ ಬಸ್ಸೊಂದು ಬೆಂಕಿಗೆ ಹೊತ್ತಿ ಉರಿದಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಬಸ್​ನಲ್ಲಿ ಯಾವುದೇ ಪ್ರಯಾಣಿಕರು, ಲಗೇಜು ಇಲ್ಲದಿರುವುದರಿಂದ ಹೆಚ್ಚಿನ ಪ್ರಮಾದ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಮಾಹಿತಿ ನೀಡಿದ ಪೊಲೀಸ್​ ಉಪ ಆಯುಕ್ತ ವಿಚಿತ್ರ ವೀರ್​, ಇಂದು ಮಧ್ಯಾಹ್ನ 1ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ವರದಿಯಾಗುತ್ತಿದ್ದಂತೆ ಅಗ್ನಿಶಾಮಕದಳ, ಸ್ಥಳೀಯ ಪೊಲೀಸರು ಹಾಗೂ ಸಿಐಎಸ್​ಎಫ್​ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸುವ ಕಾರ್ಯದಲ್ಲಿ ಪ್ರವೃತ್ತರಾದರು. ಬಸ್​ಗೆ ಬೆಂಕಿ ಹೊತ್ತಿದ ಸಂದರ್ಭದಲ್ಲಿ ಕೇವಲ ಡ್ರೈವರ್​ ಮಾತ್ರ ಇದ್ದರು.

ದುರ್ಘಟನೆ ವರದಿಯಾಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿದ ಹಿನ್ನೆಲೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಗಾಯ ಅಥವಾ ಅಪಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು. ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಏರ್​ ಇಂಡಿಯಾ ಈ ವಾಹನ ಬಳಕೆ ಮಾಡಲಾಗುತ್ತಿದ್ದು, ಘಟನೆಯಿಂದ ಬಸ್​​ಗೆ​ ಹಾನಿಯಾಗಿದೆ. ಈ ಘಟನೆ ವರದಿಯಾಗುತ್ತಿದ್ದಂತೆ ನಿಲ್ದಾಣದೊಳಗೆ ತಕ್ಷಣಕ್ಕೆ ಮುನ್ನೆಚ್ಚರಿಕಾ ಕ್ರಮ ನಡೆಸಲಾಯಿತು. ಬಸ್​ನಲ್ಲಿ ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬ ಕುರಿತು ತನಿಖೆ ಸಾಗಿದೆ ಎಂದು ಮಾಹಿತಿ ನೀಡಿದರು.

ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದ್ದು, ಇದು ವಾಹನದ ಒಳಭಾಗಕ್ಕೂ ವ್ಯಾಪಿಸಿರುವುದು ಚಿತ್ರಗಳಲ್ಲಿ ಕಂಡು ಬಂದಿದೆ. ದುರಂತದಲ್ಲಿ ಬಸ್ ಚಾಲಕನ ಸ್ಥಿತಿಯ ಬಗ್ಗೆ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ. ವಿಜಯವಾಡ ವಿಮಾನ ನಿಲ್ದಾಣದಲ್ಲಿ ಶಾರ್ಟ್​ ಸರ್ಕ್ಯೂಟ್: ಆಂಧ್ರ ಪ್ರದೇಶದ ವಿಜಯವಾಡ ವಿಮಾನ ನಿಲ್ದಾಣದ ಹಳೆಯ ಟರ್ಮಿನಲ್​ ಕಟ್ಟಡದಲ್ಲಿ ಕೂಡ ಇಂದು ಸಣ್ಣ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್​ ಸರ್ಕ್ಯೂಟ್​ನಿಂದ ಈ ಘಟನೆ ನಡೆದಿದ್ದು, ತಕ್ಷಣಕ್ಕೆ ಅಗ್ನಿ ಶಾಮಕ ತಂಡದ ಸಿಬ್ಬಂದಿ ಕಾರ್ಯ ಪ್ರವೃತ್ತರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಮಾಹಿತಿ ನೀಡಿದ ವಿಜಯವಾಡ ವಿಮಾನ ನಿಲ್ದಾಣದ ನಿರ್ದೇಶಕ ಲಕ್ಷ್ಮೀಕಾಂತ್​ ರೆಡ್ಡಿ, ಹಳೆ ಟರ್ಮಿನಲ್​ ಕಟ್ಟಡ ಕಸ್ಟಮ್​​ ಕಚೇರಿಯಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ.

ಮಂಗಳವಾರ ಬೆಳಗ್ಗೆ 7. 15ಕ್ಕೆ ಈ ಘಟನೆ ನಡೆದಿದ್ದು, ಬೆಂಕಿ ಕಾಣಿಸಿಕೊಂಡ 10 ನಿಮಿಷದಲ್ಲೇ ಅದನ್ನು ಆರಿಸಲಾಗಿದೆ. ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ತಂಡ ಕಾರ್ಯ ಪ್ರವೃತ್ತವಾಗಿದ್ದು, ಯಾವುದೇ ಅನಾಹುತ ವರದಿಯಾಗಿಲ್ಲ. ಈ ಅನಾಹುತದಿಂದ ಹೆಚ್ಚಿನ ಆಸ್ತಿಪಾಸ್ತಿ ನಾಶವಾಗಿಲ್ಲ ಎಂದು ಮಾಹಿತಿ ನೀಡಿದರು.

📚 Related News