Apple Event 2025: ಬಹುನಿರೀಕ್ಷಿತ ಆ್ಯಪಲ್ ಈವೆಂಟ್ 2025 ಸೆಪ್ಟೆಂಬರ್ 9ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಕ್ಯುಪರ್ಟಿನೊದ ಆ್ಯಪಲ್ ಪಾರ್ಕ್‌ನಲ್ಲಿ ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆ್ಯಪಲ್ ತನ್ನ ಇತ್ತೀಚಿನ ಐಫೋನ್ 17 ಸೀರಿಸ್ ಆಕರ್ಷಕ ಮೊಬೈಲ್‌ಗಳು, ಆ್ಯಪಲ್ ವಾಚ್ ಮತ್ತು ಏರ್ ಪಾಡ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ,

- ಐಫೋನ್ 17
- ಐಫೋನ್ 17 ಏರ್
- ಐಫೋನ್ 17 ಪ್ರೊ
- ಐಫೋನ್ 17 ಪ್ರೊ ಮ್ಯಾಕ್ಸ್.
- ಐಫೋನ್ ಮೊಬೈಲ್ ಸೀರಿಸ್ ಜೊತೆಗೆ ಆ್ಯಪಲ್ ವಾಚ್ ಸೀರಿಸ್ 11, ವಾಚ್ ಎಸ್‌ಇ 3, ವಾಚ್ ಅಲ್ಟ್ರಾ 3 ಮತ್ತು ಏರ್‌ಪಾಡ್ಸ್ ಪ್ರೊ 3 ಬಿಡುಗಡೆ ಮಾಡಲಾಯಿತು.
ಗೂಗಲ್‌ನಂತೆಯೇ ಆ್ಯಪಲ್ ಕೂಡ ಈ ಬಾರಿ ಕೃತಕ ಬುದ್ಧಿಮತ್ತೆ (AI) ವೈಶಿಷ್ಟ್ಯಗಳ ಬೃಹತ್ ಗುಂಪನ್ನು ಹೊಂದಿಸಿದೆ. ವಿನ್ಯಾಸಗಳಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.
ಇತ್ತೀಚೆಗೆ ಭಾರತದಲ್ಲಿ 4 ಆ್ಯಪಲ್ ಮಳಿಗೆಗಳನ್ನು ತೆರೆಯಲಾಗಿದೆ. ಆದ್ದರಿಂದ ಈ ಬಾರಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ 17 ಸರಣಿಯ ಐಫೋನ್‌ಗಳನ್ನು ಖರೀದಿಸುವ ಸಾಧ್ಯತೆ ಇದೆ.
ಹೊಸ ಸಾಧನಗಳ ಪ್ರೀ-ಆರ್ಡರ್‌ಗಳು ಸೆಪ್ಟೆಂಬರ್ 12ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19ರಿಂದ ಗ್ರಾಹಕರ ಕೈಗೆ ಸಿಗಲಿದೆ.
ಹೊಸ ಮೊಬೈಲ್‌ಗಳ ಹಾರ್ಡ್‌ವೇರ್ ಅನ್ನು ಸಹ ಅಪ್ಡೇಟ್ ಮಾಡಲಾಗಿದೆ. ಐಫೋನ್ 17 ಸೀರಿಸ್ ಮೊಬೈಲ್‌ಗಳು ಹೇಗಿವೆ? ಅವುಗಳ ವೈಶಿಷ್ಟ್ಯಗಳು ಮತ್ತು ಬೆಲೆಗಳು ಹೇಗಿವೆ? ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಐಫೋನ್ 17: ಐಫೋನ್ 17ರ ಅತಿದೊಡ್ಡ ಹೈಲೈಟ್ ಎಂದರೆ ಪ್ರೊಮೋಷನ್ ಡಿಸ್ಪ್ಲೇ. ಅಂದರೆ ಸ್ಟ್ಯಾಂಡರ್ಡ್ ಮಾಡೆಲ್. ಈಗ ಪ್ರೊ ರೂಪಾಂತರಗಳಂತೆಯೇ 120Hz ವರೆಗಿನ ರಿಫ್ರೆಶ್ ರೇಟ್ ಸ್ಕ್ರೀನ್ನೊಂದಿಗೆ ಬಂದಿದೆ. ಐಫೋನ್ 17 (ಮೂಲ ಮಾದರಿ) ಅನ್ನು ಹೆಚ್ಚು ಬಾಳಿಕೆ, ವಿನ್ಯಾಸ ಸುಧಾರಣೆಗಳು ಮತ್ತು ಉತ್ತಮ ಕಾರ್ಯಕ್ಷಮತೆಯೊಂದಿಗೆ ಪರಿಚಯಿಸಲಾಗಿದೆ.
- ಡಿಸ್ಪ್ಲೇ: 6.3-ಇಂಚಿನ XDR OLED, 120Hz ರಿಫ್ರೆಶ್ ರೇಟ್
- ಪ್ರೊಸೆಸರ್: A19 ಚಿಪ್‌ಸೆಟ್
- ಕಲರ್ಸ್: ಐದು ಬಣ್ಣಗಳಲ್ಲಿ ಲಭ್ಯ. ಲ್ಯಾವೆಂಡರ್, ಮಿಸ್ಟ್ ಬ್ಲ್ಯೂ, ಬ್ಲ್ಯಾಕ್, ವೈಟ್ ಮತ್ತು ಸೇಜ್
- ಕ್ಯಾಮೆರಾ: 48MP ಡ್ಯುಯಲ್ ಫ್ಯೂಷನ್ ರಿಯರ್ ಕ್ಯಾಮೆರಾ ಸಿಸ್ಟಮ್, 18MP ಫ್ರಂಟ್ ಕ್ಯಾಮೆರಾ
- 3000 ನಿಟ್ಸ್ ಪೀಕ್ ಬ್ರೈಟ್‌ನೆಸ್
- ಸ್ಟೋರೇಜ್: 256 GB ಆರಂಭಿಕ ಸ್ಟೋರೇಜ್
- ಆ್ಯಪಲ್ ಇಂಟೆಲಿಜೆನ್ಸ್
- ಫಾಸ್ಟ್ ವೈರ್ಡ್ ಚಾರ್ಜಿಂಗ್
- ಬೆಲೆ: ಭಾರತದಲ್ಲಿ ಐಫೋನ್ 17 256 GB ರೂಪಾಂತರದ ಬೆಲೆಯನ್ನು 82,900 ರೂ.ಗಳಿಗೆ ನಿಗದಿಪಡಿಸಲಾಗಿದೆ (ಅಮೆರಿಕದಲ್ಲಿ 799 ಡಾಲರ್ನಿಂದ ಪ್ರಾರಂಭ).
ಐಫೋನ್ 17 ಏರ್: ಕಂಪನಿ ತನ್ನ ಐಫೋನ್ ಇತಿಹಾಸದಲ್ಲಿಯೇ ಅತ್ಯಂತ ತೆಳುವಾದ ಐಫೋನ್ ಆಗಿರುವ ಐಫೋನ್ ಏರ್ ಅನ್ನು ಇದೇ ಮೊದಲ ಬಾರಿಗೆ ಪರಿಚಯಿಸಿದೆ. ಇದನ್ನು 5.6 ಮಿಮೀ ದಪ್ಪದೊಂದಿಗೆ ಬಿಡುಗಡೆ ಮಾಡಿದೆ. ಈ ಫೋನ್‌ಗಳಲ್ಲಿ A19 ಪ್ರೊ ಚಿಪ್ ಅಳವಡಿಸಲಾಗಿದೆ. 48 MP ಹೊಂದಿರುವ ರಿಯರ್ನಲ್ಲಿ ಒಂದೇ ಒಂದು ಕ್ಯಾಮೆರಾ ಇದೆ. ಫ್ರಂಟ್ನಲ್ಲಿ 18 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಫೋನ್‌ಗಳನ್ನು ಇ-ಸಿಮ್‌ನೊಂದಿಗೆ ತರಲಾಗಿದೆ.

- ಅತ್ಯಂತ ತೆಳುವಾದ ಐಫೋನ್
- ಡಿಸ್ಪ್ಲೇ: 6.5-ಇಂಚು
- ದಪ್ಪ: 5.6 ಮಿಮೀ
- ಪ್ರೊಸೆಸರ್: A19
- ಕ್ಯಾಮೆರಾ: 48 MP
- ಇ-ಸಿಮ್
- ಕಲರ್ಸ್: ಸ್ಪೇಸ್ ಬ್ಲ್ಯಾಕ್, ಕ್ಲೌಡ್ ವೈಟ್, ಲೈಟ್ ಗೋಲ್ಡ್, ಸ್ಕೈ ಬ್ಲೂ
- ಸ್ಟೋರೇಜ್: 256, 512GB ಮತ್ತು 1TB
- ಬೆಲೆ: 256GB ರೂಪಾಂತರಕ್ಕೆ ರೂ. 1,19,900. 512GB, 1TB ರೂಪಾಂತರಗಳು ಸಹ ಲಭ್ಯ.
ಈ ಫೋನ್‌ಗಳನ್ನು ಶೇ 80ರಷ್ಟು ಮರುಬಳಕೆಯ ಟೈಟಾನಿಯಂ ವಸ್ತುಗಳಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಫೋನ್‌ಗಳು ಹೆಚ್ಚು ಬಾಳಿಕೆ ಬರುತ್ತವೆ ಎಂದು ಆಪಲ್ ಸಿಇಒ ಟಿಮ್ ಕುಕ್ ಹೇಳಿದ್ದಾರೆ.
ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್: ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಐಒಎಸ್ 26ನಲ್ಲಿ ಕಾರ್ಯನಿರ್ವಹಿಸುತ್ತವೆ. 17 ಪ್ರೊ 6.3-ಇಂಚಿನ ಡಿಸ್ಪ್ಲೇ ಹೊಂದಿದೆ. ಐಫೋನ್ 17 ಪ್ರೊ ಮ್ಯಾಕ್ಸ್ ದೊಡ್ಡ ಡಿಸ್ಪ್ಲೇ ಹೊಂದಿದೆ. ಅಂದ್ರೆ ಇದು 6.9-ಇಂಚಿನ ಡಿಸ್ಪ್ಲೇ ಹೊಂದಿದೆ. ಕಂಪನಿಯು ಅಲ್ಯೂಮಿನಿಯಂ ಬಾಡಿ ಹೊಂದಿರುವ ಈ ಫೋನ್‌ಗಳನ್ನು ತಂದಿದೆ. ಹಿಂದಿನ ಫೋನ್‌ಗಳಿಗಿಂತ ಇದು ದೊಡ್ಡ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
ಈ ಎರಡು ಫೋನ್‌ಗಳಲ್ಲಿ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಅನ್ನು ಹೊಸದಾಗಿ ಪರಿಚಯಿಸಲಾಗಿದೆ. ಈ ಫೋನ್‌ಗಳು ಸಿಲ್ವರ್, ಡೀಪ್ ಬ್ಲೂ ಮತ್ತು ಕಾಸ್ಮಿಕ್ ಆರೆಂಜ್ ಬಣ್ಣಗಳಲ್ಲಿ ಲಭ್ಯವಿರುತ್ತವೆ. ಎ 19 ಪ್ರೊ ಚಿಪ್ ಅನ್ನು ಅಳವಡಿಸಲಾಗಿದೆ. ಹಿಂದಿನ ಫೋನ್‌ಗಳಿಗಿಂತ ಇವು ಹೆಚ್ಚು ಸ್ಕ್ರಾಚ್ ನಿರೋಧಕವಾಗಿರುತ್ತವೆ ಎಂದು ಕಂಪನಿ ಹೇಳಿದೆ. ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ನೀಡಲಾಗಿದೆ. ಮೂರೂ 48 ಎಂಪಿ ಕ್ಯಾಮೆರಾಗಳನ್ನು ಹೊಂದಿವೆ. ಐಫೋನ್‌ನ ಹಿಂಭಾಗದಲ್ಲಿರುವ ಎಲ್ಲಾ ಕ್ಯಾಮೆರಾಗಳು ಒಂದೇ ಮೆಗಾಪಿಕ್ಸೆಲ್‌ಗಳನ್ನು ಹೊಂದಿರುವುದು ಇದೇ ಮೊದಲು.ಈ ಮೂರು ಕ್ಯಾಮೆರಾಗಳು ಫ್ಯೂಷನ್ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತವೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 18 ಎಂಪಿ ಕ್ಯಾಮೆರಾವನ್ನು ನೀಡಲಾಗಿದೆ.

ಹಿಂದಿನ ಫೋನ್‌ಗಳಿಗೆ ಹೋಲಿಸಿದರೆ ಇದು ಸುಧಾರಿತ ವಿಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ನೀಡಿದೆ ಎಂದು ಕಂಪನಿ ತಿಳಿಸಿದೆ. 17 ಪ್ರೊ 512 ಜಿಬಿ ಮತ್ತು 1 ಟಿಬಿ ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದ್ದರೆ, 17 ಪ್ರೊ ಮ್ಯಾಕ್ಸ್ 512 ಜಿಬಿ, 1 ಟಿಬಿ ಮತ್ತು 2 ಟಿಬಿ ರೂಪಾಂತರಗಳಲ್ಲಿಯೂ ಲಭ್ಯವಿರುತ್ತದೆ. ಐಫೋನ್ 17 ಪ್ರೊ 256 ಜಿಬಿ ಬೆಲೆ ರೂ. 1,34,900 ಮತ್ತು ಐಫೋನ್ ಪ್ರೊ ಮ್ಯಾಕ್ಸ್ 256 ಜಿಬಿ ಬೆಲೆ ರೂ. 1,49,900. ಇನ್ನು 256GB ಬೇಸ್ ರೂಪಾಂತರಕ್ಕೆ ಅಮೆರಿದಲ್ಲಿ iPhone 17 Pro 1,099 ಡಾಲರ್ರಿಂದ ಪ್ರಾರಂಭವಾಗುತ್ತದೆ. ಆದರೆ 256GB ಬೇಸ್ ರೂಪಾಂತರ iPhone 17 Pro Max ಅಮೆರಿಕದಲ್ಲಿ 1,199 ರಿಂದ ಪ್ರಾರಂಭವಾಗುತ್ತದೆ.
- ಡಿಸ್‌ಪ್ಲೇ: ಪ್ರೊ - 6.3 ಇಂಚು; ಪ್ರೊ ಮ್ಯಾಕ್ಸ್ - 6.9 ಇಂಚು
- ಕಲರ್ಸ್: ಸಿಲ್ವರ್, ಡೀಪ್ ಬ್ಲೂ, ಕಾಸ್ಮಿಕ್ ಆರೆಂಜ್
- ಬೆಲೆ: ಪ್ರೊ 256GB - ರೂ. 1,34,900; ಪ್ರೊ ಮ್ಯಾಕ್ಸ್ 256GB - ರೂ. 1,49,900 512GB, 1TB, 2TB ರೂಪಾಂತರಗಳು ಸಹ ಲಭ್ಯವಿದೆ.