ಆ್ಯಪಲ್​ ಇತಿಹಾಸದಲ್ಲೇ ಇಂಥದ್ದೊಂದು ಸ್ಲಿಮ್​ iPhone ಬಂದಿದ್ದು ಇದೇ ಮೊದಲು!

ಆ್ಯಪಲ್​ ಇತಿಹಾಸದಲ್ಲೇ ಇಂಥದ್ದೊಂದು ಸ್ಲಿಮ್​ iPhone ಬಂದಿದ್ದು ಇದೇ ಮೊದಲು!
By Published : September 10, 2025 at 1:34 PM IST

Apple iPhone 17 Air Launched: ಕಾಯುವಿಗೆ ಕೊನೆಗೂ ಕೊನೆಗೊಂಡಿದೆ. ಆ್ಯಪಲ್ ಕಂಪನಿ ಸೆಪ್ಟೆಂಬರ್ 9ಂದು ತನ್ನ 'Awe ಡ್ರಾಪಿಂಗ್' ಬಿಡುಗಡೆ ಕಾರ್ಯಕ್ರಮದಲ್ಲಿ ಹೊಸ ಐಫೋನ್ 17 ಸೀರಿಸ್​ ಅನಾವರಣಗೊಳಿಸಿದೆ. ಈ ಸೀರಿಸ್‌ನಲ್ಲಿ ನಾಲ್ಕು ಹೊಸ ಐಫೋನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಸೇರಿವೆ. ಇದೇ ಸಂದರ್ಭದಲ್ಲಿ ಅತ್ಯಂತ ತೆಳುವಾದ ಐಫೋನ್ 17 ಏರ್ ರಿಲೀಸ್ ಮಾಡಿದ್ದು, ಕೇವಲ 5.6 ಮಿ.ಮೀ ದಪ್ಪವಿದೆ.

ಐಫೋನ್ 17 ಏರ್ ಬೆಲೆ: ಐಫೋನ್ 17 ಏರ್ ಅನ್ನು $999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ 256GB ಸ್ಟೋರೇಜ್​ನೊಂದಿಗೆ ಐಫೋನ್ 17 ಏರ್‌ನ ಮೂಲ ರೂಪಾಂತರದ ಬೆಲೆ ರೂ. 1,19,900. 512GB ರೂಪಾಂತರವನ್ನು ರೂ.1,39,900 ಮತ್ತು 1TB ರೂಪಾಂತರವನ್ನು ರೂ.1,59,900ಗೆ ಬಿಡುಗಡೆ ಮಾಡಲಾಗಿದೆ. ಐಫೋನ್ 17 ಏರ್‌ನ ಪ್ರೀ-ಆರ್ಡರ್‌ಗಳು ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗುತ್ತವೆ. ಇದರ ಡೆಲಿವರಿ ವೇಳಾಪಟ್ಟಿ ಸೆಪ್ಟೆಂಬರ್ 19ರಿಂದ ಶುರುವಾಗುತ್ತದೆ.

ಆ್ಯಪಲ್ ಐಫೋನ್ 17 ಏರ್ ಫೀಚರ್ಸ್​: ಐಫೋನ್ 17 ಏರ್ ಅನ್ನು ಶೇ.80ರಷ್ಟು ಮರುಬಳಕೆಯ ಟೈಟಾನಿಯಂನಿಂದ ತಯಾರಿಸಲಾಗಿದೆ. 6.5-ಇಂಚಿನ ಪ್ರೊಮೋಷನ್ ಡಿಸ್ಪ್ಲೇ ಮತ್ತು ಎರಡೂ ಬದಿಗಳಲ್ಲಿ ಸೆರಾಮಿಕ್ ಶೀಲ್ಡ್ ಹೊಂದಿದ್ದು, ಹಿಂಭಾಗವನ್ನು ನಾಲ್ಕು ಪಟ್ಟು ಹೆಚ್ಚು ಬಿರುಕು-ನಿರೋಧಕವಾಗಿಸುತ್ತದೆ.

ಸ್ಲಿಮ್ ವಿನ್ಯಾಸದ ಹೊರತಾಗಿಯೂ iOS 26ರ ಅಡಾಪ್ಟಿವ್ ಪವರ್ ವೈಶಿಷ್ಟ್ಯ ಮತ್ತು ಹೊಸ N1 ವೈರ್‌ಲೆಸ್ ಚಿಪ್ ಶೇ.30ರಷ್ಟು ಕಡಿಮೆ ಶಕ್ತಿಯ ಬಳಕೆಯೊಂದಿಗೆ ಇದನ್ನು ಅತ್ಯಂತ ಶಕ್ತಿ-ಸಮರ್ಥ ಐಫೋನ್ ಮಾಡುತ್ತದೆ ಎಂದು ಆ್ಯಪಲ್ ಹೇಳಿಕೊಂಡಿದೆ.

ಇದರೊಳಗೆ ಎರಡನೇ-ಜನ್ ಡೈನಾಮಿಕ್ ಕ್ಯಾಚಿಂಗ್‌ನೊಂದಿಗೆ 6-ಕೋರ್ CPU ಮತ್ತು 5-ಕೋರ್ GPU ಇದೆ. ಮ್ಯಾಕ್‌ಬುಕ್ ಪ್ರೊ-ಲೆವೆಲ್ ಪರ್ಫಾರ್ಮನ್ಸ್​ ಮತ್ತು ಸುಧಾರಿತ ಆನ್-ಡಿವೈಸ್ AI ಸಾಮರ್ಥ್ಯಗಳಿವೆ. ಕ್ಯಾಮೆರಾ ಸಿಸ್ಟಮ್​ 12MP 2x ಟೆಲಿಫೋಟೋ ಲೆನ್ಸ್ ಮತ್ತು ಹೊಸ 18MP ಸೆಂಟರ್ ಸ್ಟೇಜ್ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಟ್ರಾ-ಸ್ಲಿಮ್ ವಿನ್ಯಾಸದಲ್ಲಿ ಸುಧಾರಿತ ಇಮೇಜಿಂಗ್ ನೀಡುತ್ತದೆ.

ಇದರಲ್ಲಿ ಇ-ಸಿಮ್ ಮಾತ್ರ ಮತ್ತು ಅಡಾಪ್ಟಿವ್ ಪವರ್ ಮೋಡ್‌ನಂತಹ ಹೊಸ ಪವರ್​-ಸೇವಿಂಗ್​ ವೈಶಿಷ್ಟ್ಯಗಳಿವೆ. ಅಷ್ಟೇ ಅಲ್ಲದೇ, ಐಫೋನ್ 17 ಏರ್ ದಿನವಿಡೀ ಬ್ಯಾಟರಿ ಬಾಳಿಕೆ ಪಡೆಯುತ್ತದೆ ಎಂಬುದು ಕಂಪನಿಯ ಮಾತು.

📚 Related News