ತಾಯಿಯು ಮಗುವಿಗೆ ಎದೆಹಾಲುಣಿಸುವುದು ಇಬ್ಬರಿಗೂ ಒಳ್ಳೆಯದು: ಎಷ್ಟು ವರ್ಷದವರೆಗೆ ಮಗುವಿಗೆ ಹಾಲುಣಿಸಬಹುದು?

ತಾಯಿಯು ಮಗುವಿಗೆ ಎದೆಹಾಲುಣಿಸುವುದು ಇಬ್ಬರಿಗೂ ಒಳ್ಳೆಯದು: ಎಷ್ಟು ವರ್ಷದವರೆಗೆ ಮಗುವಿಗೆ ಹಾಲುಣಿಸಬಹುದು?
By Published : September 10, 2025 at 5:11 PM IST

Breastfeeding Benefits To Mother And Child: ಸ್ತನ್ಯಪಾನವು ಮಗುವಿಗೆ ಅಮೃತಕ್ಕೆ ಸಮಾನವಾಗಿದೆ. ಎಲ್ಲಾ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತಾಯಿಯ ಹಾಲು, ಶಿಶುಗಳನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ತಾಯಂದಿರು ಕೆಲಸ, ಇತರ ಕಾರಣಗಳಿಂದಾಗಿ ಕೆಲವು ತಿಂಗಳುಗಳಲ್ಲಿ ತಮ್ಮ ಶಿಶುಗಳಿಗೆ ಹಾಲುಣಿಸುವುದನ್ನು ನಿಲ್ಲಿಸಿ ಫಾರ್ಮುಲಾ ಹಾಲು ನೀಡಲು ಆರಂಭಿಸುತ್ತಾರೆ.

ತಜ್ಞರು ಹೀಗೆ ಮಾಡುವುದು ಮಗು ಹಾಗೂ ತಾಯಿ ಇಬ್ಬರ ಆರೋಗ್ಯಕ್ಕೂ ಒಳ್ಳೆಯದಲ್ಲ. ಒಂದು ನಿರ್ದಿಷ್ಟ ಸಮಯದವರೆಗೆ ಮಕ್ಕಳಿಗೆ ಹಾಲುಣಿಸುವುದು ಸೂಕ್ತ. ಮಕ್ಕಳಿಗೆ ತಾಯಂದಿರು ಹಾಲುಣಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು? ಎಷ್ಟು ವರ್ಷದವರೆಗೆ ಮಕ್ಕಳಿಗೆ ಹಾಲುಣಿಸಬಹುದು ಎಂಬುದನ್ನು ತಿಳಿಯೋಣ.

ಮಗುವಿಗೆ ಹಾಲುಣಿಸುವುದರಿಂದಾಗುವ ಪ್ರಯೋಜನಗಳು:

ಯಾವಾಗಲೂ ತಾಜಾ: ಆಹಾರವು ತಾಜಾವಾಗಿದ್ದಷ್ಟೂ ಯಾವುದೇ ವಯಸ್ಸಿನ ಜನರಿಗೆ ಆರೋಗ್ಯಕರವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ತಜ್ಞರು ಹೇಳುವಂತೆ ಅದೇ ನಿಯಮ ಶಿಶುಗಳಿಗೂ ಅನ್ವಯಿಸುತ್ತದೆ. ತಾಯಿಯ ಹಾಲು ಯಾವಾಗಲೂ ತಾಜಾವಾಗಿದ್ದು, ಮಗುವಿಗೆ ಸರಿಯಾದ ತಾಪಮಾನದಲ್ಲಿರುತ್ತದೆ ಹಾಗೂ ಕುಡಿಯುವುದರಿಂದ ಮಗು ಆರೋಗ್ಯವಾಗಿರುತ್ತದೆ.

BREASTFEEDING BENEFITS TO CHILD BREASTFEEDING BENEFITS TO MOTHER WHY BREASTFEED IMPORTANT FOR CHILD ಸ್ತನ್ಯಪಾನ

ಜೀರ್ಣಾಂಗ ವ್ಯವಸ್ಥೆ ಸದೃಢ: ಮಗುವಿಗೆ ಜನ್ಮ ನೀಡಿದ ನಂತರ ನಾಲ್ಕರಿಂದ ಐದು ದಿನಗಳವರೆಗೆ ತಾಯಿಯ ಸ್ತನಗಳಲ್ಲಿ ಉತ್ಪತ್ತಿಯಾಗುವ ಹಾಲನ್ನು 'ಪರಿವರ್ತನೆಯ ಹಾಲು' ಎಂದು ಕರೆಯಲಾಗುತ್ತದೆ. ಮಗು ಜನನದ ನಂತರ ತಾಯಿಯ ಸ್ತನಗಳಿಂದ ಹೊರಬರುವ ಮೊದಲ ಹಾಲು ದಪ್ಪ, ಹಳದಿ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಮಗುವಿನ ರೋಗನಿರೋಧಕ ವ್ಯವಸ್ಥೆಗೆ ಅಗತ್ಯವಾದ ಪ್ರತಿಕಾಯಗಳು ಹಾಗೂ ಉತ್ಕರ್ಷಣ ನಿರೋಧಕಗಳು. ಈ ಹಾಲು ಮಗುವನ್ನು ಯಾವುದೇ ಅಲರ್ಜಿ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ. ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎದೆಹಾಲನ್ನು ಮಗುವಿಗೆ ನೀಡುವುದು ಅವರ ಆರೋಗ್ಯ ಮತ್ತು ಬೆಳವಣಿಗೆಗೆ ಒಳ್ಳೆಯದು.

ಮೆದುಳು ಚುರುಕು: ನಡೆಸಿದ ಅಧ್ಯಯನವು ಎದೆಹಾಲು ಕುಡಿದ ಮಕ್ಕಳ ಮೆದುಳು ಹೆಚ್ಚು ಸಕ್ರಿಯವಾಗಿರುತ್ತದೆ ಎಂದು ಕಂಡುಹಿಡಿದಿದೆ. ಅಂತಹ ಮಕ್ಕಳು ಅಧ್ಯಯನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಮಕ್ಕಳ ಉತ್ತಮ ಶಿಕ್ಷಣ, ಭವಿಷ್ಯದಲ್ಲಿ ಅವರ ಬೆಳವಣಿಗೆಗೆ ಸುಮಾರು 6 ತಿಂಗಳ ಕಾಲ ಹಾಲುಣಿಸುವುದು ಅವಶ್ಯವಾಗಿದೆ.

ಪೋಷಕಾಂಶಗಳ ನಿಧಿ: ತಾಯಿಯ ಹಾಲಿನಲ್ಲಿ ಮಗುವಿನ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು ಹಾಗೂ ಕೊಬ್ಬುಗಳಂತಹ ಅನೇಕ ಪೋಷಕಾಂಶಗಳಿವೆ. ಇವೆಲ್ಲವೂ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ತಾಯಿಯ ಹಾಲು ಮಗುವಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಮಕ್ಕಳಲ್ಲಿ ಮಲಬದ್ಧತೆ ಹಾಗೂ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತಡೆಯುತ್ತದೆ.

ವಯಸ್ಸಿಗೆ ಅನುಗುಣವಾಗಿ ತೂಕ: ಬೆಳೆಯುತ್ತಿರುವ ಮಗುವಿನ ವಯಸ್ಸಿಗೆ ಅನುಗುಣವಾಗಿ ತೂಕವನ್ನು ಹೆಚ್ಚಿಸುವಲ್ಲಿ ಸ್ತನ್ಯಪಾನ ಪ್ರಮುಖ ಪಾತ್ರ ವಹಿಸುತ್ತದೆ. ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳ ಅಧ್ಯಯನದ ಪ್ರಕಾರ, ಸ್ತನ್ಯಪಾನ ಮಾಡುವ ಶಿಶುಗಳಿಗೆ ಆಸ್ತಮಾ, ಬೊಜ್ಜು, ಟೈಪ್-1 ಮಧುಮೇಹ, ಹಠಾತ್ ಶಿಶು ಸಾವಿನ ಸಿಂಡ್ರೋಮ್ (SIDS) ಕಡಿಮೆ ಅಪಾಯ, ಕಿವಿ ಸೋಂಕು ಹಾಗೂ ಹೊಟ್ಟೆಯ ಹುಳುಗಳಿಂದ ಬಳಲುತ್ತಿರುವ ಸಾಧ್ಯತೆಯೂ ಕಡಿಮೆ ಆರೋಗ್ಯ ತಜ್ಞರು ತಿಳಿಸುತ್ತಾರೆ.

ಆರು ತಿಂಗಳವರೆಗೆ ಸ್ತನ್ಯಪಾನ ಅಗತ್ಯ: ಆರು ತಿಂಗಳ ವಯಸ್ಸಿನವರೆಗೆ ಸ್ತನ್ಯಪಾನವು ಮಗುವಿಗೆ ಉತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ಆರು ತಿಂಗಳ ನಂತರ, ಅನೇಕ ತಾಯಂದಿರು ತಮ್ಮ ಮಕ್ಕಳಿಗೆ ಹಣ್ಣುಗಳು ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ನೀಡುತ್ತಾರೆ. ಆದರೆ, ಕೆಲವು ತಾಯಂದಿರು ಈ ಪ್ರಕ್ರಿಯೆಯಲ್ಲಿ ಹಾಲು ನೀಡುವುದನ್ನು ನಿಲ್ಲಿಸುತ್ತಾರೆ. ಇದರ ಪರಿಣಾಮವಾಗಿ ಮಗುವಿಗೆ ಎಲ್ಲಾ ಪೋಷಕಾಂಶಗಳು ಸಿಗುವುದಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಆರು ತಿಂಗಳ ನಂತರವೂ ವಿವಿಧ ಆಹಾರಗಳ ಜೊತೆಗೆ ಸ್ತನ್ಯಪಾನ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಕನಿಷ್ಠ ಒಂದು ವರ್ಷದವರೆಗೆ ತಾಯಿಯು ಮಗುವಿಗೆ ಎದೆಹಾಲುಣಿಸುವುದು ಇಬ್ಬರಿಗೂ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬಾಂಧವ್ಯ ಗಟ್ಟಿಯಾಗುತ್ತದೆ: ನಡೆಸಿದ ಅಧ್ಯಯನವು ಎದೆಹಾಲುಣಿಸುವಿಕೆಯು ತಾಯಿ ಹಾಗೂ ಮಗುವಿನ ನಡುವೆ ಬಲವಾದ ಭಾವನಾತ್ಮಕ ಬಂಧವನ್ನು ಸೃಷ್ಟಿಸುತ್ತದೆ. ಎದೆಹಾಲುಣಿಸುವ ಸಮಯದಲ್ಲಿ ಮಗು ತಾಯಿಯ ಪ್ರೀತಿ, ವಾತ್ಸಲ್ಯ ಭದ್ರವಾಗುತ್ತದೆ. ತಾಯಿಯ ಮಡಿಲಿಗಿಂತ ಸುರಕ್ಷಿತ ಸ್ಥಳವಿಲ್ಲ. ಈ ಎಲ್ಲಾ ಭಾವನೆಗಳು ಮಗುವಿಗೆ ತಾಯಿಯ ಕಡೆಗೆ ಹಾಗೂ ತಾಯಿಯ ಮಗುವಿನ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವಿನ ಬಂಧವನ್ನು ಬಲಪಡಿಸುತ್ತದೆ.

ಮತ್ತಷ್ಟು ಪ್ರಯೋಜನಗಳು:

  • ತಜ್ಞರು ಎದೆಹಾಲುಣಿಸುವಿಕೆಯು ಭವಿಷ್ಯದಲ್ಲಿ ಕ್ಯಾನ್ಸರ್ ಮತ್ತು ಹೃದಯ ಸಮಸ್ಯೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
  • ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸ್ತನ್ಯಪಾನವು ಪ್ರಮುಖ ಪಾತ್ರ ವಹಿಸುತ್ತದೆ.
  • ಎಲ್ಲ ರೀತಿಯ ಲಸಿಕೆಗಳು ಎದೆಹಾಲುಣಿಸುವ ಶಿಶುಗಳ ದೇಹದ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.
  • ಎದೆಹಾಲುಣಿಸಿದರೆ ಮಕ್ಕಳಿಗೆ ಮಧುಮೇಹ ಬರುವ ಸಾಧ್ಯತೆ ಮೂರು ಪಟ್ಟು ಕಡಿಮೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.
  • ಮಗು ಹಾಲುಣಿಸುವಾಗ ತಾಯಿಯ ಮೆದುಳಿನಿಂದ ಸಂಕೇತಗಳನ್ನು ಕಳುಹಿಸಲಾಗುತ್ತದೆ. ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಹಾಲಿನ ಹರಿವಿಗೆ ಸಹಾಯ ಮಾಡುತ್ತದೆ. ಮಾತ್ರವಲ್ಲದೇ ಗರ್ಭಾಶಯವು ವೇಗವಾಗಿ ಸಂಕುಚಿತಗೊಳ್ಳಲು ಸಹಾಯ ಮಾಡುತ್ತದೆ.
  • ಹೆರಿಗೆಯ ನಂತರ ರಕ್ತಸ್ರಾವ ಕಡಿಮೆ ಮಾಡುತ್ತದೆ. ಹೆಚ್ಚಿನ ತಾಯಂದಿರ ಸಾವುಗಳಿಗೆ ಮುಖ್ಯ ಕಾರಣ ಎಂದರೆ ರಕ್ತಸ್ರಾವ ನಿರ್ಬಂಧಿಸುವುದು.
  • ಸ್ತನ್ಯಪಾನವು ಪ್ರಸವಾನಂತರದ ಒತ್ತಡ, ಖಿನ್ನತೆ ಹಾಗೂ ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸ್ತನ್ಯಪಾನವು ತಾಯಂದಿರ ತೂಕವನ್ನು ಹೆಚ್ಚು ಸುಲಭವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಲುಣಿಸುವ ಸಮಯದಲ್ಲಿ ತಾಯಿಯ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸುತ್ತದೆ. ತಾಯಂದಿರಿಗೆ ತೂಕ ಇಳಿಸಿಕೊಳ್ಳಲು ಸುಲಭವಾಗುತ್ತದೆ.
  • ನಡೆಸಿದ ಅಧ್ಯಯನವು ಹಾಲು ಕುಡಿಯುವುದರಿಂದ ಟೈಪ್- 2 ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅಧಿಕ ಕೊಲೆಸ್ಟ್ರಾಲ್ ಅಪಾಯ ಕಡಿಮೆ ಮಾಡುತ್ತದೆ ಎಂದು ತಿಳಿಸುತ್ತದೆ.
  • ಎದೆಹಾಲುಣಿಸುವುದರಿಂದ ಮಕ್ಕಳು ಚೆನ್ನಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಉತ್ತಮ ಮಾನಸಿಕ ಆರೋಗ್ಯ ಹಾಗೂ ಭಾವನಾತ್ಮಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.

ಮಗುವಿಗೆ ಎದೆಹಾಲುಣಿಸಿದಾಗ ಮುಟ್ಟು ಸ್ವಲ್ಪ ವಿಳಂಬವಾಗುತ್ತದೆ. ತಕ್ಷಣವೇ ಗರ್ಭಿಣಿಯಾಗುವ ಸಾಧ್ಯತೆಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಾಶಯದ ಕ್ಯಾನ್ಸರ್ ಬರುವ ಅಪಾಯ ಕಡಿಮೆ ಹಾಗೂ ಹೃದ್ರೋಗ, ಆಸ್ಟಿಯೊಪೊರೋಸಿಸ್ ಬರುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ ಅನ್ನು ವೀಕ್ದಿಸಬಹುದು (ಸಂಶೋಧನಾ ವರದಿ)

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

📚 Related News