ಹೃದಯಾಘಾತಕ್ಕೂ ಮುನ್ನ ಮಕ್ಕಳಲ್ಲಿ ಈ ಚಿಹ್ನೆಗಳು ಕಾಣಿಸಿದರೆ ನಿರ್ಲಕ್ಷಿಸಬೇಡಿ: ವೈದ್ಯರ ಸಲಹೆ

ಹೃದಯಾಘಾತಕ್ಕೂ ಮುನ್ನ ಮಕ್ಕಳಲ್ಲಿ ಈ ಚಿಹ್ನೆಗಳು ಕಾಣಿಸಿದರೆ ನಿರ್ಲಕ್ಷಿಸಬೇಡಿ: ವೈದ್ಯರ ಸಲಹೆ
By Published : September 9, 2025 at 7:18 PM IST

Signs of Heart Attack in Children: ದಿನದಿಂದ ದಿನಕ್ಕೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ತಪ್ಪಾದ ಆಹಾರ ಕ್ರಮದ ಕೊರತೆ, ಕೆಟ್ಟ ಜೀವನಶೈಲಿ, ಒತ್ತಡ ಹಾಗೂ ಅನೇಕ ಆರೋಗ್ಯ ಸಮಸ್ಯೆಗಳು ಇದಕ್ಕೆ ಕಾರಣಗಳಾಗಿವೆ. ಹಿರಿಯರಿಂದ ಹಿಡಿದು ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊದಲು ಕಾಣಿಸಿಕೊಳ್ಳುವ ಚಿಹ್ನೆಗಳು ಯಾವುವು ಎಂಬುದನ್ನು ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ವಯಸ್ಕರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲಿಯೂ ಕಂಡುಬರುತ್ತದೆ. ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ಹಾಗೂ ಸ್ನಾಯುಗಳಿಗೆ ಹಾನಿಯಾದಾಗ ಹೃದಯಾಘಾತ ಸಂಭವಿಸುತ್ತದೆ. ಪರಿಧಮನಿ ಕಾಯಿಲೆಯು ಅಪಧಮನಿಯಲ್ಲಿ ಪ್ಲೇಕ್ ರಚನೆಯಿಂದಾಗಿ ಉಂಟಾಗುತ್ತದೆ. ಅಪಧಮನಿ ಛಿದ್ರವಾಗುತ್ತದೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳುತ್ತದೆ. ಇದು ರಕ್ತದ ಹರಿವನ್ನು ತಡೆಯುತ್ತದೆ.

HEART ATTACKS CAUSES HEART ATTACK ಹೃದಯಾಘಾತ ಪ್ರಕರಣಗಳು ಹೃದಯಾಘಾತದ ಲಕ್ಷಣಗಳು

ರಕ್ತ ಹರಿವಿನ ಕೊರತೆಯಿಂದ ಆ ಪ್ರದೇಶದಲ್ಲಿನ ಹೃದಯ ಸ್ನಾಯು ಅಂಗಾಂಶಗಳು ಹಾನಿಗೊಳಗಾಗುತ್ತವೆ. ಇದು ಗಂಭೀರ ತೊಡಕುಗಳಿಗೆ ಅಥವಾ ಸಾವಿಗೆ ಕಾರಣವಾಗಬಹುದು. ಇದರಿಂದ ತಕ್ಷಣದ ವೈದ್ಯಕೀಯ ಸಹಾಯದ ಅಗತ್ಯವಿದೆ. ಯುವಕರ ಜೊತೆಗೆ ಮಕ್ಕಳು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಮಕ್ಕಳಲ್ಲಿ ಹೃದಯಾಘಾತದ ಪ್ರಕರಣಗಳು ಮತ್ತಷ್ಟು ವೇಗವಾಗಿ ಹೆಚ್ಚುತ್ತಿವೆ. ಇದರಿಂದ ಅದಕ್ಕಾಗಿಯೇ ಪೋಷಕರು ಈ ನಿಟ್ಟಿನಲ್ಲಿ ಜಾಗರೂಕರಾಗಿರಬೇಕು. ವೈದ್ಯರು ತಿಳಿಸುವ ಪ್ರಕಾರ, ಮಕ್ಕಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಂಡರೆ ಅವುಗಳನ್ನು ನಿರ್ಲಕ್ಷಿಸಬಾರದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೃದಯಾಘಾತದ ಬಗ್ಗೆ ವಿವರವಾಗಿ ತಿಳಿಯೋಣ.

ಯಾರಿಗೆ ಹೃದಯಾಘಾತದ ಅಪಾಯ ಹೆಚ್ಚು? ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ತಿಳಿಸುವ ಪ್ರಕಾರ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಹೃದಯಾಘಾತ ಹೆಚ್ಚುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಅನೇಕ ಕಾರಣಗಳಿವೆ. ಪುರುಷರು ಹಾಗೂ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ವಿಭಿನ್ನವಾಗಿವೆ. ಇತ್ತೀಚಿನ ದಿನಗಳಲ್ಲಿ ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಹೃದಯಾಘಾತವಾಗಬಹುದು. ಕಳೆದ ಮೂರು ವರ್ಷಗಳಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಹೃದಯಾಘಾತದ ಅಪಾಯವೂ ಹೆಚ್ಚಿದೆ.

HEART ATTACKS CAUSES HEART ATTACK ಹೃದಯಾಘಾತ ಪ್ರಕರಣಗಳು ಹೃದಯಾಘಾತದ ಲಕ್ಷಣಗಳು

ಚಿಕ್ಕವರಲ್ಲಿ ಹೃದಯಾಘಾತ ಏಕೆ ಆಗುತ್ತೆ? ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಕೆಟ್ಟ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರಗಳ ಅತಿಯಾದ ಸೇವನೆ ಮಾಡುವುದು. ಬೊಜ್ಜು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಕಡಿಮೆಯಾದ ಕ್ರೀಡಾ ಮನೋಭಾವ, ಮಾನಸಿಕ ಒತ್ತಡ ಹಾಗೂ ಹೆಚ್ಚಿದ ಬಿಪಿ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಮಕ್ಕಳಲ್ಲಿ ಕಾಣಿಸುವ ಹೃದಯಾಘಾತದ ಲಕ್ಷಣಗಳೇನು?

ತುಟಿಗಳ ಹತ್ತಿರ ನೀಲಿ ಕಲೆಗಳು: ದೇಹದಲ್ಲಿ ಆಮ್ಲಜನಕದ ಕೊರತೆಯಿಂದ ಹೃದಯವು ಸರಿಯಾದ ಪ್ರಮಾಣದ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಇದು ಸಂಭವಿಸುತ್ತದೆ.

  1. ಉಸಿರಾಟದ ತೊಂದರೆ
  2. ಸ್ವಲ್ಪ ನಡೆದರೂ ಉಸಿರಾಟದ ತೊಂದರೆ
  3. ಅಸಮರ್ಪಕ ಬೆಳವಣಿಗೆ
  4. ತಲೆತಿರುಗುವಿಕೆ
  5. ಎದೆ ನೋವು
  6. ಮಕ್ಕಳು ನರಗಳ ವೇಗವನ್ನು ಹೆಚ್ಚಿಸಿಕೊಂಡರೆ
  7. ತಲೆತಿರುಗುವಿಕೆ ಅನುಭವಿಸಿದರೆ

ಈ ರೀತಿಯ ಲಕ್ಷಣಗಳು ಕಾಣಿಸಿದರೆ, ತಕ್ಷಣವೇ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಮಕ್ಕಳಲ್ಲಿ ಈ ಸಮಸ್ಯೆಗಳು ಹೃದಯಾಘಾತದ ಲಕ್ಷಣಗಳಾಗಿರಬಹುದು. ಪೋಷಕರು ಜಾಗರೂಕರಾಗಿರಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಅಪಾಯದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

  • ಹೃದಯಾಘಾತದ ಲಕ್ಷಣಗಳು ಕಂಡುಬಂದರೆ, ಮಕ್ಕಳಲ್ಲಿ ಎಲ್ಲಾ ಹೃದಯ ಪರೀಕ್ಷೆಗಳನ್ನು ಮಾಡಿಸಿ.
  • ಮಕ್ಕಳು ಜಂಕ್ ಫುಡ್ ತಿನ್ನುವುದನ್ನು ತಡೆಯಿರಿ.
  • ಮಕ್ಕಳಿಗೆ ಆರೋಗ್ಯಕರ ಜೀವನಶೈಲಿಯನ್ನು ಕಲಿಸಿ.
  • ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ.
  • ಪೋಷಕರು ತಮ್ಮ ಮಕ್ಕಳ ಅಭ್ಯಾಸಗಳ ಕುರಿತು ಗಮನ ಹರಿಸಬೇಕು.
  • ಶಾಲೆ ಅಥವಾ ಅಧ್ಯಯನಕ್ಕೆ ಸಂಬಂಧಿಸಿದ ಯಾವುದಾದರೂ ವಿಷಯದ ಬಗ್ಗೆ ನೀವು ಒತ್ತಡಕ್ಕೊಳಗಾಗಿದ್ದರೆ ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ, ಅದನ್ನು ಪರಿಹರಿಸಲು ಪ್ರಯತ್ನಿಸಿ.

ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಅದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮಗುವಿಗೆ ಎದೆನೋವು ಇಲ್ಲವೇ ಉಸಿರಾಟದ ತೊಂದರೆ ಕಂಡುಬಂದರೆ, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು.

ಮಗುವಿನ ರಕ್ತದೊತ್ತಡ ಸಹ ಪರೀಕ್ಷಿಸಿ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಬೊಜ್ಜಿನಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಬೊಜ್ಜು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಿ. ಬೊಜ್ಜು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

📚 Related News