ಸಚಿನ್​ ತೆಂಡೂಲ್ಕರ್​ ಹೆಸರಲ್ಲಿದ್ದ ದಾಖಲೆ ಮುರಿದ ಜೋ ರೂಟ್​

ಸಚಿನ್​ ತೆಂಡೂಲ್ಕರ್​ ಹೆಸರಲ್ಲಿದ್ದ ದಾಖಲೆ ಮುರಿದ ಜೋ ರೂಟ್​
By Published : September 9, 2025 at 4:06 PM IST

Joe Root ODI Record: ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಭಾನುವಾರ ನಡೆದಿದ್ದ ಏಕದಿನ ಪಂದ್ಯದಲ್ಲಿ ಜೋ ರೂಟ್ ದಾಖಲೆ ಬರೆದಿದ್ದು, ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಈ ಪಂದ್ಯದಲ್ಲಿ ರೂಟ್ 96 ಎಸೆತಗಳಲ್ಲಿ ಶತಕ ಸಿಡಿಸಿದರು. ತಮ್ಮ ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿಗಳನ್ನು ಬಾರಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ರೂಟ್ ಅವರ 19 ನೇ ಶತಕವಾಗಿದೆ. ಇದರೊಂದಿಗೆ ಅವರು ಭಾರತದ ಮಾಜಿ ದಂತಕಥೆ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 19 ಶತಕಗಳನ್ನು ಸಿಡಿಸಿದ ದಾಖಲೆಯಲ್ಲಿ ರೂಟ್ ಈಗ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್ 194 ಏಕದಿನ ಪಂದ್ಯಗಳಲ್ಲಿ 19 ಶತಕಗಳನ್ನು ಬಾರಿಸಿದ್ದಾರೆ. ರೂಟ್ ಕೇವಲ 172ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 19 ಶತಕ ಸಿಡಿಸಿದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಈ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬಾಬರ್ ಕೇವಲ 102 ಇನ್ನಿಂಗ್ಸ್‌ಗಳಲ್ಲಿ 19 ಶತಕಗಳನ್ನು ಸಿಡಿಸಿದ್ದಾರೆ.

ಜೋ ರೂಟ್​

ಏಕದಿನ ಪಂದ್ಯಗಳಲ್ಲಿ ವೇಗದ 19 ಶತಕ ಸಿಡಿಸಿದ ಬ್ಯಾಟರ್​ಗಳು ​

  • ಬಾಬರ್ ಅಜಮ್ - 102 ಇನ್ನಿಂಗ್ಸ್
  • ಹಾಶಿಮ್ ಆಮ್ಲಾ - 104 ಇನ್ನಿಂಗ್ಸ್
  • ವಿರಾಟ್ ಕೊಹ್ಲಿ - 124 ಇನ್ನಿಂಗ್ಸ್
  • ಡೇವಿಡ್ ವಾರ್ನರ್ - 139 ಇನ್ನಿಂಗ್ಸ್
  • ಎಬಿ ಡಿವಿಲಿಯರ್ಸ್ - 171 ಇನ್ನಿಂಗ್ಸ್
  • ಜೋ ರೂಟ್ - 172 ಇನ್ನಿಂಗ್ಸ್
  • ರೋಹಿತ್ ಶರ್ಮಾ - 181 ಇನ್ನಿಂಗ್ಸ್
  • ಕ್ರಿಸ್ ಗೇಲ್ - 189 ಇನ್ನಿಂಗ್ಸ್
  • ರಾಸ್ ಟೇಲರ್ - 190 ಇನ್ನಿಂಗ್ಸ್
  • ಸಚಿನ್ ತೆಂಡೂಲ್ಕರ್ - 194 ಇನ್ನಿಂಗ್ಸ್

ವಿಶ್ವ ದಾಖಲೆ ಬರೆದ ಇಂಗ್ಲೆಂಡ್​: ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 414 ರನ್​​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು. ತಂಡದ ಪರ ರೂಟ್ (100) ಮತ್ತು ಜಾಕೋಬ್ ಬೆಥೆಲ್ (110) ಶತಕ ಸಿಡಿಸಿ ಮಿಂಚಿದರು. ಈ ದೊಡ್ಡ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 72 ರನ್‌ಗಳಿಗೆ ಆಲೌಟ್ ಆಯ್ತು. ಇದರಿಂದಾಗಿ ಇಂಗ್ಲೆಂಡ್​ ತಂಡ ಈ ಪಂದ್ಯವನ್ನು 342 ರನ್‌ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ವಿಶ್ವದಾಖಲೆ ಬರೆದಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡ ಎಂಬ ದಾಖಲೆ ಬರೆಯಿತು. ಇದಕ್ಕೂ ಮೊದಲು ಈ ವಿಶ್ವ ದಾಖಲೆ ಭಾರತದ ಹೆಸರಿನಲ್ಲಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 317 ರನ್‌ಗಳಿಂದ ಜಯಗಳಿಸಿತ್ತು, ಆದರೆ, ಇದೀಗ ಇಂಗ್ಲೆಂಡ್ ಭಾರತವನ್ನು ಹಿಂದಿಕ್ಕಿದೆ.

ಏಕದಿನ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದ ತಂಡಗಳು

342 - ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, 2025

317 - ಭಾರತ vs ಶ್ರೀಲಂಕಾ, 2023

309 - ಆಸ್ಟ್ರೇಲಿಯಾ vs ನೆದರ್‌ಲ್ಯಾಂಡ್ಸ್, 2023

304 - ಜಿಂಬಾಬ್ವೆ vs ಯುಎಸ್​ಎ, 2023

302 - ಭಾರತ vs ಶ್ರೀಲಂಕಾ, 2023

📚 Related News