ಇದು ಈಗ ಸುರಕ್ಷತೆಯಲ್ಲೂ ಬಲಿಷ್ಠ!: ಕ್ರ್ಯಾಶ್ ಟೆಸ್ಟ್‌.. ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್​ ಕಾರ್‌ಗೆ 4 ಸ್ಟಾರ್​ ಸೇಫ್ಟಿ ರೇಟಿಂಗ್!

ಇದು ಈಗ ಸುರಕ್ಷತೆಯಲ್ಲೂ ಬಲಿಷ್ಠ!: ಕ್ರ್ಯಾಶ್ ಟೆಸ್ಟ್‌.. ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್​ ಕಾರ್‌ಗೆ 4 ಸ್ಟಾರ್​ ಸೇಫ್ಟಿ ರೇಟಿಂಗ್!
By Published : September 9, 2025 at 2:04 PM IST | Updated : September 9, 2025 at 2:10 PM IST

Maruti Suzuki eVitara Crash Test: ಮಾರುತಿ ಸುಜುಕಿ ಎಂಬ ಹೆಸರನ್ನು ಕೇಳಿದಾಗ ಹಲವರಿಗೆ ಮೊದಲು ನೆನಪಿಗೆ ಬರುವುದೇ ಕೈಗೆಟುಕುವ ಕಾರು. ವಾಸ್ತವವಾಗಿ ಈ ಕಂಪನಿ ದಶಕಗಳಿಂದ ಭಾರತೀಯ ಕುಟುಂಬಗಳಿಗೆ ಬಜೆಟ್‌ಸ್ನೇಹಿ ಕಾರುಗಳನ್ನು ಒದಗಿಸುತ್ತಿದ್ದು, ಅವರಲ್ಲಿ ವಿಶ್ವಾಸ ತುಂಬುತ್ತಿದೆ. ಕೈಗೆಟುಕುವ ಬೆಲೆಯ ಜೊತೆಗೆ ಮಾರುತಿ ಕಾರುಗಳು ಕಡಿಮೆ ಸುರಕ್ಷತಾ ಮಾನದಂಡಗಳನ್ನು ಹೊಂದಿವೆ ಎಂಬ ಟೀಕೆ ಬಹಳ ಹಿಂದಿನಿಂದಲೂ ಇದೆ.

ರಸ್ತೆಯಲ್ಲಿನ ಸೌಕರ್ಯ ಮತ್ತು ಮೈಲೇಜ್ ಉತ್ತಮವಾಗಿದ್ದರೂ ಕ್ರ್ಯಾಶ್ ಟೆಸ್ಟ್​ಗಳಲ್ಲಿ ಅವು ಉತ್ತಮವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಅನೇಕ ವಿಮರ್ಶಕರು ಹೇಳಿದ್ದಾರೆ. ಆದರೆ ಕಾಲ ಬದಲಾಗಿದೆ. ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಗ್ರಾಹಕರು ಈಗ ಮೈಲೇಜ್ ಮತ್ತು ನೋಟವನ್ನು ಮಾತ್ರವಲ್ಲದೇ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಹೀಗಾಗಿ ಈ ಸೇಫ್ಟಿ ಫಸ್ಟ್ ಪಾಲಿಸಿ ಜನಜನಿತವಾಗಿದೆ.

EURO NCAP CRASH TEST MARUTI SUZUKI EVITARA FEATURES MARUTI SUZUKI EVITARA ENGINE MARUTI SUZUKI EVITARA DETAILS

ಈ ಬದಲಾವಣೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡ ಮಾರುತಿ ಸುಜುಕಿ ಕಳೆದ ಕೆಲವು ವರ್ಷಗಳಿಂದ ತನ್ನ ಕಾರುಗಳ ವಿನ್ಯಾಸ, ನಿರ್ಮಾಣ ಮತ್ತು ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ಪರಿಣಾಮವಾಗಿ ಒಂದು ಕಾಲದಲ್ಲಿ ಟೀಕಿಸಲು ಬಾಯಿ ತೆರೆದಿದ್ದ ಜನರೇ ಈಗ ಬಾಯಿ ಮುಚ್ಚಿಕೊಳ್ಳಬೇಕಾಗಿದೆ. ಪ್ರಪಂಚದಾದ್ಯಂತದ ವಿವಿಧ ಆಟೋಮೊಬೈಲ್ ಕಂಪನಿಗಳು ನಡೆಸುವ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಮಾರುತಿ ಸುಜುಕಿ ಕಾರುಗಳು ಹೊಸ ಯಶಸ್ಸನ್ನು ಸಾಧಿಸುತ್ತಿವೆ.

ಮಾರುತಿ ಡಿಸೈರ್ ಗೆ ಸಿಕ್ಕಿದೆ 5 ಸ್ಟಾರ್​ ರೇಟಿಂಗ್​; ವಿಶೇಷವಾಗಿ, ಮಾರುತಿ ಡಿಸೈರ್​ ಕಾರು ಗ್ಲೋಬಲ್ NCAP ನಡೆಸಿದ ಪರೀಕ್ಷೆಗಳಲ್ಲಿ ಫುಲ್​ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಈ ಕಾರನ್ನು ಕೇವಲ ಬಜೆಟ್ ಸೆಡಾನ್ ಎಂದು ಪರಿಗಣಿಸಲಾಗಿದ್ದರೂ ಈಗ ಸುರಕ್ಷಿತ ಕುಟುಂಬ ಕಾರು ಎಂಬ ಮನ್ನಣೆಯನ್ನು ಗಳಿಸಿದೆ. ಇದು ಮಾತ್ರವಲ್ಲ.. ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ವಿಕ್ಟೋರಿಸ್ ಭಾರತ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಫುಲ್​ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಸಾಧಿಸಿದೆ.

EURO NCAP CRASH TEST MARUTI SUZUKI EVITARA FEATURES MARUTI SUZUKI EVITARA ENGINE MARUTI SUZUKI EVITARA DETAILS

ಇದು ಮಾರುತಿಯ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಲ್ಲದೇ, ಮಾರುತಿ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು eVitara ಸುರಕ್ಷತೆಯ ವಿಷಯದಲ್ಲಿ ತನ್ನ ಛಾಪು ಮೂಡಿಸಿದೆ. ಇಲ್ಲಿಯವರೆಗೆ ಎಲೆಕ್ಟ್ರಿಕ್​ ಎಂದರೆ ಹೊಸ ತಂತ್ರಜ್ಞಾನ. ಆದರೆ, ಸುರಕ್ಷತೆಯ ಬಗ್ಗೆ ಏನೆಂಬ ಸಂದೇಹಗಳಿದ್ದರೂ eVitara ತನ್ನ ಸುರಕ್ಷತಾ ಕಾರ್ಯಕ್ಷಮತೆಯೊಂದಿಗೆ ವಿಮರ್ಶಕರನ್ನು ಮೌನಗೊಳಿಸಿದೆ.

ಎಲೆಕ್ಟ್ರಿಕಲ್​ ವಿಭಾಗದಲ್ಲಿ ಹೊಸ ಹೆಜ್ಜೆ ಇಟ್ಟ ವಿಟಾರಾ!: ಮಾರುತಿ ತನ್ನ ಮೊದಲ ಎಲೆಕ್ಟ್ರಿಕ್ SUV ಇ - ವಿಟಾರಾ ಉತ್ಪಾದನೆಯನ್ನು ಪ್ರಾರಂಭಿಸುವ ಮೂಲಕ ಎಲೆಕ್ಟ್ರಿಕ್ ವಿಭಾಗದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಈ ಮಾದರಿಯನ್ನು ಇನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿಲ್ಲ. ಆದರೆ, ದೇಶದ ಕಾರ್ಖಾನೆಗಳಲ್ಲಿ ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದೆ. ಇದರ ಹೊರತಾಗಿ ಈ ಎಲೆಕ್ಟ್ರಿಕ್ SUV ಭಾರತೀಯ ಮಾರುಕಟ್ಟೆಗೆ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುತ್ತದೆ. ಇದರರ್ಥ ಮೇಕ್ ಇನ್ ಇಂಡಿಯಾ ಕಾರು ಜಾಗತಿಕ ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲಿದೆ.

EURO NCAP CRASH TEST MARUTI SUZUKI EVITARA FEATURES MARUTI SUZUKI EVITARA ENGINE MARUTI SUZUKI EVITARA DETAILS

ಈ ನಿಟ್ಟಿನಲ್ಲಿ ಭಾರತದಲ್ಲಿ ತಯಾರಾದ ಇ - ವಿಟಾರಾ ಎಲೆಕ್ಟ್ರಿಕ್ ಕಾರನ್ನು ಯುರೋ NCAP ಕ್ರ್ಯಾಶ್ ಪರೀಕ್ಷೆಗೆ ಕಳುಹಿಸಲಾಗಿದೆ. ಸುರಕ್ಷತೆಯ ವಿಷಯದಲ್ಲಿ ಕಾರು ನಿರೀಕ್ಷೆಗಳನ್ನು ಮೀರಿ ಕಾರ್ಯನಿರ್ವಹಿಸಿತು ಮತ್ತು 4 - ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿತು. ಇದು ಎಲೆಕ್ಟ್ರಿಕ್ SUVಗೆ ತುಂಬಾ ಹೆಮ್ಮೆಯ ಫಲಿತಾಂಶವಾಗಿದೆ. ಆದರೂ ಈ ಕಾರು 5 -ಸ್ಟಾರ್ ರೇಟಿಂಗ್ ಪಡೆಯಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದರೆ ಮುಖ್ಯ ಕಾರಣ ವಯಸ್ಕರ ರಕ್ಷಣೆಯಲ್ಲಿನ ಸಣ್ಣ ಲೋಪವಾಗಿದೆ.

ಯುರೋ NCAP ಪರೀಕ್ಷೆಯಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಇ - ವಿಟಾರಾ ಶೇಕಡಾ 77 ರಷ್ಟು ಅಂಕಗಳನ್ನು ಗಳಿಸಿದೆ. ಇದು ಶೇಕಡಾ 80 ರಷ್ಟು ತಲುಪಿದರೆ ಅದು ಫುಲ್​ 5-ಸ್ಟಾರ್ ರೇಟಿಂಗ್ ಪಡೆಯುತ್ತಿತ್ತು. 4-ಸ್ಟಾರ್ ಫಲಿತಾಂಶವು ಉತ್ತಮವಾಗಿಯೇ ಬಂದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಕಾರು ತನ್ನ ಸುರಕ್ಷತಾ ಮಾನದಂಡಗಳೊಂದಿಗೆ ವಿಮರ್ಶಕರನ್ನು ಮೌನಗೊಳಿಸಿದೆ. ಅಷ್ಟೇ ಅಲ್ಲ ಗ್ರಾಹಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಂಬ ಭಾವನೆಯನ್ನು ನೀಡಿದೆ.

📚 Related News