Weight Loss Simple Tricks: ಅಧಿಕ ತೂಕವು ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುತ್ತಿರುವ ಒಂದು ಆರೋಗ್ಯದ ಸಮಸ್ಯೆಯಾಗಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಆಹಾರ ಕ್ರಮ, ವಾಕಿಂಗ್, ಯೋಗ ಹಾಗೂ ವ್ಯಾಯಾಮದಂತಹ ವಿವಿಧ ಕಾರ್ಯಗಳನ್ನು ಅನುಸರಿಸುತ್ತಿದ್ದಾರೆ. ಇವೆಲ್ಲವು ದೇಹದಲ್ಲಿ ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತವೆ. ದೇಹದಲ್ಲಿನ ಹೆಚ್ಚು ಕ್ಯಾಲೊರಿಗಳನ್ನು ಕರಗಿಸಿದರೆ, ತೂಕ ವೇಗವಾಗಿ ಕಡಿಮೆಯಾಗುತ್ತದೆ. ಇದು ತೂಕ ಇಳಿಸಿಕೊಳ್ಳಲು ಆರೋಗ್ಯಕರ ಮಾರ್ಗವಲ್ಲ. ಒಂದು ದಿನದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಕರಗಿಸಿದರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.
ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದರೆ ನಿಗದಿತ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಕರಗಿಸಬೇಕಾಗುತ್ತದೆ. ಹೆಚ್ಚು ಕ್ಯಾಲೊರಿಗಳನ್ನು ಕರಗಿಸುವುದು ದೇಹಕ್ಕೆ ಹಾನಿಕಾರಕವಾಗಬಹುದು. ಇದರಿಂದಾಗಿ ದಿನಕ್ಕೆ ಎಷ್ಟು ಕ್ಯಾಲೊರಿಗಳನ್ನು ಕರಗಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ..

ದಿನಕ್ಕೆ ಎಷ್ಟು ಕ್ಯಾಲೊರಿಗಳನ್ನು ಕರಗಿಸಬೇಕು? ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ಒಂದು ದಿನಕ್ಕೆ 300ರಿಂದ 500 ಕ್ಯಾಲೊರಿಗಳನ್ನು ಕರಗಿಸಬೇಕು. ಪ್ರತಿಯೊಬ್ಬರ ದೈಹಿಕ ಸಾಮರ್ಥ್ಯ ಹಾಗೂ ಆಹಾರ ಕ್ರಮ ವಿಭಿನ್ನವಾಗಿರುತ್ತದೆ. ಪ್ರತಿದಿನ ಎಷ್ಟು ಕ್ಯಾಲೊರಿಗಳನ್ನು ಕರಗಿಸಬೇಕು ಎಂಬುದು ನೀವು ಸೇವಿಸುವ ಆಹಾರ ಹಾಗೂ ದೈಹಿಕ ಚಟುವಟಿಕೆಯನ್ನು ಅವಲಂಬಿಸಿರುತ್ತದೆ. ಶೇ.25 ರಿಂದ 35ರಷ್ಟು ಕೊಬ್ಬನ್ನು ಸೇವಿಸಿದರೆ ದಿನಕ್ಕೆ 300 ರಿಂದ 400 ಕ್ಯಾಲೊರಿಗಳನ್ನು ಕಡಿಮೆ ಮಾಡಬೇಕು. ಒಂದು ದಿನಕ್ಕೆ ಶೇ.35ರಷ್ಟು ಕೊಬ್ಬನ್ನು ಸೇವಿಸಿದರೆ, 500 ಕ್ಯಾಲೊರಿಗಳನ್ನು ಕರಗಿಸಬೇಕು.
ಕ್ಯಾಲೊರಿಗಳನ್ನು ಕರಗಿಸುವುದು ಹೇಗೆ?

- ಸುಮಾರು 40 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಅವಶ್ಯ.
- ನಿತ್ಯ ಸ್ಟ್ರೆಚಿಂಗ್ ವ್ಯಾಯಾಮ ಮಾಡಿ.
- ಗ್ರೀನ್ ಟೀ ಹಾಗೂ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
- ಪ್ರತಿದಿನಕ್ಕೆ 5 ರಿಂದ 6 ಬಾರಿ ಚಿಕ್ಕ ಉಪಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಒಮ್ಮೆ ತಿನ್ನುವುದನ್ನು ಅಭ್ಯಾಸವನ್ನು ತಪ್ಪಿಸುವುದು ಉತ್ತಮ.
- ಉಪಹಾರ ನಿಯಮಿತವಾಗಿ ಸೇವಿಸಿ.
- ಕಡಿಮೆ ಕೊಬ್ಬಿನ ಆಹಾರ ಸೇವಿಸಿ.
- ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ತಜ್ಞರು ತಿಳಿಸುವ ಪ್ರಕಾರ ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕು.
ಕಡಿಮೆ ಕ್ಯಾಲೊರಿ ಆಹಾರ ಸೇವಿಸಿ:

- ದೇಹದ ತೂಕವನ್ನು ತಗ್ಗಿಸಲು ಕಡಿಮೆ ಕ್ಯಾಲೊರಿ ಆಹಾರವನ್ನು ಸೇವಿಸಬಹುದು.
- ಧಾನ್ಯಗಳನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹಸಿವು ಆಗುವುದಿಲ್ಲ. ಈ ಕಾರಣದಿಂದ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಬಾರದು.
- ಆಹಾರದಲ್ಲಿ ಜೋಳ, ರಾಗಿ, ಸಜ್ಜೆಯಂತಹ ಧಾನ್ಯಗಳನ್ನು ಸೇರಿಸಿ.
- ಬಾದಾಮಿಯಲ್ಲಿ ಕ್ಯಾಲೊರಿಗಳು ಬಹಳ ಕಡಿಮೆಯಿದ್ದು, 10 ರಿಂದ 12 ಬಾದಾಮಿಗಳಲ್ಲಿ 100 ಕ್ಯಾಲೊರಿಗಳಿವೆ. ಅದಕ್ಕಾಗಿಯೇ ಬಾದಾಮಿಯನ್ನು ತಿಂಡಿಯಾಗಿ ಸೇವನೆ ಮಾಡಬಹುದು.
- ತೂಕ ಇಳಿಕೆ ಮಾಡಿಕೊಳ್ಳಲು ನಿಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳಬಹುದು.
- ಮೊಟ್ಟೆಗಳಲ್ಲಿ ಕ್ಯಾಲೊರಿಗಳು ಬಹಳ ಕಡಿಮೆಯಿದೆ. ಇದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸುವ ಅಗತ್ಯವಿಲ್ಲ.
- ಮೀನುಗಳನ್ನು ಸಹ ಸೇರಿಸಿಕೊಳ್ಳಬಹುದು. ಹೆಚ್ಚು ಹುರಿದ ಮೀನುಗಳನ್ನು ತಿನ್ನಬಾರದು. ಹೆಚ್ಚು ಹುರಿದ ಮೀನುಗಳನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.
- ಕಡಿಮೆ ಕ್ಯಾಲೊರಿ ಆಹಾರಗಳನ್ನು ಸೇರಿಸಲು ಬಯಸಿದರೆ ಸೂರ್ಯಕಾಂತಿ ಬೀಜಗಳು ಉತ್ತಮ.

ಹೀಗೂ ಕ್ಯಾಲೊರಿ ಕರಗಿಸಬಹುದು:
- ಹಲವರು ಕ್ಯಾಲೊರಿಗಳನ್ನು ಕರಗಿಸಲು ಜಿಮ್‌ಗಳಿಗೆ ತೆರಳುತ್ತಾರೆ. ಕೆಲವರು ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ಮೋಜಿನ ಕೆಲಸಗಳೊಂದಿಗೆ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಮನೆಕೆಲಸಗಳನ್ನು ಮಾಡುವುದು, ಮನೆ ಗುಡಿಸುವುದು, ಬಟ್ಟೆ ಒಗೆಯುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುವ ಮೂಲಕ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು.
- ನೃತ್ಯ ಮಾಡುವ ಮೂಲಕವೂ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಸಂಗಾತಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರೊಂದಿಗೆ ಸ್ವಲ್ಪ ಸಮಯದವರೆಗೆ ನೃತ್ಯ ಮಾಡುವ ಮೂಲಕ ಆನಂದಿಸಿ. ನೃತ್ಯವು ಕ್ಯಾಲೊರಿಗಳನ್ನು ಬರ್ನ್ ಮಾಡುವುದಲ್ಲದೇ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
- ಶಾಪಿಂಗ್ ಮಾಡುವುದು ಕೂಡ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಶಾಪಿಂಗ್‌ಗಾಗಿ ಸಾಕಷ್ಟು ವಾಕಿಂಗ್ ಮಾಡುತ್ತಾರೆ. ಶಾಪಿಂಗ್ ಸುಮಾರು 100 ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಈ ಕ್ರಮಗಳನ್ನು ಮರೆಯದಿರಿ: ದೇಹದ ತೂಕ ಕಡಿಮೆ ಮಾಡಲು ಕ್ಯಾಲೊರಿಗಳನ್ನು ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ. ನೀವು ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸಿದರೆ, ನೀವು ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸಬೇಕಾಗುತ್ತದೆ. ದಿನದಲ್ಲಿ 500ಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಕರಗಿಸ ಮಾಡಬಾರದು ಎನ್ನುವುದನ್ನು ನೆನಪಿನಲ್ಲಿ ಇಡಬೇಕಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ದೈಹಿಕವಾಗಿ ದುರ್ಬಲವಾಗಬೇಕಾಗುತ್ತದೆ. ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೇವಿಸುವ ಆಹಾರದ ಕುರಿತು ಜಾಗರೂಕರಾಗಿರಿ. ಜಂಕ್ ಫುಡ್ ಹಾಗೂ ಸಂಸ್ಕರಿಸಿದ ಆಹಾರ, ಹುರಿದ ಆಹಾರ ಹಾಗೂ ಉಪ್ಪು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳಿಂದ ಆದಷ್ಟು ದೂರವಿರಿ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ: