ಶುಭ್​ಮನ್​ ಗಿಲ್​ ಬಾಲ್ಯದ ಸ್ನೇಹಿತ ಇಂದು ಯುಎಇ ತಂಡದ ಆಟಗಾರ ​

ಶುಭ್​ಮನ್​ ಗಿಲ್​ ಬಾಲ್ಯದ ಸ್ನೇಹಿತ ಇಂದು ಯುಎಇ ತಂಡದ ಆಟಗಾರ ​
By Published : September 9, 2025 at 5:30 PM IST

ಇಂದಿನಿಂದ ಏಷ್ಯಾಕಪ್‌ ಕ್ರಿಕೆಟ್​ ಟೂರ್ನಿ ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂ​ಕಾಂಗ್​ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯಕ್ಕೆ ಅಬುಧಾಬಿಯ ಶೇಖ್ ಸೈಯ್ಯದ್ ಮೈದಾನದಲ್ಲಿ ಆತಿಥ್ಯ ವಹಿಸಿಕೊಳ್ಳುತ್ತಿದೆ. ಸೆಪ್ಟೆಂಬರ್ 10 (ಬುಧವಾರ)ರಂದು ಭಾರತ ತನ್ನ ಮೊದಲ ಪಂದ್ಯ ಆಡಲಿದೆ. ಇದರಲ್ಲಿ ಯುಎಇ ತಂಡವನ್ನು ಎದುರಿಸಲಿದೆ.

ಈ ಪಂದ್ಯಕ್ಕೂ ಮುನ್ನವೇ ಯುಎಇ ತಂಡದ ಆಟಗಾರ ಸಿಮ್ರನ್‌ಜೀತ್ ಸಿಂಗ್, ಶುಭಮನ್ ಗಿಲ್ ಅವರೊಂದಿಗಿನ ತಮ್ಮ ಸಂಪರ್ಕ ನೆನಪಿಸಿಕೊಂಡಿದ್ದಾರೆ. 35 ವರ್ಷದ ಸಿಮ್ರನ್‌ಜೀತ್ ಸಿಂಗ್ ಪಂಜಾಬ್‌ನ ಲುಧಿಯಾನದವರಾಗಿದ್ದು, ಪ್ರಸ್ತುತ ಯುಎಇ ತಂಡದ ಭಾಗವಾಗಿದ್ದಾರೆ.

12 ವರ್ಷಗಳ ಹಿಂದೆ ಮೊಹಾಲಿಯಲ್ಲಿ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​(ಪಿಸಿಎ) ನೆಟ್ಸ್‌ನಲ್ಲಿ ಶುಭಮನ್ ಗಿಲ್ ಅವರೊಂದಿಗೆ ಅಭ್ಯಾಸ ಮಾಡಿದ ದಿನಗಳನ್ನು ಅವರು ನೆನಪಿಸಿಕೊಂಡರು. 'ನನಗೆ ಶುಭಮನ್ ಗಿಲ್ ಬಾಲ್ಯದಿಂದಲೂ ಗೊತ್ತಿದ್ದಾರೆ. ಆದರೆ, ಅವರು ಈಗ ನನ್ನನ್ನು ನೆನಪಿಸಿಕೊಳ್ಳುತ್ತಾರೋ ಇಲ್ಲವೋ ತಿಳಿದಿಲ್ಲ. 2011 - 12ರ ಸುಮಾರಿಗೆ ಗಿಲ್‌ಗೆ 11 ಅಥವಾ 12 ವರ್ಷ ವಯಸ್ಸಿನವರಾಗಿದ್ದರು ಎಂದು ನಾನು ಭಾವಿಸುತ್ತೇನೆ. ಈ ವೇಳೆ, ಪ್ರತಿದಿನ ಮೊಹಾಲಿಯ ಪಿಸಿಎ ಅಕಾಡೆಮಿಯಲ್ಲಿ ಬೆಳಗ್ಗೆ 6 ರಿಂದ 11 ರವರೆಗೆ ತರಬೇತಿ ಪಡೆಯುತ್ತಿದ್ದೆವು. ಗಿಲ್ ತನ್ನ ತಂದೆಯೊಂದಿಗೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಅಭ್ಯಾಸಕ್ಕೆ ಬರುತ್ತಿದ್ದರು ಎಂದು ಸಿಮ್ರನ್​ಜೀತ್​ ಸಿಂಗ್​ ವಿವರಿಸಿದರು.

ಅಭ್ಯಾಸದ ಸಮಯದ ಬಳಿಕವೂ ನಾನು ಗಿಲ್​ ಅವರೊಂದಿಗೆ ಹೆಚ್ಚಿನ ಅಭ್ಯಾಸಕ್ಕಾಗಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದೆ. ಗಿಲ್ ಈಗ ನನ್ನನ್ನು ನೆನಪಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಆ ದಿನಗಳಲ್ಲಿ ನಾನು ಅವರಿಗೆ ಹಲವು ಬಾರಿ ಬೌಲಿಂಗ್ ಮಾಡಿದ್ದೇನೆ ಎಂದು ಅವರು ನೆನಪಿಸಿಕೊಂಡರು.

"ನಾನು ಪಂಜಾಬ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅಂತಿಮವಾಗಿ 2017 ರಲ್ಲಿ ನಾನು ರಣಜಿ ಟ್ರೋಫಿಗೂ ಆಯ್ಕೆ ಆಗಿದ್ದೆ. ಈ ಹಿಂದೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮೊಹಾಲಿಯಲ್ಲಿ ಸೆಷನ್‌ಗಳನ್ನು ನಡೆಸಿದಾಗಲೆಲ್ಲ, ನಾನು ತಂಡದ ನೆಟ್ಸ್‌ನಲ್ಲಿ ಬಹಳಷ್ಟು ಬೌಲಿಂಗ್ ಮಾಡುತ್ತಿದ್ದೆ. ಆದರೆ, ಕೋವಿಡ್ ತನ್ನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಸ್ಪಿನ್ನರ್ ವಿವರಿಸಿದರು.

ನಂತರ ಒಮ್ಮೆ ನನಗೆ ದುಬೈನಲ್ಲಿ ಅಭ್ಯಾಸ ಮಾಡಲು ಆಫರ್ ಸಿಕ್ಕಿತ್ತು. ಏಪ್ರಿಲ್ 2021ರಲ್ಲಿ ನಾನು 20 ದಿನಗಳ ಕಾಲ ಇಲ್ಲಿಗೆ ಬಂದೆ. ನಂತರ ಕೋವಿಡ್‌ನ ಎರಡನೇ ಅಲೆಯಿಂದಾಗಿ ಭಾರತದಲ್ಲಿ ಮತ್ತೊಂದು ಲಾಕ್‌ಡೌನ್ ವಿಧಿಸಲಾಯಿತು. ಈ ಕಾರಣದಿಂದಾಗಿ, ನಾನು ತಿಂಗಳುಗಳ ಕಾಲ ಹಿಂತಿರುಗಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ, ನಾನು ಅಲ್ಲಿಯೇ ಇದ್ದೆ. ನಂತರ, ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಸಿಮ್ರನ್​ಜೀತ್​ ಸಿಂಗ್​​ ಹೇಳಿದರು.

ಸಿಮ್ರನ್​ಜೀತ್​ ಕ್ರಿಕೆಟ್​ ವೃತ್ತಿಜೀವನ: ಇವರು ಈವರೆಗೂ 5 ಏಕದಿನ, 12 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಏಕದಿನ ಸ್ವರೂಪದಲ್ಲಿ 19.90ರ ಸರಾಸರಿಯಲ್ಲಿ 10 ವಿಕೆಟ್​ ಪಡೆದರೆ, 14ರ ಸರಾಸರಿಯಲ್ಲಿ 15 ವಿಕೆಟ್​ಗಳನ್ನು ಉರುಳಿಸಿದ್ದಾರೆ.

📚 Related News