ಟೀಮ್​ ಇಂಡಿಯಾ ಬ್ಯಾಟರ್​ ರೌದ್ರತಾಂಡವ; 30 ಸಿಕ್ಸರ್​ ಸಿಡಿಸಿ ಆರ್ಭಟ

ಟೀಮ್​ ಇಂಡಿಯಾ ಬ್ಯಾಟರ್​ ರೌದ್ರತಾಂಡವ; 30 ಸಿಕ್ಸರ್​ ಸಿಡಿಸಿ ಆರ್ಭಟ
By Published : September 10, 2025 at 3:28 PM IST

Asia Cup 2025: ಏಷ್ಯಾಕಪ್​ನಲ್ಲಿ ಇಂದು ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಆತಿಥ್ಯ ವಹಿಸಿಕೊಳ್ಳುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಫೆವರೀಟ್​ ತಂಡವಾಗಿದೆ. ಏತನ್ಮಧ್ಯೆ, ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಲು ಟೀಮ್​ ಇಂಡಿಯಾ ಪ್ಲಾನ್​ ಮಾಡಿಕೊಂಡಿದೆ. ಇದಕ್ಕಾಗಿ ಭಾರತೀಯ ಆಟಗಾರರು ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ.

ಈ ಪಂದ್ಯ ಪ್ರಾರಂಭಕ್ಕೂ ಮುನ್ನವೇ ಭಾರತದ ಯುವ ಬ್ಯಾಟರ್​ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾ ನೆಟ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ಮಂಗಳವಾರ ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆದ ತರಬೇತಿ ಅವಧಿಯಲ್ಲಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಪ್ರಮುಖ ಆಕರ್ಷಣೆಯಾಗಿತ್ತು. ಅಭ್ಯಾಸ ಅವಧಿಯಲ್ಲಿ ಅವರು ಸತತವಾಗಿ 25-30 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಅಭಿಷೇಕ್ ನೆಟ್ ಬೌಲರ್​ಗಳ ಮೇಲೆ ದಾಳಿ ಮಾಡಿ ಬೃಹತ್ ಸಿಕ್ಸರ್ ಗಳನ್ನು ಬಾರಿಸುವ ಮೂಲಕ ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ. ಅಭಿಷೇಕ್​ ಶರ್ಮಾ ಹೊಡೆದ ಚೆಂಡುಗಳೆಲ್ಲ ಸಿಕ್ಸರ್​ ಅಭ್ಯಾಸದ ಸಿಕ್ಸರ್​ ಗೆರೆಗಳು ದಾಟಿ ಹೊರಬಿದ್ದಿದ್ದು ಗಮನಾರ್ಹ.

ಶುಭ್​ಮನ ಗಿಲ್ ಮತ್ತು ಅಭಿಷೇಕ್ ಶರ್ಮಾ ಇಬ್ಬರೂ ಒಟ್ಟಿಗೆ ನೆಟ್ ಪ್ರಾಕ್ಟೀಸ್ ನಡೆಸಿದರು. ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಈ ಇಬ್ಬರೂ ಭಾರತ ಪರ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಆದಾಗ್ಯೂ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಅವರಿಗೆ ಪಂದ್ಯದ ಹಿಂದಿನ ದಿನ ವಿಶ್ರಾಂತಿ ನೀಡಲಾಗಿದೆ.

ಗಿಲ್​ ಕ್ಲೀನ್​ ಬೋಲ್ಡ್​​: ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಅವರನ್ನು ಸ್ಥಳೀಯ ಬೌಲರ್ ಒಬ್ಬರು ಕ್ಲೀನ್ ಬೌಲ್ಡ್ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಗಿಲ್ ತಮ್ಮ ಅಭ್ಯಾಸ ಅವಧಿಯಲ್ಲಿ ವೇಗದ ಬೌಲರ್‌ಗಳ ವಿರುದ್ಧ ಕೆಲವು ಉತ್ತಮ ಹೊಡೆತಗಳನ್ನು ಆಡಿದ್ದರು. ಕವರ್ ಡ್ರೈವ್‌ ನೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಸ್ಥಳೀಯ ನೆಟ್ ಬೌಲರ್‌ ಒಬ್ಬರ ಅದ್ಭುತ ಎಸೆತದಲ್ಲಿ ಅವರು ಕ್ಲೀನ್​ ಬೋಲ್ಡ್​ ಆಗಿ ಹಿನ್ನಡೆ ಅನುಭವಿಸಿದರು. ಗಿಲ್ ಯುಎಇ ವಿರುದ್ಧದ ಪ್ಲೇಯಿಂಗ್​ XI ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಅವರು ಓಪನರ್​ ಆಗಿ ಕಣಕ್ಕಿಳಿಯುತ್ತಾರೆ ಅಥವಾ 3ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪಂದ್ಯ ಆರಂಭ, ನೇರಪ್ರಸಾರ ಯಾವಾಗ: ಭಾರತ ಮತ್ತು ಯುಎಇ ನಡುವಿನ ಇಂದಿನ ಪಂದ್ಯವೂ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. ಈ ಪಂದ್ಯವೂ ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್ಸ್​​ನಲ್ಲಿ ನೇರಪ್ರಸಾರ ಆಗಲಿದೆ. ಸೋನಿ ಲೀವ್​ನಲ್ಲಿ ಲೈವ್​ ಸ್ಪ್ರೀಮಿಂಗ್​ ಆಗಲಿದೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ಆರ್ ಹರ್ಷಿತ್ ಸಿಂಗ್ ರಾಣಾ.

ಯುಎಇ ತಂಡ: ಅಲಿಶನ್ ಷರೀಫ್, ಮೊಹಮ್ಮದ್ ವಾಸಿಮ್, ಮೊಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿಕೆಟ್ ಕೀಪರ್), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಹೈದರ್ ಅಲಿ, ಮೊಹಮ್ಮದ್ ಫಾರೂಕ್, ಮೊಹಮ್ಮದ್ ರೋಹಿದ್, ಜುನೈದ್ ಸಿದ್ದಿಕಿ, ಸಿಮ್ರಂಜೀತ್ ಸಿಂಗ್.

📚 Related News