ಕೋರ್ಟ್​ ಮೆಟ್ಟಿಲೇರಿದ ನಟಿ ಐಶ್ವರ್ಯಾ ರೈ ಬಚ್ಚನ್​: ಕಾರಣ?

ಕೋರ್ಟ್​ ಮೆಟ್ಟಿಲೇರಿದ ನಟಿ ಐಶ್ವರ್ಯಾ ರೈ ಬಚ್ಚನ್​: ಕಾರಣ?
By Published : September 9, 2025 at 4:40 PM IST

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ಕಮರ್ಷಿಯಲ್​​ ಪ್ರಾಡಕ್ಟ್​​ಗಳಲ್ಲಿ ತಮ್ಮ ಹೆಸರು, ಫೋಟೋ ಮತ್ತು ಪಬ್ಲಿಕ್​​ ಇಮೇಜ್‌ನ ವ್ಯಾಪಕ ದುರುಪಯೋಗವಾಗಿದೆ ಎಂದು ಮಾಜಿ ವಿಶ್ವಸುಂದರಿ ಆರೋಪಿಸಿದ್ದಾರೆ.

ಈ ಪ್ರಕರಣ ನ್ಯಾಯಮೂರ್ತಿ ತೇಜಸ್ ಕರಿಯಾ ಅವರೆದುರು ಬಂದಿತು. ಇಂಥ ಉಲ್ಲಂಘನೆಗಳನ್ನು ತಡೆಯಲು, ನ್ಯಾಯಾಲಯವು ತಡೆಯಾಜ್ಞೆಗಳನ್ನು ನೀಡಲು ಯೋಚಿಸುತ್ತಿದೆ ಎಂದು ಹೇಳಿದರು. ಮುಂದಿನ ವಿಚಾರಣೆ ಜನವರಿ 15, 2026 ರಂದು ನಡೆಯಲಿದೆ.

ನಟಿ ಐಶ್ವರ್ಯಾ ರೈ ಬಚ್ಚನ್ ಪರ ವಕೀಲ ಸಂದೀಪ್ ಸೇಥಿ, ನಟಿಯ ಗುರುತನ್ನು/ಐಡೆಂಟಿಟಿಯನ್ನು ಒಪ್ಪಿಗೆಯಿಲ್ಲದೇ, ಲಾಭಕ್ಕಾಗಿ ಹಾಗೂ ಆಕ್ಷೇಪಾರ್ಹ ವಿಷಯಕ್ಕಾಗಿ ಬಳಸಲಾಗುತ್ತಿದೆ ಎಂದು ವಾದಿಸಿದರು. ಹಲವು ವೆಬ್‌ಸೈಟ್‌ಗಳು ತಮ್ಮನ್ನು ನಟಿಯ ಅಫೀಶಿಯಲ್​ ಪ್ಲ್ಯಾಟ್​​ಫಾರ್ಮ್​​ಗಳಾಗಿ ಬಿಂಬಿಸಿಕೊಳ್ಳುತ್ತಿವೆ. ಅಭಿಮಾನಿಗಳು ಮತ್ತು ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ ಎಂದು ವಾದಿಸಿದರು. ಇದಲ್ಲದೇ, ಅವರ ಚಿತ್ರ ಮತ್ತು ಹೆಸರನ್ನು ಒಳಗೊಂಡ ಮಗ್‌ಗಳು, ಟಿ-ಶರ್ಟ್‌ಗಳು ಮತ್ತು ಡ್ರಿಂಕ್​ವೇರ್​​ನಂತಹ ಪ್ರಾಡಕ್ಟ್​ಗಳನ್ನು ಕಾನೂನು ಅನುಮತಿಯಿಲ್ಲದೇ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಐಶ್ವರ್ಯಾ ನೇಷನ್ ವೆಲ್ತ್ ಎಂಬ ಕಂಪನಿಯು ತನ್ನ ಅಧಿಕೃತ ದಾಖಲೆಗಳಲ್ಲಿ ಐಶ್ವರ್ಯಾ ರೈ ಅವರನ್ನು ಅಧ್ಯಕ್ಷೆ ಎಂದು ಉಲ್ಲೇಖಿಸಿದ ಒಂದು ಆತಂಕಕಾರಿ ಪ್ರಕರಣವನ್ನು ಸೇಥಿ ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ವಂಚನೆ ಎಂದು ಉಲ್ಲೇಖಿಸಿದ ವಕೀಲರು, ನಟಿಗೆ ಆ ಸಂಸ್ಥೆಯೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಮರ್ಶಿಯಲ್​ ದುರುಪಯೋಗದ ಹೊರತಾಗಿಯೂ ಸೋಷಿಯಲ್​ ಮೀಡಿಯಾದಲ್ಲಿ ನಟಿಯ ಮಾರ್ಫ್ ಮಾಡಿದ, ಅಶ್ಲೀಲ ಮತ್ತು ಎಐ ಆಧಾರಿತ ಫೋಟೋಗಳು ವೈರಲ್​ ಆಗುತ್ತಿರೋದನ್ನು ಸೇಥಿ ಎತ್ತಿ ಹಿಡಿದರು. ಇದು ಅವರ ಘನತೆಯ ಗಂಭೀರ ಉಲ್ಲಂಘನೆ ಎಂದು ಖಂಡಿಸಿದರು. ಅವರ ಹೋಲಿಕೆಯನ್ನು ಲೈಂಗಿಕ ವಿಚಾರಗಳಿಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಿದರು.

ಗೂಗಲ್ ಪರವಾಗಿ ಹಾಜರಾದ ವಕೀಲೆ ಮಮತಾ ರಾಣಿ, ಕಂಟೆಂಟ್​ ರಿಮೂವ್​ ಕಾರ್ಯವಿಧಾನವನ್ನು ಪ್ರಸ್ತಾಪಿಸಿದರು. ಇದಕ್ಕಾಗಿ ನಿರ್ದಿಷ್ಟ ಯುಆರ್​ಎಲ್​​​ಗಳನ್ನು ಒದಗಿಸಬೇಕಾಗುತ್ತದೆ ಎಂದು ವಿವರಿಸಿದರು.

ಇದಕ್ಕಾಗಿ ನಿರ್ದಿಷ್ಟ ಯುಆರ್​ಎಲ್​​ಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಎಲ್ಲ ಉಲ್ಲಂಘನೆಗಳನ್ನು ಒಳಗೊಂಡ ಸಾಮಾನ್ಯ ಆದೇಶವು ಕಾರ್ಯಸಾಧ್ಯವಾಗದಿದ್ದರೆ, ಪ್ರತಿವಾದಿಗಳ ವಿರುದ್ಧ ಪ್ರತ್ಯೇಕ ತಡೆಯಾಜ್ಞೆಗಳನ್ನು ರವಾನಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

📚 Related News