Manjrekar on Rohit Sharma: ಭಾರತದ ಏಕದಿನ ನಾಯಕ ರೋಹಿತ್ ಶರ್ಮಾ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ಗಳ ಪಟ್ಟಿಗೆ ಸೇರಿಸಲು ಅರ್ಹರಲ್ಲ ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ರೋಹಿತ್ ಶರ್ಮಾ ಭಾರತೀಯ ಏಕದಿನ ತಂಡದ ನಾಯಕ ಮತ್ತು ಸ್ಟಾರ್ ಓಪನರ್ ಆಗಿದ್ದಾರೆ. ಅವರು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ ಮತ್ತು ಭಾರತೀಯ ತಂಡದ ಆಟಗಾರ ಮತ್ತು ನಾಯಕರಾಗಿಯೂ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಇತ್ತೀಚೆಗೆ ನಡೆದಿದ್ದ ಟಿ-20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲೂ ನಾಯಕನಾಗಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇದರಿಂದಾಗಿ ರೋಹಿತ್ ಶರ್ಮಾ ಭಾರತದ ಅತ್ಯುತ್ತಮ ಕ್ರಿಕೆಟರ್ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲ್ಪಡುತ್ತಾರೆ.

ಇದರ ನಡುವೆಯೇ ಸಂಜಯ್ ಮಂಜ್ರೇಕರ್ ರೋಹಿತ್ ಶರ್ಮಾ ಕುರಿತು ಹೇಳಿಕೆಯೊಂದನ್ನು ನೀಡಿದ್ದಾರೆ. 'ದಿ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋ' ಟವಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜ್ರೇಕರ್, ರೋಹಿತ್ ಶರ್ಮಾ ಅವರನ್ನು ಸಾರ್ವಕಾಲಿಕ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಹಿಟ್ಮ್ಯಾನ್ ಅವರ ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ.
"ನನ್ನ ಮಟ್ಟಿಗೆ ಹೇಳುವುದಾದರೆ, ಭಾರತೀಯ ತಂಡದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ರೋಹಿತ್ ಶರ್ಮಾಗೆ ಸ್ಥಾನವಿಲ್ಲ. ಏಕೆಂದರೆ ನಾವು ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿಯಂತಹ ದಂತಕಥೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮಟ್ಟಕ್ಕೆ ರೋಹಿತ್ ಶರ್ಮಾ ತಲುಪಿಲ್ಲ ಎಂದು ತೋರುತ್ತದೆ" ಎಂದಿದ್ದಾರೆ.
ಆದರೂ ಶರ್ಮಾ ಪ್ರಶಂಸಿಸಿದ ಮಂಜ್ರೇಕರ್: ಆದರೆ, ಏಕದಿನ ಕ್ರಿಕೆಟ್‌ನಲ್ಲಿ ನಿಸ್ವಾರ್ಥತೆ ಮತ್ತು ಉತ್ತಮ ನಾಯಕನನ್ನು ಆಯ್ಕೆ ಮಾಡಿದರೇ ಅದು ರೋಹಿತ್ ಶರ್ಮಾ ಆಗಲಿದ್ದಾರೆ. ವಿಶೇಷವಾಗಿ 2023ರ ವಿಶ್ವಕಪ್ ನಂತರ, ಅವರು ತಮ್ಮ ಅಭಿಮಾನಿಗಳ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿದರು. ಏಕೆಂದರೆ ವಿಶ್ವಕಪ್ ಟೂರ್ನಿಯಲ್ಲಿ ಅವರು ತಮ್ಮ ದಾಖಲೆಗಳ ಬಗ್ಗೆ ಯೋಚಿಸದೇ ತಂಡಕ್ಕಾಗಿ ಮಾತ್ರ ಆಡಿದರು" ಎಂದು ಪ್ರಶಂಸಿಸಿದರು.
"ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಅವರು ಪ್ರದರ್ಶನ ಭಾರತೀಯ ತಂಡಕ್ಕೆ ಸಹಾಯ ಮಾಡಿದೆ. ಆದರೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಬಗ್ಗೆ ನೋಡಿದರೆ, ಏಕದಿನ ಮತ್ತು ಟಿ-20ಯಲ್ಲಿ ನೀಡಿದ ಪ್ರದರ್ಶನ ಟೆಸ್ಟ್‌ನಲ್ಲಿ ನೀಡಲು ಸಾಧ್ಯವಾಗಿಲ್ಲ. ಟೆಸ್ಟ್ ಕ್ರಿಕೆಟ್‌ಗೆ ತನ್ನದೇ ಆದ ಇತಿಹಾಸವಿದೆ. ಆ ದೃಷ್ಟಿಕೋನದಿಂದ ನೋಡಿದರೇ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ ಎಂದು ತೋರುತ್ತದೆ. ಅದಕ್ಕಾಗಿಯೇ ನಾನು ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಸೇರಿಸಿಕೊಳ್ಳಲ್ಲ" ಎಂದು ಹೇಳಿದರು.

ಕ್ರಿಕೆಟ್ ವೃತ್ತಿಜೀವನ: ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. 2007ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ, ಅವರು 67 ಟೆಸ್ಟ್, 273 ಏಕದಿನ ಮತ್ತು 159 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ, ಅವರು 12 ಶತಕಗಳು ಮತ್ತು 18 ಅರ್ಧಶತಕಗಳೊಂದಿಗೆ 4,301 ರನ್ ಗಳಿಸಿದ್ದಾರೆ ಮತ್ತು ಟಿ-20ಐಗಳಲ್ಲಿ, 5 ಶತಕಗಳು ಮತ್ತು 32 ಅರ್ಧಶತಕಗಳೊಂದಿಗೆ 4,231 ರನ್ ಗಳಿಸಿದ್ದಾರೆ.
ಆದರೆ, ಏಕದಿನ ಕ್ರಿಕೆಟ್ ವಿಷಯದಲ್ಲಿ ಅವರು 32 ಶತಕಗಳು ಮತ್ತು 58 ಅರ್ಧಶತಕಗಳೊಂದಿಗೆ 11,168 ರನ್ ಗಳಿಸಿದ್ದಾರೆ. ಕಳೆದ ಟಿ-20 ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮತ್ತು ಕಳೆದ ಮೇನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ, ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರೆದಿದ್ದಾರೆ ಎಂಬುದು ಗಮನಾರ್ಹ.