ನವದೆಹಲಿ: ಬಲವಾದ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 5,080 ರೂ. ಏರಿಕೆಯಾಗಿ 10 ಗ್ರಾಂಗೆ 1,12,750 ರೂ. ತಲುಪಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ ಅಮೂಲ್ಯ ಲೋಹದ ಬೆಲೆಗಳು 10 ಗ್ರಾಂಗೆ 33,800 ರೂ. ಅಥವಾ ಸುಮಾರು 43 ಪ್ರತಿಶತದಷ್ಟು ಏರಿಕೆಯಾಗಿದ್ದು, ಡಿಸೆಂಬರ್ 31, 2024 ರಂದು 10 ಗ್ರಾಂಗೆ 78,950 ರೂ. ಇತ್ತು.
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಸೋಮವಾರ 99.9 ಪ್ರತಿಶತ ಶುದ್ಧತೆಯ ಚಿನ್ನ 10 ಗ್ರಾಂಗೆ 1,07,670 ರೂ.ಗೆ ಮುಕ್ತಾಯಗೊಂಡಿತ್ತು.
ಬೆಳ್ಳಿ ಬೆಲೆಯೂ ಮಂಗಳವಾರ 2,800 ರೂ. ಏರಿಕೆಯಾಗಿ ಪ್ರತಿ ಕಿಲೋಗ್ರಾಂಗೆ 1,28,800 ರೂ. ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ). ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಈ ಅಮೂಲ್ಯ ಲೋಹವು ಪ್ರತಿ ಕೆಜಿಗೆ 1,26,000 ರೂ.ಗಳಲ್ಲಿ ಸ್ಥಿರವಾಗಿತ್ತು.
ಈ ಬೆಲೆ ಏರಿಕೆಯು ಮುಂದಿನ ವಾರ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಗಳು, ದೇಶೀಯ ಭವಿಷ್ಯದ ಮಾರುಕಟ್ಟೆಯು ಬಲವಾದ ಜಾಗತಿಕ ಸೂಚನೆಗಳು, ಜೊತೆಗೆ ಡಾಲರ್ ಮೇಲಿನ ಒತ್ತಡ, ಅಮೆರಿಕದ ದುರ್ಬಲ ಕಾರ್ಮಿಕ ಮಾರುಕಟ್ಟೆ ದತ್ತಾಂಶವು ಹಣಕಾಸು ನೀತಿ ಸಡಿಲಿಕೆ ಕೂಡ ಈ ಬೆಲೆ ಏರಿಕೆಗೆ ಕಾರಣ ಎಂದು ಚೀನಿವಾರು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಯೊಂದಿಗೆ ಇದೀಗ ಚಿನ್ನವೂ ಸಾರ್ವಕಾಲಿಗ ಗರಿಷ್ಠ ಮಟ್ಟ ತಲುಪಿದೆ. ಕಳೆದ ವಾರದ ದುರ್ಬಲ ಉದ್ಯೋಗ ವರದಿ ಕೂಡ ಮಾರುಕಟ್ಟೆಯಲ್ಲಿ ಈ ವರ್ಷ ಮೂರು ದರ ಕಡಿತಗಳಿಗೆ ಕಾರಣವಾಗಿದೆ. ಇದರಲ್ಲಿ 25 ಬೇಸಿಸ್ ಅಂಕಗಳ ಕಡಿತವೂ ಸೇರಿದೆ ಎಂದು ರಿಲಯನ್ಸ್ ಸೆಕ್ಯೂರಿಟಿಯ ಹಿರಿಯ ಸಂಶೋಧಕ ವಿಶ್ಲೇಷಕ ಜಿಗರ್ ತ್ರಿವೇದಿ ತಿಳಿಸಿದ್ದಾರೆ.
ಹೂಡಿಕೆದಾರರು ಇದೀಗ ಅಮೆರಿಕದ ನಿರ್ಮಾಣ ದರ ಸೂಚ್ಯಂಕ ಮತ್ತು ಗ್ರಾಹಕ ದರ ಸೂಚ್ಯಂಕದ ದತ್ತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದು ಫೆಡರಲ್ ರಿಸರ್ವ್ ಬಡ್ಡಿ ದರ ಚಕ್ರದ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗಲಿದೆ ಎಂದಿದ್ದಾರೆ
ಈ ನಡುವೆ ಡಾಲರ್ ಸೂಚ್ಯಂಕವೂ 97.33ಕ್ಕೆ ವಹಿವಾಟು ನಡೆಸುತ್ತಿದ್ದು, ಶೇಕಡಾ 0.12 ರಷ್ಟು ಕಡಿಮೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೂಡ ಬಂಗಾರದ ಬೆಲೆ ಕೂಡ ಸಾರ್ವಕಾಲಿಕ ದರ ದಾಖಲಿಸಿದ್ದು, ಬಂಗಾರವು ಪ್ರತಿ ಔನ್ಸ್ಗೆ 3,695 ಡಾಲರ್ ದಾಖಲಾಗಿದೆ.
ಈ ನಡುವೆ ಆಗಸ್ಟ್‌ನಲ್ಲಿ ವಿನಿಮಯ ವ್ಯಾಪಾರ ನಿಧಿ (ಇಟಿಎಫ್) 5.5 ಬಿಲಿಯನ್ ಡಾಲರ್ ಮೌಲ್ಯದ 53ಟನ್ ಚಿನ್ನವನ್ನು ಸೇರಿಸಿದೆ. ಇಟಿಎಫ್‌ಗಳಿಂದ ನಿರ್ವಹಿಸಲ್ಪಡುವ ಸ್ವತ್ತುಗಳು ಗರಿಷ್ಠ ಮಟ್ಟದಲ್ಲಿ ಮತ್ತೊಮ್ಮೆ ಮುಕ್ತಾಯಗೊಂಡಿವೆ. ಇದು ಪ್ರಸ್ತುತ ಸಾಂಕ್ರಾಮಿಕ ಸಮಯದಲ್ಲಿ ಸಾಧಿಸಿದ ಗರಿಷ್ಠಕ್ಕಿಂತ ಕೇವಲ ಶೇ 6ರಷ್ಟು ಕಡಿಮೆಯಾಗಿದೆ.
ಆಗಸ್ಟ್‌ನಲ್ಲಿ, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ತನ್ನ ಚಿನ್ನದ ಹಿಡುವಳಿಗಳನ್ನು ಸತತ ಹತ್ತನೇ ತಿಂಗಳು ಹೆಚ್ಚಿಸಿದೆ. ಈ ಮೂಲಕ ತನ್ನ ಮೀಸಲುಗಳನ್ನು ಯುಎಸ್ ಡಾಲರ್‌ನಿಂದ ಬೇರೆಡೆ ತಿರುಗಿಸುವ ಕೆಲಸವನ್ನು ಮುಂದುವರೆಸಿದೆ. ಇದರ ಬೆನ್ನಲ್ಲೇ ಕಳೆದ ವಾರ ಟ್ರಂಪ್ ಆಡಳಿತವು ಚಿನ್ನ ಮತ್ತು ಇತರ ಕೆಲವು ಲೋಹಗಳನ್ನು ತನ್ನ ದೇಶ ಆಧಾರಿತ ಸುಂಕಗಳಿಂದ ವಿನಾಯಿತಿ ಘೋಷಿಸಿದ್ದರು.