ಅಪಘಾತದಲ್ಲಿ ಕಾಜಲ್ ಅಗರ್ವಾಲ್ ನಿಧನ ವದಂತಿ: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಟಿ ಹೇಳಿದ್ದಿಷ್ಟು

ಅಪಘಾತದಲ್ಲಿ ಕಾಜಲ್ ಅಗರ್ವಾಲ್ ನಿಧನ ವದಂತಿ: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಟಿ ಹೇಳಿದ್ದಿಷ್ಟು
By Published : September 9, 2025 at 3:13 PM IST

ಸೆಪ್ಟೆಂಬರ್ 8ರಂದು ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಇನ್ನಿಲ್ಲ ಎಂಬ ವದಂತಿ ಹರಡಿತು. ಈ ಸುಳ್ಳು ಸುದ್ದಿ ಶರವೇಗದಲ್ಲಿ ವೈರಲ್ ಆದ ಹಿನ್ನೆಲೆ, ಅವರ ಅಭಿಮಾನಿಗಳು ಮತ್ತು ಫಾಲೋವರ್ಸ್​​​ ಬಹಳಾನೇ ಆತಂಕಗೊಂಡಿದ್ದರು. ಇದೀಗ ಸ್ವತಃ ನಟಿ ತಾವು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಕಾಜಲ್, ಅಫೀಶಿಯಲ್​​ ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ಜನರ ಕಳವಳ ದೂರ ಮಾಡಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲೇನಿದೆ?: "ನಾನು ಅಪಘಾತಕ್ಕೀಡಾಗಿದ್ದೇನೆ (ನಟಿ ಇನ್ನಿಲ್ಲ!) ಎಂದು ಹೇಳುವ ಕೆಲ ಆಧಾರರಹಿತ ಸುದ್ದಿಗಳನ್ನು ನಾನು ನೋಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವು ತುಂಬಾನೇ ತಮಾಷೆಯಾಗಿದೆ. ಏಕೆಂದರೆ, ಅವು ಸಂಪೂರ್ಣ ಸುಳ್ಳು ಮಾಹಿತಿ. ದೇವರ ದಯೆಯಿಂದ, ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ, ಸುರಕ್ಷಿತವಾಗಿದ್ದೇನೆ ಎಂದು ನಿಮ್ಮೆಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ" ಎಂದು ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

Actress Kajal Aggarwal Instagram Story

'ಸುಳ್ಳು ಸುದ್ದಿಗಳನ್ನು ಹರಡಬೇಡಿ': ಜೊತೆಗೆ, "ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ನಾನು ವಿನಂತಿಸುತ್ತೇನೆ. ಬದಲಾಗಿ, ಸಕಾರಾತ್ಮಕತೆ ಮತ್ತು ಸತ್ಯದ ಮೇಲೆ ನಮ್ಮ ಗಮನ ಹರಿಸೋಣ" ಎಂದು ಕೇಳಿಕೊಂಡಿದ್ದಾರೆ.

ಊಹಾಪೋಹಗಳಿಗೆ ಫುಲ್​ಸ್ಟಾಪ್: ಕಾಜಲ್​​ ಅಗರ್ವಾಲ್​​ ಸಾವಿನ ಬಗ್ಗೆ ಸುಳ್ಳು ಸುದ್ದಿಗಳು ಕಾಳ್ಗಿಚ್ಚಿನಂತೆ ಹರಡಿತು. ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಲು ಶುರು ಮಾಡಿದ್ರು. ಅವರ ಅಪಘಾತ ಎಂದು ಹೇಳಿಕೊಳ್ಳುವ ವಿಡಿಯೋಗಳೂ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡವು. ಇದೀಗ ಸ್ವತಃ ಕಾಜಲ್ ಅವರೇ ಪ್ರತಿಕ್ರಿಯಿಸಿರುವ ಹಿನ್ನೆಲೆ, ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಕಾಜಲ್ ಅಗರ್ವಾಲ್ ದಕ್ಷಿಣ ಭಾರತ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ನಟಿಯರಲ್ಲೊಬ್ಬರು. ಇತ್ತೀಚೆಗೆ, ರೋಹಿತ್ ಶೆಟ್ಟಿ ನಿರ್ದೇಶನದ ಸಿಂಘಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅವರು, ಅಮೋಘ ಅಭಿನಯಕ್ಕಾಗಿ ಮೆಚ್ಚುಗೆ ಗಳಿಸಿದರು. ಕಾಜಲ್ ಶ್ರೀಲಂಕಾದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

2020ರ ಅಕ್ಟೋಬರ್ 30ರಂದು, ಉದ್ಯಮಿ ಗೌತಮ್ ಕಿಚ್ಲು ಅವರೊಂದಿಗೆ ದಾಂಪತ್ಯ ಜೀವನ ಶುರು ಮಾಡಿದರು. ದಂಪತಿ ತಮ್ಮ ಮೊದಲ ಮಗು ನೀಲ್​​ನನ್ನು ಏಪ್ರಿಲ್ 19, 2022ರಂದು ಬರಮಾಡಿಕೊಂಡರು. ತಾಯ್ತನದ ಬಳಿಕ ನಟಿ ಸಿನಿಮಾಗಳಿಂದ ದೂರವುಳಿದು, ಕುಟುಂಬದೆಡೆಗೆ ಸಂಪೂರ್ಣ ಗಮನ ಹರಿಸಿದ್ದಾರೆ.

📚 Related News