ನವದೆಹಲಿ: 2025ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಶೇ. 16ರಷ್ಟು ಕುಸಿದಿದೆ. ಆದರೆ, ಹೂಡಿಕೆ ವಿಚಾರದಲ್ಲಿ ಇದು ತದ್ವಿರುದ್ಧವಾಗಿದ್ದು, ಸುರಕ್ಷತೆ ದೃಷ್ಟಿಯಿಂದಾಗಿ ಇದರ ಹೂಡಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಜಾಗತಿಕ ಬಂಗಾರ ಮಂಡಳಿ ತಿಳಿಸಿದೆ. ಆಭರಣ ಪ್ರಿಯರ ಆಕರ್ಷಿಸದ ಹಿನ್ನೆಲೆ ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ ಬಂಗಾರದಲ್ಲಿ ಈ ವರ್ಷದ ಆರಂಭಕ್ಕೆ ಹೋಲಿಕೆ ಮಾಡಿದರೆ, 209. 4ರಷ್ಟು ಕುಸಿತ ಕಂಡಿದೆ ಎಂದು ಮಂಡಳಿ ತಿಳಿಸಿದೆ.
ಈ ಕುಸಿತದ ನಡುವೆಯೂ ಬಂಗಾರದ ಮೌಲ್ಯ ಶೇ. 23ರಷ್ಟು ಹೆಚ್ಚಳ ಕಂಡಿದೆ. ವಿಶ್ವದ ಎರಡನೇ ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಆಭರಣಗಳ ಬೇಡಿಕೆಯು ಶೇ. 31 ರಷ್ಟು ಕುಸಿದು 171. 6 ಟನ್‌ಗಳಿಂದ 117.
7 ಟನ್‌ಗಳಿಗೆ ತಲುಪಿದೆ. ಆದರೆ, ಖರೀದಿದಾರರು ಹೆಚ್ಚಿದ ಬೆಲೆ ಮಟ್ಟಕ್ಕೆ ಹೊಂದಿಕೊಂಡಂತೆ ಆಭರಣ ಖರೀದಿಯ ಮೌಲ್ಯವು ಸುಮಾರು 1,14,270 ಕೋಟಿ ರೂ. ಗಳಲ್ಲಿ ಸ್ಥಿರವಾಗಿ ಉಳಿದಿದೆ. ಹೂಡಿಕೆ ಬೇಡಿಕೆಯೂ ಗಮನಾರ್ಹವಾಗಿ ಬಲವಾಗಿದ್ದು, ಪರಿಮಾಣದಲ್ಲಿ ಶೇ. 20 ರಷ್ಟು ಏರಿಕೆಯಾಗಿ 91.
6 ಟನ್‌ಗಳಿಗೆ ತಲುಪಿದೆ. ಮೌಲ್ಯದಲ್ಲಿ ಶೇ. 74 ರಷ್ಟು ಏರಿಕೆಯಾಗಿ 51,080 ಕೋಟಿ ರೂ. ಗಳಿಂದ 88,970 ಕೋಟಿ ರೂ. ಗಳಿಗೆ ತಲುಪಿದೆ.
ಇದು ಭಾರತೀಯ ಗ್ರಾಹಕರಲ್ಲಿ ಚಿನ್ನದ ದೀರ್ಘಾವಧಿಯ ಮೌಲ್ಯದ ಸಂಗ್ರಹದ ಬಗ್ಗೆ ಆಳವಾದ ಕಾರ್ಯತಂತ್ರದ ಬದ್ಧತೆಯನ್ನು ತೋರಿಸುತ್ತದೆ ಎಂದು ವಿಶ್ವ ಚಿನ್ನದ ಮಂಡಳಿಯ ಭಾರತದ ಪ್ರಾದೇಶಿಕ ಸಿಇಒ ಸಚಿನ್ ಜೈನ್ ಹೇಳಿದರು. ಮೂರನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೆಲೆ 10ಗ್ರಾಂಗೆ 97,074. 9 ರೂ. ಗೆ ಏರಿಕೆಯಾಗಿದ್ದು, ಇದು ಹಿಂದಿನ ವರ್ಷದ ಆಮದು ಸುಂಕ ಮತ್ತು ಜಿಎಸ್‌ಟಿ ಹೊರತುಪಡಿಸಿ 6,614. 1 ರೂ.
ರಿಂದ ಶೇ. 46 ರಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಬೆಲೆಗಳು ಪ್ರತಿ ಔನ್ಸ್‌ಗೆ ಸರಾಸರಿ 3,456. 5 ಡಾಲರ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 2,474. 3 ಡಾಲರ್ ಆಗಿತ್ತು.
ಮಾರಾಟದಲ್ಲಿ ಕುಸಿತ ಕಂಡುಬಂದರೂ, ದೀಪಾವಳಿ ಸಮಯದಲ್ಲಿ ಅಕ್ಟೋಬರ್‌ನಲ್ಲಿ ಚಿಲ್ಲರೆ ವ್ಯಾಪಾರಿಗಳಿಂದ ಆರಂಭಿಕ ಚಿಹ್ನೆಗಳು ಮತ್ತು ಬಲವಾದ ಮಾರಾಟ, ನಿರ್ಣಾಯಕ ಹಬ್ಬ ಮತ್ತು ವಿವಾಹ ಋತುವಿನಲ್ಲಿ ವಹಿವಾಟು ಕಂಡಿದೆ. ಬಂಗಾರದ ಬೇಡಿಕೆಯಲ್ಲಿ ಶೇ. 16 ರಷ್ಟು ಕುಸಿತ ಕಂಡುಬಂದಿದೆ. ಆದರೆ ಮೌಲ್ಯದಲ್ಲಿ ಶೇ. 23 ರಷ್ಟು ಏರಿಕೆಯಾಗಿದೆ.
ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇತ್ತೀಚಿನ ತಿಂಗಳಲ್ಲಿ ಬೆಲೆ ಏರಿಕೆಯ ನಡುವೆ ಗ್ರಾಹಕರು ಮದುವೆ ಮತ್ತಿತರ ಕಾರ್ಯಕ್ಕೆ ಬಂಗಾರ ಖರೀದಿಸಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ ಇದರ ಮೇಲಿನ ನಂಬಿಕೆ ಹೆಚ್ಚಿಸಿದೆ. ಚಿನ್ನದ ಆಮದಿನಲ್ಲಿ ಶೇ. 37 ರಷ್ಟು ಕುಸಿದು 308. 2 ಟನ್‌ಗಳಿಂದ 194.
6 ಟನ್‌ಗಳಿಗೆ ತಲುಪಿದ್ದರೆ, ಮರುಬಳಕೆ ಶೇ. 7 ರಷ್ಟು ಕುಸಿದು 21. 8 ಟನ್‌ಗಳಿಗೆ ತಲುಪಿದೆ ಎಂದರು.








