ಹೈದಾರಾಬಾದ್:ದೇಶದ ಅತಿದೊಡ್ಡ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜಂಟಿ ಪ್ರವೇಶ ಪರೀಕ್ಷೆ ಮುಖ್ಯ ಪರೀಕ್ಷೆಗಾಗಿ (ಜೆಇಇ ಮುಖ್ಯ 2026) ಆನ್‌ಲೈನ್ ಅರ್ಜಿಗಳು ಅಕ್ಟೋಬರ್ ಕೊನೆಯ ವಾರದಿಂದ ಪ್ರಾರಂಭವಾಗಲಿವೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈ ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಿದ್ದು, ಈ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ ರಾಷ್ಟ್ರೀಯ ಪರೀಕ್ಷಾ ಅಂಸ್ಥೆಯು ತಾತ್ಕಾಲಿಕ ಪರೀಕ್ಷಾ ದಿನಾಂಕವನ್ನು ಘೋಷಿಸುವ ಸಲಹೆಯನ್ನು ನೀಡಿದೆ ಎಂದು ರಾಜಸ್ಥಾನದ ಕೋಟಾ ಮೂಲದ ಶಿಕ್ಷಣ ತಜ್ಞ ದೇವ್ ಶರ್ಮಾ ತಿಳಿಸಿದ್ದಾರೆ. ಇದೇ ವಾರದಲ್ಲಿ ಅಧಿಕೃತ ವೆಬ್‌ಸೈಟ್ https://jeemain. nta.
nic. in/ನಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಈ ಆನ್‌ಲೈನ್ ಅರ್ಜಿಗಳು ಇಂದು ಅಥವಾ ನಾಳೆ ಪ್ರಾರಂಭವಾಗಬಹುದು. ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕಾಯುತ್ತಿದ್ದಾರೆ. ಕಳೆದ ವರ್ಷ 14.
75 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ 15. 39 ಲಕ್ಷಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಅರ್ಜಿಗಳನ್ನು ಹಾಕಿದ್ದರು. ಈ ಬಾರಿ ಡೆಮೊ ಲಿಂಕ್: ಮೊದಲ ಬಾರಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅರ್ಜಿಗಳಿಗಾಗಿ ಡೆಮೊ ಲಿಂಕ್ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ, ವಿದ್ಯಾರ್ಥಿಗಳು ಅಗತ್ಯವಿರುವ ದಾಖಲೆಗಳನ್ನು ಮುಂಚಿತವಾಗಿ ನೋಡಬಹುದು.
ಆ ದಾಖಲೆಗಳ ಆಧಾರದ ಮೇಲೆ ತಮ್ಮ ಆನ್‌ಲೈನ್ ಅರ್ಜಿಯನ್ನು ಹೇಗೆ ಪೂರ್ಣಗೊಳಿಸಬೇಕು ಎಂಬುದನ್ನು ಸಹ ವಿವರಣೆಯಲ್ಲಿ ನೀಡಲಾಗುವುದು. ಅಭ್ಯರ್ಥಿಗಳು ಜನವರಿ ಮತ್ತು ಏಪ್ರಿಲ್ ಎರಡೂ ಅವಧಿಗಳಿಗೆ ಏಕಕಾಲದಲ್ಲಿ ಅರ್ಜಿ ಸಲ್ಲಿಸಬಹುದು, ಅಥವಾ ಅವರು ಪ್ರತ್ಯೇಕವಾಗಿಯೂ ಸಹ ಅರ್ಜಿಗಳನ್ನು ಸಲ್ಲಿಸಬಹುದು. ಮೊದಲ ಅವಧಿಯಿಂದ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಕಳೆದ ಸಾಲಿನಲ್ಲಿ ಅರ್ಜಿ ಆಹ್ವಾನಿಸಿದ್ದ ಎನ್‌ಟಿಎ ಅರ್ಜಿ ಸಲ್ಲಿಕೆ ಗಡುವನ್ನು ನಿಗದಿತ ದಿನಾಂಕಗಳನ್ನು ವಿಸ್ತರಿಸಿರಲಿಲ್ಲ. ಈ ಬಾರಿಯೂ ಅದೇ ರೀತಿ ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ ಇದೆ.
ಈ ಹಿನ್ನೆಲೆ ವಿದ್ಯಾರ್ಥಿಗಳು ಡೆಮೊ ಲಿಂಕ್ ಬಳಸಿ ಮುಂಚಿತವಾಗಿ ತಯಾರಿ ಮಾಡಿಕೊಳ್ಳಬೇಕು ಮತ್ತು ಪರೀಕ್ಷೆಯ ಮೊದಲ ವಾರದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ್ ಮತ್ತು ವರ್ಗ ಪ್ರಮಾಣ ಪತ್ರಗಳಿಗೆ ಸಂಸ್ಥೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಬಗ್ಗೆ ಅಭ್ಯರ್ಥಿಗಳು ಮುಂಚಿತವಾಗಿ ಗಮನ ವಹಿಸಬೇಕಿದೆ.








