ತೆಲುಗು ರಾಜಕಾರಣಿಯಾದ ಶಿವಣ್ಣ: 'ಗುಮ್ಮಡಿ ನರಸಯ್ಯ' ಫಸ್ಟ್ ಲುಕ್ ಅನಾವರಣ

ತೆಲುಗು ರಾಜಕಾರಣಿಯಾದ ಶಿವಣ್ಣ: 'ಗುಮ್ಮಡಿ ನರಸಯ್ಯ' ಫಸ್ಟ್ ಲುಕ್ ಅನಾವರಣ
By Published : October 23, 2025 at 3:14 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾ ದೀಪಾವಳಿ ಹಬ್ಬದ ವಿಶೇಷವಾಗಿ ಘೋಷಣೆಯಾಗಿದೆ. ರಾಜಕಾರಣಿಯಾಗಿ ಶಿವಣ್ಣ ಪ್ರತ್ಯಕ್ಷರಾಗಿದ್ದಾರೆ. ಆಂಧ್ರ ಮೂಲದ ಯೆಲ್ಲಾಂಡು ರಾಜಕಾರಣಿ ಗುಮ್ಮಡಿ ನರಸಯ್ಯ ಜೀವನಗಾಥೆಯಲ್ಲಿ ಕರುನಾಡ ಕಿಂಗ್​ ಆಗಿ ಮಿಂಚಲಿದ್ದಾರೆ. ತೆಲುಗು ಸಿನಿಮಾಗಳಾದ ಚಿರು ಗೋಡವಾಲು, ಲಾವಣ್ಯ ವಿತ್ ಲವ್ ಬಾಯ್ಸ್ ಮುಂತಾದ‌ ಸಿನಿಮಾಗಳಲ್ಲಿ ನಟಿಸಿರುವ ಪರಮೇಶ್ವರ್ ಹಿವ್ರಲೆ‌ ಗುಮ್ಮಡಿ‌ ನರಸಯ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

ಬಿಡುಗಡೆಗೊಂಡಿರುವ ಮೋಷನ್ ಪೋಸ್ಟರ್​ನಲ್ಲಿ ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಹಾಕಿಕೊಂಡು ಸರ್ಕಾರಿ ಕಚೇರಿ ಮುಂದೆ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಎನ್. ಸುರೇಶ್ ರೆಡ್ಡಿ ಬಂಡವಾಳ ಹಾಕಿದ್ದಾರೆ. 'ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡೆಮಾಕ್ರಸಿ' ಅಥವಾ ಸಿ'ಪಿಐ'ನ ಸದಸ್ಯರಾಗಿರುವ ಗುಮ್ಮಡಿ ನರಸಯ್ಯ 1983-1994 ಹಾಗೂ 1999-2009ರ ನಡುವೆ ಯೆಲ್ಲಾಂಡುವಿನ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.

ಈ ಚಿತ್ರ ತೆಲುಗು ಸೇರಿದಂತೆ ಎಲ್ಲಾ ಭಾಷೆಯಲ್ಲಿ ತೆರೆ ಕಾಣಲಿದೆ. ಐದು ಬಾರಿ ಶಾಸಕರಾಗಿದ್ದರೂ ಇವರು ಸೈಕಲ್​ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು. ಇವರ ಬಯೋಫಿಕ್​ನಲ್ಲಿ ಶಿವರಾಜ್ ಕುಮಾರ್ ಮಾಡುತ್ತಿದ್ದು, ಸಹಜವಾಗಿ‌ ಕನ್ನಡ ಹಾಗೂ ತೆಲುಗು ಚಿತ್ರರಂಗದ ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಸಾಲು ಸಾಲು ಚಿತ್ರದಲ್ಲಿ ಶಿವಣ್ಣ ಬ್ಯುಸಿ: ಶಸ್ತ್ರ ಚಿಕಿತ್ಸೆಯ ಬಳಿಕವೂ ಶಿವಣ್ಣ ಅದೇ ಎನರ್ಜಿಯಲ್ಲಿ ವಿಭಿನ್ನ ಚಿತ್ರಗಳತ್ತ ಶಿವಣ್ಣ ಮುನ್ನುಗ್ಗುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರತಿಭಾನ್ವಿತ ನಟ ರಾಜ್.

ಬಿ. ಶೆಟ್ಟಿ - ಮೂವರೂ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ, ಸೂರಜ್ ಪ್ರೊಡಕ್ಷನ್ ಬ್ಯಾನರ್​ನಡಿ ಎಂ. ರಮೇಶ್ ರೆಡ್ಡಿ ನಿರ್ಮಾಣದ 45 ಸಿನಿಮಾ ಇದೇ ಡಿಸೆಂಬರ್ 25ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು '666 ಆಪರೇಷನ್ ಥಿಯೇಟರ್' ಮತ್ತು 'ಡ್ಯಾಡ್' ಶೀರ್ಷಿಕೆಯ ಸಿನಿಮಾ ಈಗಾಗಲೇ ಸೆಟ್ಟೇರಿದ್ದು, ಕೆಲವು ಮಾಹಿತಿಗಳನ್ನು ಸಿನಿಮಾ ತಂಡ ನೀಡಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹ್ಯಾಟ್ರಿಕ್​​ ಹೀರೋನ 'ಡ್ಯಾಡ್' ಚಿತ್ರದ ಎರಡನೇ ಹಂತದ ಚಿತ್ರೀಕರಣ ಕಳೆದ ಸೆಪ್ಟೆಂಬರ್​ ತಿಂಗಳಿನಲ್ಲಿ ಆರಂಭವಾಗಿತ್ತು.

ಈ ಚಿತ್ರದಲ್ಲಿ ಅನೇಕ ವರ್ಷಗಳ ಬಳಿಕ ವೈದ್ಯನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಇನ್ನೂ ಹಲವಾರು ಮೂವಿಗಳಿಗೆ ಕರುನಾಡ ಚಕ್ರವರ್ತಿ ಗ್ರೀನ್​ ಸಿಗ್ನಲ್​ ಕೊಟ್ಟಿದ್ದು ಅಧಿಕೃತ ಮಾಹಿತಿ ಹೊರಬರಬೇಕಿದೆ.

📚 Related News