Quick Summary
This article highlights: . In context: ಹೈದರಾಬಾದ್: ಬಾಲಿವುಡ್ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಕೊನೆಗೂ ತಮ್ಮ ಮಗಳು ದುವಾ ಅವರ ಮುದ್ದಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಈ ಮೂಲಕ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ದೀಪಾವಳಿಯಂದು ಸಪ್ರೈಸ್ ಕೊಟ್ಟಿದ್ದಾರೆ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳುತ್ತಿರುವ ದಂಪತಿ ಫೋಸ್ಟ್ ಮಾಡಿರುವ ಈ ಫೋಟೋ ಇದೀಗ ಸಖತ್ ವೈರಲ್ ಆಗಿದೆ. Stay tuned with The Headline World for more insights and details.
ಹೈದರಾಬಾದ್: ಬಾಲಿವುಡ್ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಕೊನೆಗೂ ತಮ್ಮ ಮಗಳು ದುವಾ ಅವರ ಮುದ್ದಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಈ ಮೂಲಕ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ದೀಪಾವಳಿಯಂದು ಸಪ್ರೈಸ್ ಕೊಟ್ಟಿದ್ದಾರೆ.
ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳುತ್ತಿರುವ ದಂಪತಿ ಫೋಸ್ಟ್ ಮಾಡಿರುವ ಈ ಫೋಟೋ ಇದೀಗ ಸಖತ್ ವೈರಲ್ ಆಗಿದೆ. ದೀಪಿಕಾ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ದೀಪಾವಳಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಇದರ ಜೊತೆಗೆ, ನಗುತ್ತಿರುವ ಮುದ್ದು ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಫೋಟೋಗಳಲ್ಲಿ ದೀಪಿಕಾ, ಚಿನ್ನಾಭರಣ ಧರಿಸಿದ್ದು ಸಾಂಪ್ರದಾಯಿಕ ಕೆಂಪು ರೇಷ್ಮೆ ಸಲ್ವಾರ್ ಕಮೀಜ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ತಲೆಗೆ ಮಲ್ಲಿಗೆ ಹೂವುಗಳಿಂದ ಅಲಂಕರಿಸಲ್ಪಟ್ಟ ಬನ್, ಅಚ್ಚುಕಟ್ಟಾಗಿ ಕಟ್ಟಿದ ಕೂದಲು ಅವರಿಗೆ ಕ್ಲಾಸಿಕ್ ಲುಕ್ ಕೊಟ್ಟಿವೆ. ಇನ್ನು ದಂತದ ಬಣ್ಣದ ಶೆರ್ವಾನಿ ಮತ್ತು ಲೇಯರ್ಡ್ ಮುತ್ತಿನ ಹಾರ ಧರಿಸಿ ರಣವೀರ್ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ.
ಆದರೆ, ಎಲ್ಲರ ಗಮನ ಸೆಳೆದಿದ್ದು ಮಾತ್ರ ಇವರ ಪುಟ್ಟ ಮಗಳು ದುವಾ. ಕೆಂಪು ಬಣ್ಣದ ಉಡುಪು ಧರಿಸಿ, ಎರಡು ಸಣ್ಣ ಪೋನಿಟೇಲ್‌ಗಳೊಂದಿಗೆ ಮಗಳು ಪೋಷಕರ ತೋಳುಗಳಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ದೀಪಿಕಾ ತಮ್ಮ ದೀಪಾವಳಿ ಪೂಜೆಯ ಸಮಯದಲ್ಲಿ ಮಗಳನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಿರುವುದನ್ನು ಮತ್ತೊಂದು ಫೋಟೋದಲ್ಲಿ ನೀವು ನೋಡಬಹುದು. ಇದು ಅಭಿಮಾನಿಗಳ ಮನಗೆದ್ದಿದೆ.
2018ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ರಣವೀರ್-ದೀಪಿಕಾ ಅವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಇದಾಗಿ ಸುಮಾರು ಆರು ವರ್ಷಗಳ ನಂತರ 2024ರ ಸೆಪ್ಟೆಂಬರ್‌ನಲ್ಲಿ ದುವಾ ಜನಿಸಿದ್ದಾಳೆ. ಮಗು ಜನಿಸಿದ ನಂತರ ದೀಪಿಕಾ ಮತ್ತು ರಣವೀರ್ ಮಾಧ್ಯಮಗಳ ಕ್ಯಾಮರಾ ಕಣ್ಣುಗಳಿಂದ ತಮ್ಮ ಮಗಳನ್ನು ರಕ್ಷಿಸಿಕೊಳ್ಳುತ್ತಿದ್ದರು.
ಆದರೆ, ಈ ದೀಪಾವಳಿ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ತಮ್ಮ ಮಗಳನ್ನು ತೋರಿಸಿದ್ದಾರೆ. ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳ ದಿಲ್ ಖುಷ್ ಆಗಿದೆ. ದುವಾ ಯಾರ ರೀತಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂಬುದರ ಕುರಿತೇ ಅವರು ಹೆಚ್ಚು ಚರ್ಚೆ ಮಾಡುತ್ತಿದ್ದಾರೆ.
ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ ಎಕ್ಸ್ ಸಾಮಾಜಿಕ ಜಾಲತಾಣಗಳವರೆಗೆ ಅಭಿಮಾನಿಗಳು ಮಗುವಿನ ನೋಟದ ಕುರಿತೇ ಉತ್ಸಾಹದಿಂದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಒಬ್ಬ ಅಭಿಮಾನಿ, ಪುಟಾಣಿ ದುವಾ ಇಬ್ಬರ ಸಂಪೂರ್ಣ ಮಿಶ್ರಣದಂತೆ ಕಾಣುತ್ತಾಳೆ. ಅವಳಿಗೆ ದೀಪಿಕಾರ ಕಣ್ಣುಗಳು ಮತ್ತು ಡಿಂಪಲ್‌ಗಳಿವೆ. ಆದರೆ ರಣವೀರ್ ಅವರ ಅಭಿವ್ಯಕ್ತಿಗಳಿವೆ ಎಂದು ಹೇಳಿದ್ದಾರೆ. ಅವಳಿಗೆ ಡಿಂಪಲ್‌ಗಳಿವೆ, ಮೂವರು ಕೂಡಾ ತುಂಬಾ ಮುದ್ದಾಗಿದ್ದಾರೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಇನ್ನು ಇತರರು, ಆಕೆ ತನ್ನ ತಂದೆಯನ್ನು ಹೆಚ್ಚು ಹೋಲುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ರಣವೀರ್ ಕಣ್ಣುಗಳು, ಡಿಪಿಯ ಕೆನ್ನೆಗಳು ಮತ್ತು ಡಿಂಪಲ್‌ಗಳು, ಎಂತಹ ಮಿಶ್ರಣ ಎಂಬುದು ಇನ್ನೊಬ್ಬರ ಮಾತು. ನನಗೆ ಅವಳು ಡಿಪಿಯ ಕಣ್ಣುಗಳನ್ನು ಹೊಂದಿರುವ ರಣವೀರ್ ರಂತೆ ಕಾಣಿಸುತ್ತಿದ್ದಾಳೆ ಎಂದು ಮತ್ತೊಬ್ಬ ನೆಟ್ಟಿಗ ಅಭಿಪ್ರಾಯಪಟ್ಟಿದ್ದಾರೆ.
ಸೆಲೆಬ್ರಿಟಿಗಳೂ ಸಹ ಇದಕ್ಕೆ ದನಿಗೂಡಿಸಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್ ಪ್ರತಿಕ್ರಿಯಿಸಿ, ಮಗುವಿಗೆ ದೇವರ ಆಶೀರ್ವಾದವಿರಲಿ. ಬೇಬಿ ದುವಾ ಅಮ್ಮ ಅಪ್ಪನ ಪರಿಪೂರ್ಣ ಮಿಶ್ರಣ ಎಂದಿದ್ದಾರೆ. ಬಿಪಾಶಾ ಬಸು ಅವರು, ವಾವ್, ಮಗುವಿಗೆ ದೇವರ ಆಶೀರ್ವಾದವಿರಲಿ. ದುರ್ಗಾ ದುರ್ಗಾ ಎಂದು ಬರೆದಿದ್ದಾರೆ. ಆಯುಷ್ಮಾನ್ ಖುರಾನಾ, ಎಂತಹ ಪರಿಪೂರ್ಣ ಮಿಶ್ರಣ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Content compiled and formatted by The Headline World editorial team.







