ಬಜರಂಗದಳ ನಾಯಕನಿಗೆ ಗುಂಡಿಕ್ಕಿ ಹತ್ಯೆ: ಆರೋಪಿಯೊಬ್ಬನ ತಂದೆ ಆತ್ಮಹತ್ಯೆ

ಬಜರಂಗದಳ ನಾಯಕನಿಗೆ ಗುಂಡಿಕ್ಕಿ ಹತ್ಯೆ: ಆರೋಪಿಯೊಬ್ಬನ ತಂದೆ ಆತ್ಮಹತ್ಯೆ
By Published : October 29, 2025 at 7:48 AM IST

ಕಟ್ನಿ (ಮಧ್ಯಪ್ರದೇಶ):ಬೈಕ್​ನಲ್ಲಿ ಬಂದ ಇಬ್ಬರು ಮುಸುಕುಧಾರಿ ಯುವಕರು ಬಜರಂಗದಳ ನಾಯಕ ನಿಲೇಶ್​ ಅಲಿಯಾಸ್​ ನೀಲು ರಜಕ್​ ಅವರನ್ನು ಹಾಡಹಗಲೇ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ. ಅವರನ್ನು ಬಂಧಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿದೆ. ಕೊಲೆಯಾಗಿರುವ ಮಾಹಿತಿ ಹರಡುತ್ತಿದ್ದಂತೆ ಕೈಮೋರ್​ನಲ್ಲಿ ಪರಿಸ್ಥಿತಿ ಉದ್ವಿಗ್ನತೆಗೆ ಕಾರಣವಾಗಿದೆ. ಹೆಚ್ಚಿನ ಪೊಲೀಸ್​ ನಿಯೋಜನೆ:ಇಡೀ ಪಟ್ಟಣವನ್ನು ಪೊಲೀಸ್ ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ.

ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಜಬಲ್ಪುರ ಡಿಐಜಿ ಅತುಲ್ ಸಿಂಗ್ ನೇತೃತ್ವದಲ್ಲಿ ಕೈಮೋರ್‌ನಲ್ಲಿ ಧ್ವಜ ಮೆರವಣಿಗೆ ನಡೆಸಲಾಯಿತು. ಕೈಮೋರ್ ಪೊಲೀಸ್ ಠಾಣೆಯ ಜೊತೆಗೆ, ವಿಜಯರಾಘವಗಢ ಮತ್ತು ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಜರಂಗದಳ ನಾಯಕ ನೀಲೇಶ್ ಅಲಿಯಾಸ್ ನೀಲು ರಜಕ್ ಹತ್ಯೆಯ ಸುದ್ದಿ ಹರಡುತ್ತಿದ್ದಂತೆ, ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ, ಘಟನೆಯನ್ನು ಪ್ರತಿಭಟಿಸಲು ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜನರು ಬೀದಿಗಿಳಿದರು. ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ ಕುಟುಂಬ:ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ, ನಿಲೇಶ್​ ಅವರ ಮಂಗಳವಾರ ಸಂಜೆ ಹೊತ್ತಿಗೆ, ಶವದ ಮರಣೋತ್ತರ ಪರೀಕ್ಷೆ ಮಾಡಲು ನಿರಾಕರಿಸಿದರು. ಈ ಮಧ್ಯೆ, ಸ್ಥಳೀಯ ನಿವಾಸಿಗಳು ವಿಜಯರಾಘವಗಢ ಸರ್ಕಾರಿ ಆಸ್ಪತ್ರೆಯ ಮುಂದೆ ರಸ್ತೆ ತಡೆ ನಡೆಸಿದರು.

ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ:ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬ್ಯಾಂಕ್ ಆಫ್ ಬರೋಡಾ ಮುಂದೆ ಈ ಕೊಲೆ ಸಂಭವಿಸಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಬಜರಂಗದಳ ನಾಯಕ ಮತ್ತು ಮಾಜಿ ಗೋ ಸೇವಾ ಪ್ರಮುಖ್ ನೀಲೇಶ್ ಅಲಿಯಾಸ್ ನೀಲು ರಜಕ್ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ತಕ್ಷಣ ನೀಲೇಶ್ ರಜಕ್ ಅವರನ್ನು ವಿಜಯರಾಘವ್‌ಗಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಕೊಲೆ ಆರೋಪಿಯೊಬ್ಬನ ತಂದೆ ಆತ್ಮಹತ್ಯೆ: "ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.

ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಿದ್ದಾರೆ. ಪ್ರಮುಖ ಆರೋಪಿಗಳಾದ ಪ್ರಿನ್ಸ್ ಜೋಸೆಫ್ ಮತ್ತು ಅಕ್ರಮ್ ಅವರ ಮನೆಗಳ ಮೇಲೆ ದಾಳಿ ನಡೆಸಲಾಯಿತು, ಆದರೆ ಇಬ್ಬರೂ ತಲೆಮರೆಸಿಕೊಂಡಿದ್ದಾರೆ" ಎಂದು ವಿಜಯರಾಘವಗಢ ಎಸ್‌ಡಿಒಪಿ ವೀರೇಂದ್ರ ಧರ್ವೆ ಹೇಳಿದ್ದಾರೆ. ಕಟ್ನಿ ಪೊಲೀಸ್ ವರಿಷ್ಠಾಧಿಕಾರಿ ಅಭಿನಯ್ ವಿಶ್ವಕರ್ಮ ಅವರು ಮಾತನಾಡಿ, "ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳಲ್ಲಿ ನೆಲ್ಸನ್ ಜೋಸೆಫ್ (30) ಮತ್ತು ಅಕ್ರಮ್ ಖಾನ್ (33) ಸೇರಿದ್ದಾರೆ. ಇಬ್ಬರೂ ಪ್ರಸ್ತುತ ಪರಾರಿಯಾಗಿದ್ದಾರೆ.

ಕೊಲೆ ಆರೋಪಿ ಜೋಸೆಫ್ ತಂದೆ ಪೊಲೀಸ್ ದಾಳಿಗೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.

📚 Related News