ಇನ್ನು ಕೆಲವು ದಿನಗಳು ಕಳೆದರೆ ಚಳಿಗಾಲ ಬಂದು ಬಿಡುತ್ತದೆ. ಹವಾಮಾನ ಕ್ರಮೇಣ ತಣ್ಣಗಾಗುತ್ತಿದೆ. ಎಲ್ಲಾ ಮನೆಗಳಲ್ಲಿ ಹವಾನಿಯಂತ್ರಣಗಳನ್ನು ಆಫ್ ಮಾಡುವ ಮೂಲಕ ಗೀಸರ್ ಬಳಸುವ ದಿನಗಳು ಹತ್ತಿರವಾಗುತ್ತಿವೆ. ಈ ದಿನಗಳಲ್ಲಿ ಹೊಸ ಗೀಸರ್ ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಕುಟುಂಬಕ್ಕೆ ಎಷ್ಟು ಲೀಟರ್ ಸಾಮರ್ಥ್ಯವು ಪರಿಪೂರ್ಣವಾಗಿರುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಸಣ್ಣ ತ್ವರಿತ ಗೀಸರ್‌ಗಳಿಂದ ದೊಡ್ಡ ಶೇಖರಣಾ ಗೀಸರ್‌ಗಳವರೆಗೆ, ಗೀಸರ್‌ಗಳು ವಿವಿಧ ಗಾತ್ರಗಳು, ಪ್ರಕಾರಗಳು ಹಾಗೂ ಬಜೆಟ್‌ಗಳಲ್ಲಿ ದೊರೆಯುತ್ತವೆ.
ಇವುಗಳ ಸರಿಯಾದ ಸಾಮರ್ಥ್ಯ ಆರಿಸುವುದರಿಂದ ವಿದ್ಯುತ್ ಮಾತ್ರವಲ್ಲದೆ ನೀರು ಸಹ ಉಳಿತಾಯವಾಗುತ್ತದೆ. ಈಗ ನಿಮ್ಮ ಕುಟುಂಬಕ್ಕೆ ಯಾವ ಗಾತ್ರದ ಗೀಸರ್ ಉತ್ತಮ ಎಂಬುದನ್ನು ತಿಳಿಯೋಣ. ಒಬ್ಬ ವ್ಯಕ್ತಿಗೆ:ನೀವು ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ, ಕೆಲಸ ಮಾಡುತ್ತಿರಲಿ ಅಥವಾ ಅಧ್ಯಯನ ಮಾಡುತ್ತಿರಲಿ, 3-ಲೀಟರ್ ಇನ್ಸ್ಟೆಂಟ್ ಗೀಸರ್ ಅತ್ಯುತ್ತಮ ಆಯ್ಕೆ. ಈ ಸಣ್ಣ ಗಾತ್ರದ ಗೀಸರ್ ಬಹಳ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ. ವಿಶೇಷವೆಂದರೆ ಅಂತಹ ಸಣ್ಣ ಗೀಸರ್ ಕೇವಲ 2 ರಿಂದ 3 ನಿಮಿಷಗಳಲ್ಲಿ ನೀರನ್ನು ಬಿಸಿ ಮಾಡುತ್ತವೆ.
ಇದು ಒಬ್ಬ ವ್ಯಕ್ತಿಯ ಸ್ನಾನ ಅಥವಾ ದೈನಂದಿನ ಬಳಕೆಗೆ ಅನುಕೂಲಕರ. ಇಬ್ಬರ ಕುಟುಂಬಕ್ಕೆ:ಮನೆಯಲ್ಲಿ ಇಬ್ಬರು ಜನರಿದ್ದರೆ, 10 ಲೀಟರ್ ಸಂಗ್ರಹ ಸಾಮರ್ಥ್ಯವಿರುವ ಗೀಸರ್ ಉತ್ತಮ ಆಯ್ಕೆ. ಈ ಗೀಸರ್ ಏಕಕಾಲದಲ್ಲಿ ಇಬ್ಬರಿಗೆ ಆರಾಮವಾಗಿ ಸ್ನಾನ ಮಾಡಲು ಸಾಕಷ್ಟು ನೀರನ್ನು ಬಿಸಿ ಮಾಡುತ್ತದೆ. ಜೊತೆಗೆ ಈ ಗೀಸರ್ ನೀರನ್ನು ದೀರ್ಘಕಾಲದವರೆಗೆ ಬಿಸಿಯಾಗಿರಿಸುತ್ತದೆ. ವಿದ್ಯುತ್ ಬಳಕೆಯನ್ನು ಕೂಡ ಕಡಿಮೆ ಮಾಡುತ್ತದೆ.
3 ರಿಂದ 4 ಜನರಿಗೆ:ಮನೆಯಲ್ಲಿ ಮೂರು ಅಥವಾ ನಾಲ್ಕು ಜನರು ಇದ್ದರೆ, 15 ರಿಂದ 25 ಲೀಟರ್ ಸಾಮರ್ಥ್ಯವಿರುವ ಗೀಸರ್ ಉತ್ತಮವಾಗಿದೆ. ಇದು ಇಡೀ ಕುಟುಂಬವು ಒಬ್ಬೊಬ್ಬರಾಗಿ ಆರಾಮವಾಗಿ ಸ್ನಾನ ಮಾಡಲು ಸಾಕಷ್ಟು ನೀರನ್ನು ಸಂಗ್ರಹಿಸಲು ಸಹಾಯಕವಾಗಿದೆ. 4 ರಿಂದ 6 ಸದಸ್ಯರ ಕುಟುಂಬಕ್ಕೆ:ಕುಟುಂಬದಲ್ಲಿ 4 ರಿಂದ 6 ಸದಸ್ಯರಿದ್ದರೆ, 25 ರಿಂದ 35 ಲೀಟರ್ ಸಾಮರ್ಥ್ಯವಿರುವ ಗೀಸರ್ ಸೂಕ್ತವಾಗಿರುತ್ತದೆ. ಒಂದು ಇಲ್ಲವೇ ಎರಡು ದೊಡ್ಡ ಸ್ನಾನಗೃಹಗಳನ್ನು ಹೊಂದಿರುವ ಮನೆಗಳಿಗೆ ಇದು ಉತ್ತಮ. ಮುಖ್ಯವಾದ ವಿಷಯವೆಂದರೆ ಒಮ್ಮೆ ಬಿಸಿ ಮಾಡಿದ ನಂತರ, ಈ ದೊಡ್ಡ ಗೀಸರ್‌ನಲ್ಲಿರುವ ನೀರು ದೀರ್ಘಕಾಲದವರೆಗೆ ಬಿಸಿಯಾಗಿರುತ್ತದೆ.
ಅಂದರೆ ಅದನ್ನು ಪುನಹ ಆನ್ ಮಾಡುವ ಅಗತ್ಯ ಇರುವುದಿಲ್ಲ. ಗೀಸರ್ ನೀರಿನಿಂದ ಸ್ನಾನ ಮಾಡುವುದರ ಅನಾನುಕೂಲಗಳೇನು?:ಅಧಿಕರಕ್ತದೊತ್ತಡ ಹೆಚ್ಚಳ:ಬಿಸಿ ಗೀಸರ್ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಅಧಿಕವಾಗುತ್ತದೆ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ರಕ್ತದೊತ್ತಡ ಹೆಚ್ಚಿಸಲು ಕಾರಣವಾಗುತ್ತದೆ. ಇದು ಅಧಿಕ ರಕ್ತದೊತ್ತಡ ಇರುವವರಿಗೆ ಸೂಕ್ತವಲ್ಲ.
ಹೃದಯ ಬಡಿತಕ್ಕೂ ಅಪಾಯಕಾರಿ:ಬಿಸಿ ಗೀಸರ್ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯ ಬಡಿತ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಲು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಹೃದಯ ಸಮಸ್ಯೆ ಇರುವವರು ಸಾಮಾನ್ಯವಾಗಿ ಗೀಸರ್ ನೀರಿನಲ್ಲಿ ಸ್ನಾನ ಮಾಡವುದು ಉತ್ತಮವಲ್ಲ. ನರಗಳ ಒತ್ತಡ:ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಅತಿಯಾದ ಬಿಸಿನೀರು ಸ್ನಾನ ಮಾಡುವುದರಿಂದ ಕೀಲುಗಳು ಮತ್ತು ಸ್ನಾಯುಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದು ಸ್ನಾಯುಗಳ ಬಿಗಿತದಂತಹ ಸ್ನಾಯು ಸಮಸ್ಯೆಗಳು ಮತ್ತು ಬಂಜೆತನದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಫಲವತ್ತತೆಯ ಪರಿಣಾಮ:30 ನಿಮಿಷಗಳಿಗಿಂತ ಹೆಚ್ಚು ಕಾಲ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ, ಅತಿಯಾದ ಬಿಸಿನೀರು ವೀರ್ಯವನ್ನು ದುರ್ಬಲಗೊಳಿಸುತ್ತದೆ ಹಾಗೂ ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ. ಕೂದಲು ಉದುರುವಿಕೆ:ಬಿಸಿನೀರಿನಿಂದ ಕೂದಲನ್ನು ತೊಳೆಯುವುದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಬಿಸಿನೀರು ಕೂದಲನ್ನು ಶುಷ್ಕಗೊಳಿಸುತ್ತದೆ. ದೀರ್ಘಕಾಲದವರೆಗೆ ಬಿಸಿನೀರನ್ನು ಬಳಸುವುದರಿಂದ ನಿಮ್ಮ ಕೂದಲಿನ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುತ್ತದೆ.
ಕೂದಲನ್ನು ತೊಳೆಯಲು ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಬಳಿಕ ಕಂಡಿಷನರ್ ಇಲ್ಲವೇ ಮಾಯಿಶ್ಚರೈಸರ್ ಹಚ್ಚಬೇಕು. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಸಮಸ್ಯೆಗಳು:ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ಚರ್ಮವು ಒಣಗುತ್ತದೆ. ಬಿಸಿನೀರು ಚರ್ಮವು ಅದರ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕುತ್ತದೆ.
ಹಾಗಾಗಿ ಚರ್ಮವು ಒರಟಾಗುತ್ತದೆ ಹಾಗೂ ಒಣಗುತ್ತದೆ. ನಿರ್ಜಲೀಕರಣ:ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಹಾಗೂ ಅತಿಯಾದ ಬೆವರು, ನಿರ್ಜಲೀಕರಣವಾಗಬಹುದು. ಇದರ ಪರಿಣಾಮದಿಂದ ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸಬಹುದು. ಹಾಗಾಗಿ ವೈದ್ಯರು ಸ್ನಾನದ ಬಳಿಕ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ. ಇದರಿಂದ ದೇಹದ ಕಳೆದುಹೋದ ನೀರಿನ ಅಂಶವನ್ನು ಪುನರ್ ತುಂಬಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.








