ಭಾರತ vs ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ಮಳೆಗಾಹುತಿ

ಭಾರತ vs ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ಮಳೆಗಾಹುತಿ
By Published : October 29, 2025 at 5:25 PM IST

IND vs AUS T20:ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇಂದು ಕ್ಯಾನ್​ಬೆರಾದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ದುಕೊಂಡ ಆಸೀಸ್​ ತಂಡದ ನಾಯಕ ಮಿಚೆಲ್​ ಮಾರ್ಷ್​ ಟೀಮ್​ ಇಂಡಿಯಾ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು. ಅದರಂತೆ, ಮೊದಲ ಇನ್ನಿಂಗ್ಸ್​ ಪ್ರಾರಂಭಿಸಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಅಭಿಷೇಕ್​ ಶರ್ಮಾ ಮತ್ತು ಶುಭ್​ಮನ್​ ಗಿಲ್ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದು 35 ರನ್​ಗಳ ಜೊತೆಯಾಟವಾಡಿದರು. ಅಭಿಷೇಕ್​ ಆರಂಭದಿಂದಲೇ ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾದರು.

14 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 19 ರನ್​ ಸಿಡಿಸಿದರು. ಆದರೆ, ನಥನ್​ ಎಲ್ಲಿಸ್​ ಎಸೆತದಲ್ಲಿ ಬೌಂಡರಿ ಬಾರಿಸುವ ಯತ್ನದಲ್ಲಿ ಟಿಮ್​ ಡೇವಿಡ್​ ಕೈಗೆ ಕ್ಯಾಚಿತ್ತು​ ಪೆವಿಲಿಯನ್​ಗೆ ಮರಳಿದರು. ಈ ವೇಳೆ ಕ್ರೀಸಿಗೆ ಆಗಮಿಸಿದ ನಾಯಕ ಸೂರ್ಯಕುಮಾರ್​ ಯಾದವ್​ ಮತ್ತು ಶುಭ್​ಮನ್​ ಗಿಲ್​ ತಂಡದ ಸ್ಕೋರ್​ ಹೆಚ್ಚಿಸತೊಡಗಿದರು. ಆದರೆ 5ನೇ ಓವರ್​ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿತ್ತು. 20 ಓವರ್​ಗಳ ಪಂದ್ಯವನ್ನು 18 ಓವರ್​ಗಳಿಗೆ ಕಡಿತಗೊಳಿಸಲಾಯಿತು.

ಅರ್ಧಗಂಟೆಯ ನಂತರ ಮಳೆ ನಿಂತ ಬೆನ್ನಲ್ಲೆ ಪಂದ್ಯ ಪುನಾರಂಭಗೊಂಡಿತು. 9. 4 ಓವರ್​ ವೇಳೆ ಮತ್ತೆ ಮಳೆ ಬಂದ ಕಾರಣ ಪಂದ್ಯವನ್ನು ಮತ್ತೆ ನಿಲ್ಲಿಸಲಾಯಿತು. ಆದರೆ, ಮಳೆ ನಿಲ್ಲದ ಕಾರಣ ಅಂಪೈರ್​ ಪಂದ್ಯ ರದ್ದುಗೊಳಿಸಿದರು. ಈ ವೇಳೆ ಭಾರತ 1 ವಿಕೆಟ್​ ನಷ್ಟಕ್ಕೆ 94 ರನ್ ಗಳಿಸಿತ್ತು.

ಉಪನಾಯಕ ಗಿಲ್​ 20 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್​ ಸಿಡಿಸಿ ಅಜೇಯ 37 ರನ್​ ಕಲೆಹಾಕಿದರು. ಸೂರ್ಯಕುಮಾರ್​ ಯಾದವ್​ 24 ಎಸೆತಗಳನ್ನೆದುರಿಸಿ 39 ರನ್ ಬಾರಿಸಿದರು. ಎರಡನೇ ಪಂದ್ಯ:ಅ. 31ರಂದು ಉಭಯ ತಂಡಗಳು ಎರಡನೇ ಪಂದ್ಯ ಆಡಲಿವೆ. ಈ ಪಂದ್ಯ ಮೆಲ್ಬರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿದೆ.

Ind vs Aus ಟಿ20 ವೇಳಾಪಟ್ಟಿ:2ನೇಪಂದ್ಯ - ಅಕ್ಟೋಬರ್ 31 (ಮೆಲ್ಬರ್ನ್)3ನೇ ಪಂದ್ಯ - ನವೆಂಬರ್ 2 (ಹೊಬಾರ್ಟ್)4ನೇ ಪಂದ್ಯ - ನವೆಂಬರ್ 6 (ಗೋಲ್ಡ್ ಕೋಸ್ಟ್)5ನೇ ಪಂದ್ಯ - ನವೆಂಬರ್ 8 (ಬ್ರಿಸ್ಬೇನ್)ಟಿ20 ಸರಣಿಗೆ ತಂಡಗಳು:ಭಾರತ:ಸೂರ್ಯಕುಮಾರ್​ ಯಾದವ್​ (ನಾಯಕ), ಅಭಿಷೇಕ್​ ಶರ್ಮಾ, ಶುಭ್​ಮನ್​ ಗಿಲ್, ತಿಲಕ್ ವರ್ಮಾ​, ನಿತೀಶ್​ ಕುಮಾರ್​ ರೆಡ್ಡಿ, ಶಿವಂ ದುಬೆ, ಅಕ್ಷರ್​ ಪಟೇಲ್​, ಜಿತೇಶ್​ ಶರ್ಮಾ, ವರುಣ್​ ಚಕ್ರವರ್ತಿ, ಜಸ್ಪ್ರೀತ್​ ಬುಮ್ರಾ, ಅರ್ಷದೀಪ್​ ಸಿಂಗ್​, ಕುಲ್ದೀಪ್​ ಯಾದವ್​, ಅರ್ಷಿತ್​ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್​ ಸುಂದರ್​. ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ಡಾರ್ಶಿಯಸ್​, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯ್ನಿಸ್, ಆ್ಯಡಂ ಜಂಪಾ.

📚 Related News