ಉಜ್ಜೈನಿ (ಮಧ್ಯ ಪ್ರದೇಶ):ಪ್ರೀತಿ ಮುಂದೆ ಬೇರೆ ವಿಷಯಗಳು ಲೆಕ್ಕಕ್ಕೆ ಬರುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಉಜ್ಜೈನಿಯ ಈ ಜೋಡಿ. ಹೌದು, 35 ವರ್ಷದ ಆ ವ್ಯಕ್ತಿ ಕೇವಲ ಎರಡೂವರೆ ಅಡಿ ಎತ್ತರವಿದ್ದಾರೆ. ಬೆನ್ನು ಬಾಗಿದ್ದು, ದೈಹಿಕವಾಗಿ ಸದೃಢವಾಗಿಲ್ಲದಿದ್ದರೂ, ಅವರು ಮಾನಸಿಕವಾಗಿ ಸದೃಢ ಮತ್ತು ಚುರುಕಾಗಿದ್ದಾರೆ. ಇವರನ್ನು ಪ್ರೇಮಿಸಿದ ಇವರಿಗಿಂತ ವಯಸ್ಸಿನಲ್ಲಿ 10 ವರ್ಷ ಕಿರಿಯರಾದ ಯುವತಿಯನ್ನು ವರಿಸಿ ಸುಂದರ ದಾಂಪತ್ಯ ನಡೆಸುತ್ತಿದ್ದಾರೆ. ನಾಲ್ಕು ವರ್ಷದ ದಾಂಪತ್ಯದ ಕುರುಹಾಗಿ ಓರ್ವ ಮಗಳು ಕೂಡ ಇದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ, ಸ್ನೇಹ:ಸಾಕಷ್ಟು ಸಾಮಾಜಿಕ ನಿಂದನೆಗಳಿಗೆ ತುತ್ತಾದರೂ ಈ ಜೋಡಿ ತಲೆಕೆಡಿಸಿಕೊಳ್ಳದೆ ಪ್ರೀತಿಯ ಅಡಿಪಾಯದಿಂದ ಬದುಕಿನ ಬಂಡಿ ಎಳೆಯುತ್ತಿದ್ದಾಳೆ. ಒಟ್ಟಿಗೆ ಸುಖವಾಗಿ, ನೆಮ್ಮದಿಯಾಗಿ ಸಂಸಾರ ನಡೆಸುತ್ತಿರುವ ಈ ಕುಟುಂಬ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮ ನಮ್ಮ ಪ್ರೀತಿಗೆ ವೇದಿಕೆಯಾಯಿತು. ನಮ್ಮ ಕುಟುಂಬ ಸದಸ್ಯರು ಒಪ್ಪದಿದ್ದಾಗ ನಾವು ಸ್ನೇಹಿತರ ಸಹಾಯದಿಂದ ಓಡಿಹೋಗಿ ನ್ಯಾಯಾಲಯದಲ್ಲಿ ವಿವಾಹವಾದೆವು. ನಮಗೆ ಒಂದೂವರೆ ವರ್ಷದ ಮಗಳಿದ್ದಾಳೆ ಎಂದಿದ್ದಾರೆ.
ಇಬ್ಬರ ಕುಟುಂಬದ ಹಿನ್ನೆಲೆ:ಉಜ್ಜೈನಿಯ ನೈ ಪೈತ್‌ನಲ್ಲಿರುವ ಸೂಟ್ ಮಾರುಕಟ್ಟೆಯಲ್ಲಿ ವಾಸಿಸುವ 35 ವರ್ಷದ ರೋಹಿತ್ ನಾಗಮೋತಿಯಾ ಮತ್ತು ಅವರ 25 ವರ್ಷದ ಪತ್ನಿ ಟೀನಾ ನಾಗಮೋತಿಯಾ ಪ್ರೀತಿಯಲ್ಲಿ ತ್ಯಾಗ ಮತ್ತು ಸಮರ್ಪಣೆಗೆ ಉದಾಹರಣೆಯಾಗಿದ್ದಾರೆ. ರೋಹಿತ್ ನಾಗಮೋತಿಯಾ ಕುಟುಂಬ ಶ್ರೀ ಮಹಾಕಾಲ್ ದೇವಾಲಯದ ಹೊರಗೆ ಹಾರ ಮತ್ತು ಹೂವಿನ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರಿಗೆ ತಾಯಿ, ಸಹೋದರ ಮತ್ತು ಸಹೋದರಿ ಇದ್ದಾರೆ. ರೋಹಿತ್ ಅವರ ಪತ್ನಿ ಟೀನಾ ನಾಗಮೋತಿಯಾಗೆ ಅಣ್ಣ, ಒಬ್ಬ ತಮ್ಮ ಮತ್ತು ಒಬ್ಬ ತಂಗಿ ಇದ್ದಾರೆ. ಅವರಿಗೆ ತಂದೆ ಇದ್ದಾರೆ.
2007ರಲ್ಲಿ ಕ್ಯಾನ್ಸರ್ನಿಂದ ತಾಯಿಯನ್ನು ಕಳೆದುಕೊಂಡಿದ್ದಾರೆ. ಮನೆಯಲ್ಲಿ ಕಾಸ್ಮೆಟಿಕ್ ಅಂಗಡಿ ನಡೆಸುವ ಟೀನಾ:ನಾವಿಬ್ಬರು ಒಟ್ಟಿಗೇ ಜೀವನ ನಡೆಸುತ್ತಿದ್ದು, ದೈನಂದಿನ ದಿನಚರಿಯಲ್ಲಿ ಕೆಲವು ಸಮಸ್ಯೆ ಇದ್ದರೆ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಮದುವೆಗೆ ಮುನ್ನ ರೋಹಿತ್ಗೆ ಸ್ನಾನ, ಊಟದಿಂದ ಹಿಡಿದು ಎಲ್ಲ ಕಾರ್ಯವನ್ನು ಅವರ ತಂದೆ ನಡೆಸುತ್ತಿದ್ದರು. ಇದೀಗ ಟೀನಾ ಆ ಕೆಲಸವನ್ನು ಮಾಡುತ್ತಿದ್ದಾರೆ. ಈ ಮುಂಚೆ ಆಕೆ ರೆಸ್ಟೋರೆಂಟ್ ಹೊಂದಿದ್ದರು.
ಇದೀಗ ಅದನ್ನು ಬಂದ್ ಮಾಡಿ, ಮನೆಯಲ್ಲಿ ಪತಿಯ ಸೇವೆಯಲ್ಲಿ ತೊಡಗಿದ್ದಾರೆ. ಟೀನಾ ಮನೆಯಲ್ಲಿಯೇ ಕಾಸ್ಮೆಟಿಕ್ ಶಾಪ್ ತೆರೆದಿದ್ದು, ಅವರ ಜೀವನ ಸಾಗುತ್ತಿದೆ. ಕುಟುಂಬದ ಒಪ್ಪಿಗೆಯಿಲ್ಲದೆ ಮದುವೆ:2017-18ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪರಸ್ಪರ ಹತ್ತಿರ ಆದೆವು. ನಮ್ಮಿಬ್ಬರ ನಡುವಿನ ಸ್ನೇಹವೂ ಕ್ರಮೇಣ ಪ್ರೀತಿಯಾಯಿತು. ಒಂದೇ ಸಮುದಾಯಕ್ಕೆ ಸೇರಿದ ಹಿನ್ನೆಲೆ ನಾವು ಪರಸ್ಪರ ಮನೆಗೆ ಭೇಟಿ ನೀಡುತ್ತಿದ್ದೆವು.
2022ರಲ್ಲಿ ಮದುವೆಯಾಗಲು ನಿರ್ಧರಿಸಿದೆವು. ಈ ಕುರಿತು ಮೊದಲಿಗೆ ಮನೆಯಲ್ಲಿ ಹೇಳಿದಾಗ ರೋಹಿತ್ ಮನೆಯವರು ನೀನು ಯಾಕೆ ಹುಡುಗಿಯ ಜೀವನವನ್ನು ಹಾಳು ಮಾಡುತ್ತೀಯಾ ಎಂದರು. ಟೀನಾಳ ಮನೆಯವರೂ ಅದನ್ನೇ ಹೇಳಿದರು. ಇಂತಹ ಹುಡುಗನನ್ನು ಮದುವೆಯಾದರೆ ಜೀವನವೆಲ್ಲಾ ಹೋರಾಟದ ಬದಲು ಏನು ಆಗುವುದಿಲ್ಲ ಎಂದರು. ಬಳಿಕ ಇಬ್ಬರೂ ಸ್ನೇಹಿತರ ಸಹಾಯದಿಂದ ನ್ಯಾಯಾಲಯದಲ್ಲಿ ವಿವಾಹವಾದರು.
10 ದಿನಗಳ ನಂತರ ಅವರ ಎರಡೂ ಕುಟುಂಬಗಳು ಅವರನ್ನು ಒಪ್ಪಿಕೊಂಡವು. ಇಂದು ಇಬ್ಬರೂ ತುಂಬಾ ಸಂತೋಷವಾಗಿದ್ದು, ಒಂದು ಹೆಣ್ಣು ಮಗು ಕೂಡ ಇದೆ ಎಂದು ಟೀನಾ ಹೇಳಿದರು. ನಿಂದನೆಗಳಿಗೆ ಪ್ರೀತಿಯೇ ಬಲ: ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಟೀನಾ ಮತ್ತು ರೋಹಿತ್ ಒಟ್ಟಿಗೆ ರೀಲ್ ಮಾಡುತ್ತಾರೆ. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಸಮಾಜದ ನಿಂದನೆ ಹೊರತು ಪ್ರೀತಿ ನಮ್ಮ ಬಂಧವನ್ನು ಬೆಸೆದಿದೆ.
ನಮ್ಮ ಕುಟುಂಬ ಸದಸ್ಯರು ನಮ್ಮ ಬಗ್ಗೆ ಹಲವು ಮಾತನಾಡಿದರೂ ಅದನ್ನು ಮೀರಿ ನಾವು ಖುಷಿಯಾಗಿ ಜೀವನ ಮಾಡುತ್ತಿದ್ದೇವೆ ಎಂದರು.








