ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ: ಅನುಮೋದನೆಯೊಂದೇ ಬಾಕಿ, ವ್ಯಾಕ್ಸಿನ್ ಯಾರಿಗೆಲ್ಲಾ ಪ್ರಯೋಜನಕಾರಿ?

ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ: ಅನುಮೋದನೆಯೊಂದೇ ಬಾಕಿ, ವ್ಯಾಕ್ಸಿನ್ ಯಾರಿಗೆಲ್ಲಾ ಪ್ರಯೋಜನಕಾರಿ?
By Published : September 10, 2025 at 3:46 PM IST

Russia Developed Cancer Vaccine: ಪ್ರಪಂಚದಾದ್ಯಂತ ಪ್ರತಿದಿನ ಅನೇಕ ಕ್ಯಾನ್ಸರ್​ನಿಂದ ಬಳಲುತ್ತಿರುವವರ ಸಂಖ್ಯೆಯು ಏರಿಕೆಯಾಗುತ್ತಿದೆ. ಕ್ಯಾನ್ಸರ್ ಒಂದು ಮಾರಕ ಕಾಯಿಲೆಯಾಗಿದೆ. ಈ ಕ್ಯಾನ್ಸರ್ ಕುರಿತು ಭಯಪಡುವ ಅಗತ್ಯವಿಲ್ಲ. ಇದೀಗ ಕ್ಯಾನ್ಸರ್ ಲಸಿಕೆಯನ್ನು ತಯಾರಿಸಲಾಗಿದೆ. ರಷ್ಯಾ ಪ್ರಪಂಚದಾದ್ಯಂತ ಲಕ್ಷಾಂತರ ಕ್ಯಾನ್ಸರ್ ರೋಗಿಗಳಿಗೆ ಗುಡ್​ ನ್ಯೂಸ್​ ನೀಡಿದೆ.

ರಷ್ಯಾದ ವಿಜ್ಞಾನಿಗಳ ತಂಡವು ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನು ಫೆಡರಲ್ ವೈದ್ಯಕೀಯ ಮತ್ತು ಜೈವಿಕ ಸಂಸ್ಥೆ (FMBA) ಅಭಿವೃದ್ಧಿಪಡಿಸಿದೆ. ರಷ್ಯಾದ ಸುದ್ದಿ ಸಂಸ್ಥೆ TASS ವರದಿಯ ಪ್ರಕಾರ, FMBA ಮುಖ್ಯಸ್ಥೆ ವೆರೋನಿಕಾ ಸ್ಕ್ವೋರ್ಟ್ಸೊವಾ ಪೂರ್ವ ಆರ್ಥಿಕ ವೇದಿಕೆಯಲ್ಲಿ (EEF) ರಷ್ಯಾದ ಕ್ಯಾನ್ಸರ್ ಲಸಿಕೆ ಅತ್ಯುತ್ತಮ ಫಲಿತಾಂಶಗಳನ್ನು ತೋರಿಸಿದೆ ಎಂದು ತಿಳಿಸಿದ್ದಾರೆ. ಈ ಲಸಿಕೆ ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಶೇ.100 ಪ್ರೀಕ್ಲಿನಿಕಲ್ ಪರೀಕ್ಷೆಗಳಲ್ಲಿ ಯಶಸ್ವಿ: FMBD ಮುಖ್ಯಸ್ಥೆ ವೆರೋನಿಕಾ ಸ್ಕ್ವೊರ್ಟ್ಸೊವಾ ಅವರು ಈ mRNA-ಆಧಾರಿತ ಲಸಿಕೆ ಎಲ್ಲಾ ಪ್ರೀ ಕ್ಲಿನಿಕಲ್ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಪಾಸ್​ ಆಗಿದ್ದು, ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿದೆ. ಪುನರಾವರ್ತಿತ ಬಳಕೆಯ ನಂತರವೂ ಈ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಪ್ರೀ ಕ್ಲಿನಿಕಲ್ ಪರೀಕ್ಷೆಗಳು ಯಶಸ್ವಿಯಾಗಿದೆ ಎಂದು ತೋರಿಸಿವೆ. ಕಾಲಾನಂತರದಲ್ಲಿ ಗೆಡ್ಡೆಗಳ ಗಾತ್ರ ಮತ್ತು ಬೆಳವಣಿಗೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಂಶೋಧಕರು ಗಮನಿಸಿದ್ದಾರೆ. ಲಸಿಕೆ ರೋಗಿಗಳ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಿಂದ ತಿಳಿದಿದೆ.

ಅನುಮೋದನೆಗಾಗಿ ವೆಟಿಂಗ್: ರಷ್ಯಾದ ಎಂಟರೊಮಿಕ್ಸ್ ಕ್ಯಾನ್ಸರ್ ಲಸಿಕೆ ಈಗ ಬಳಕೆಗೆ ಸಿದ್ಧವಾಗಿದೆ. ವಿಜ್ಞಾನಿಗಳು ಈಗ ಆರೋಗ್ಯ ಸಚಿವಾಲಯದಿಂದ ಲಸಿಕೆಯ ಅನುಮೋದನೆಗಾಗಿ ಕಾಯುತ್ತಿದ್ದಾರೆ. ಈ ಸಂಶೋಧನೆಯು ಹಲವಾರು ವರ್ಷಗಳ ಕಾಲ ನಡೆಯಿತು. ಅದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಪ್ರೀ ಕ್ಲಿನಿಕಲ್ ಅಧ್ಯಯನಗಳನ್ನು ಮಾತ್ರ ನಡೆಸಲಾಗಿದೆ ಎಂದು ಸ್ಕ್ವೊರ್ಟ್ಸೊವಾ ಹೇಳಿದರು. ಲಸಿಕೆ ಈಗ ಬಳಕೆಗೆ ಸಿದ್ಧವಾಗಿದ್ದು, ನಾವು ಅಧಿಕೃತ ಅನುಮೋದನೆಗಾಗಿ ಕಾಯುತ್ತಿದ್ದೇವೆ.

ಕ್ಯಾನ್ಸರ್‌ ಚಿಕಿತ್ಸೆಗಾಗೊ ಈ ಲಸಿಕೆ ಅಭಿವೃದ್ಧಿ: ಈ ಲಸಿಕೆಯ ಆರಂಭಿಕ ಗುರಿ ಕೊಲೊರೆಕ್ಟಲ್ ಕ್ಯಾನ್ಸರ್ ಆಗಿರುತ್ತದೆ ಎಂದು ನಂಬಲಾಗಿದೆ. ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ಕೊಲೊನ್ ಕ್ಯಾನ್ಸರ್ ಎಂದೂ ಕರೆಯಲಾಗುತ್ತದೆ. ಇದು ದೊಡ್ಡ ಕರುಳು (ಕೊಲೊನ್) ಹಾಗೂ ಗುದನಾಳದ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕರುಳಿನ ಕ್ಯಾನ್ಸರ್ ಆಗಿದೆ. ದೊಡ್ಡ ಕರುಳಿನಲ್ಲಿ ಅಸಹಜ ಕೋಶಗಳು ಅನಿಯಂತ್ರಿತವಾಗಿ ಬೆಳೆದು ಗೆಡ್ಡೆಯನ್ನು ರೂಪಿಸಿದಾಗ ಇದು ಸಂಭವಿಸುತ್ತದೆ.

ಈ ಗೆಡ್ಡೆ ಸುತ್ತಮುತ್ತಲಿನ ಅಂಗಾಂಶಗಳ ಮೇಲೆ ದಾಳಿ ಮಾಡಿ ದೇಹದ ಇತರ ಭಾಗಗಳಿಗೆ ಹರಡಬಹುದು. ಇದು ನಿಮ್ಮ ಜೀವವನ್ನು ಸಹ ತೆಗೆದುಕೊಳ್ಳಬಹುದು. ಈ ಕ್ಯಾನ್ಸರ್ ಯುವಜನರಲ್ಲಿ ಹೆಚ್ಚು ಸಾಮಾನ್ಯವಾಗುತ್ತಿದೆ. ಧೂಮಪಾನದಂತಹ ಕೆಲವು ಅಭ್ಯಾಸಗಳು ಅದರ ಅಪಾಯ ಹೆಚ್ಚಿಸುತ್ತವೆ.

ಯಾರಿಗೆ ಈ ಲಸಿಕೆ ಪ್ರಯೋಜನಕಾರಿ? ಶ್ವಾಸಕೋಶ, ಸ್ತನ, ಕೊಲೊರೆಕ್ಟಲ್ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರು ಸಹ ಈ ಲಸಿಕೆಯನ್ನು ತೆಗೆದುಕೊಳ್ಳಬಹುದು. ಆನುವಂಶಿಕ ಕ್ಯಾನ್ಸರ್ ಸಿಂಡ್ರೋಮ್ ಹೊಂದಿರುವ ಹೆಚ್ಚಿನ ಅಪಾಯದ ರೋಗಿಗಳು ಮತ್ತು ಕಿಮೊಥೆರಪಿ-ನಿರೋಧಕ ಕ್ಯಾನ್ಸರ್ ಹೊಂದಿರುವ ರೋಗಿಗಳು ಸಹ ಈ ಲಸಿಕೆಯಿಂದ ಪ್ರಯೋಜನ ಪಡೆಯಬಹುದು. ಸಾಂಪ್ರದಾಯಿಕ ಚಿಕಿತ್ಸೆಗಳನ್ನು ಸಹಿಸದ ಜನರು ಸಹ ಈ ಲಸಿಕೆಯನ್ನು ಪರಿಗಣಿಸಬಹುದು.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

📚 Related News