'ಬಾಘಿ 4': 5 ದಿನದಲ್ಲಿ ₹50 ಕೋಟಿಗೂ ಹೆಚ್ಚು ಕಲೆಕ್ಷನ್​, ಬಾಲಿವುಡ್​​ನಲ್ಲಿ ಕನ್ನಡ ನಿರ್ದೇಶಕನ ಛಾಪು

'ಬಾಘಿ 4': 5 ದಿನದಲ್ಲಿ ₹50 ಕೋಟಿಗೂ ಹೆಚ್ಚು ಕಲೆಕ್ಷನ್​, ಬಾಲಿವುಡ್​​ನಲ್ಲಿ ಕನ್ನಡ ನಿರ್ದೇಶಕನ ಛಾಪು
By Published : September 10, 2025 at 12:41 PM IST

ಬಾಲಿವುಡ್​ ಫಿಟ್ನೆಸ್​ ಸ್ಟಾರ್ ಟೈಗರ್ ಶ್ರಾಫ್ ಮುಖ್ಯಭೂಮಿಕೆಯ 'ಬಾಘಿ' ಫ್ರಾಂಚೈಸ್‌ನ ಬಹುನಿರೀಕ್ಷಿತ ನಾಲ್ಕನೇ ಭಾಗ ಸೆಪ್ಟೆಂಬರ್​​​ 5ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಕನ್ನಡದ ಖ್ಯಾತ ನಿರ್ದೇಶಕ ಎ.ಹರ್ಷ ನಿರ್ದೇಶನದ ಚೊಚ್ಚಲ ಬಾಲಿವುಡ್​​ ಚಿತ್ರ ಬಾಕ್ಸ್​​ ಆಫೀಸ್​ನಲ್ಲಿ ಕಮಾಲ್​ ಮಾಡಿದೆ.

ಬಾಘಿ 4 ನಿರ್ಮಾಪಕರಿಂದ ಕಲೆಕ್ಷನ್​​ ಮಾಹಿತಿ: ಸೆಪ್ಟೆಂಬರ್​ 5ರಂದು ತೆರೆಕಂಡ ಬಾಘಿ 4 ತನ್ನ ಐದನೇ ದಿನ, ಮೊದಲ ಮಂಗಳವಾರದಂದು 4.70 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಇದು ಹಿಂದಿನ ದಿನಗಳ ಗಳಿಕೆಗಿಂತ ಕೊಂಚ ಇಳಿಕೆಯಾಗಿದೆ. 13.20 ಕೋಟಿ ರೂಪಾಯಿಯೊಂದಿಗೆ ಸಿನಿಮಾ ತನ್ನ ಬಾಕ್ಸ್​ ಆಫೀಸ್​ ಪ್ರಯಾಣ ಪ್ರಾರಂಭಿಸಿತ್ತು.

ದಿನಇಂಡಿಯಾ ನೆಟ್​ ಕಲೆಕ್ಷನ್​ಮೊದಲ ದಿನ (ಶುಕ್ರವಾರ)13.20 ಕೋಟಿ ರೂಪಾಯಿ.ಎರಡನೇ ದಿನ (ಶನಿವಾರ)11.34 ಕೋಟಿ ರೂಪಾಯಿ.ಮೂರನೇ ದಿನ (ಭಾನುವಾರ)12.60 ಕೋಟಿ ರೂಪಾಯಿ.ನಾಲ್ಕನೇ ದಿನ (ಮೊದಲ ಸೋಮವಾರ)5.40 ಕೋಟಿ ರೂಪಾಯಿ.ಐದನೇ ದಿನ (ಮೊದಲ ಮಂಗಳವಾರ)4.70 ಕೋಟಿ ರೂಪಾಯಿ.ಒಟ್ಟು47.24 ಕೋಟಿ ರೂಪಾಯಿ.

ಬಾಲಿವುಡ್​​ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಒಡೆತನದ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಎ.ಹರ್ಷ ನಿರ್ದೇಶನದ ಸಿನಿಮಾಗೆ ಬಂಡವಾಳ ಹೂಡಿದೆ. ಅಫೀಶಿಯಲ್​ ಸೋಷಿಯಲ್​ ಮೀಡಿಯಾ ಪೇಜ್​ಗಳಲ್ಲಿ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಕಲೆಕ್ಷನ್​ ಡಿಟೇಲ್ಸ್ ಹಂಚಿಕೊಂಡಿದ್ದು, ಐದು ದಿನಗಳ ಇಂಡಿಯಾ ನೆಟ್​ ಕಲೆಕ್ಷನ್​​ 47.24 ಕೋಟಿ ರೂಪಾಯಿ ಆಗಿದೆ.

ಗ್ಲೋಬಲ್​ ಕಲೆಕ್ಷನ್​​:

ಇಂಡಿಯಾ ನೆಟ್​ ಕಲೆಕ್ಷನ್​: 47.24 ಕೋಟಿ ರೂಪಾಯಿ

ವಿದೇಶದಲ್ಲಿನ ಗಳಿಕೆ: 10 ಕೋಟಿ ರೂಪಾಯಿ.

ಒಟ್ಟು​ ಕಲೆಕ್ಷನ್​: 65.74 ಕೋಟಿ ರೂಪಾಯಿ.

ಸ್ಯಾಕ್ನಿಲ್​​ ವರದಿ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ ವರದಿ ಗಮನಿಸೋದಾದ್ರೆ, ಚಿತ್ರದ ಈವರೆಗಿನ ಇಂಡಿಯಾ ನೆಟ್​ ಕಲೆಕ್ಷನ್​​ 39.75 ಕೋಟಿ ರೂಪಾಯಿ ಆಗಿದೆ.

ದಿನಇಂಡಿಯಾ ನೆಟ್​ ಕಲೆಕ್ಷನ್​ಮೊದಲ ದಿನ (ಶುಕ್ರವಾರ)12 ಕೋಟಿ ರೂಪಾಯಿ.ಎರಡನೇ ದಿನ (ಶನಿವಾರ)9.25 ಕೋಟಿ ರೂಪಾಯಿ.ಮೂರನೇ ದಿನ (ಭಾನುವಾರ)10 ಕೋಟಿ ರೂಪಾಯಿ.ನಾಲ್ಕನೇ ದಿನ (ಮೊದಲ ಸೋಮವಾರ)4.5 ಕೋಟಿ ರೂಪಾಯಿ. ಐದನೇ ದಿನ (ಮೊದಲ ಮಂಗಳವಾರ)4.00 ಕೋಟಿ ರೂಪಾಯಿ. (ಆರಂಭಿಕ ಅಂದಾಜು). ಒಟ್ಟು39.75 ಕೋಟಿ ರೂಪಾಯಿ

ಕನ್ನಡ ನಿರ್ದೇಶಕ ಎ.ಹರ್ಷ ಅವರು ಪ್ರಜ್ವಲ್​​ ದೇವರಾಜ್​ ಅವರ ಗೆಳೆಯ. ಶಿವರಾಜ್​ಕುಮಾರ್​ ಮುಖ್ಯಭೂಮಿಕೆಯ ಭಜರಂಗಿ, ಭಜರಂಗಿ 2, ವಜ್ರಕಾಯ, ವೇದ, ಪುನೀತ್​ ರಾಜ್​ಕುಮಾರ್​ ಅಭಿನಯದ ಅಂಜನಿಪುತ್ರ, ದರ್ಶನ್​ ಅವರ ಚಿಂಗಾರಿ, ಚೇತನ್​ ನಟನೆಯ ಬಿರುಗಾಳಿ ಸೇರಿದಂತೆ ಕೆಲ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಾಘಿ 4ನಲ್ಲಿ ಟೈಗರ್ ಶ್ರಾಫ್ ತಮ್ಮ ಐಕಾನಿಕ್ ರೋನಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಂಜಯ್ ದತ್, ಮಿಸ್ ಯೂನಿವರ್ಸ್ 2021 ಹರ್ನಾಜ್ ಕೌರ್, ಸೋನಮ್ ಬಾಜ್ವಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

📚 Related News