ಮಗನನ್ನು ಉಳಿಸಿಕೊಳ್ಳಲು ತಾಯಿ ತನ್ನ ಕಿಡ್ನಿ ದಾನ ಮಾಡಿದಳು: ಆದರೆ ಮಗನೇ ಬದುಕುಳಿಯಲಿಲ್ಲ; ಹೆಚ್ಚುತ್ತಿರುವ ಸಿಕೆಡಿ ಬಗ್ಗೆ ತಜ್ಞರು ಹೇಳುವುದೇನು?

ಮಗನನ್ನು ಉಳಿಸಿಕೊಳ್ಳಲು ತಾಯಿ ತನ್ನ ಕಿಡ್ನಿ ದಾನ ಮಾಡಿದಳು: ಆದರೆ ಮಗನೇ ಬದುಕುಳಿಯಲಿಲ್ಲ; ಹೆಚ್ಚುತ್ತಿರುವ ಸಿಕೆಡಿ ಬಗ್ಗೆ ತಜ್ಞರು ಹೇಳುವುದೇನು?
By Published : October 30, 2025 at 12:04 PM IST

ಪರ್ವತಗಿರಿ, ತೆಲಂಗಾಣ:ಮಗನನ್ನು ಉಳಿಸಿಕೊಳ್ಳಲು ತನಗೆ ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನು ಮಾಡಿದರು. ಮಗನಿಗಾಗಿ ತಮ್ಮ ಮೂತ್ರಪಿಂಡವನ್ನೂ ದಾನ ಮಾಡಿದಳು. ಆದರೆ, ಮಗ ಮಾತ್ರ ಬದುಕುಳಿಯಲಿಲ್ಲ. ಕುಟುಂಬ ಸದಸ್ಯರು ನೀಡಿದ ವಿವರಗಳ ಪ್ರಕಾರ, ಪರ್ವತಗಿರಿ ಮಂಡಲದ ವಡ್ಲಕೊಂಡ ಗ್ರಾಮದ ಚಿಂತಕಾಯಲ ಸೋಮಕ್ಕ - ಜಂಪಯ್ಯ ದಂಪತಿಗೆ ಮೂವರು ಮಕ್ಕಳಿದ್ದಾರೆ. ಎರಡನೇ ಮಗ ಚಿಂತಕಾಯಲ ನಾಗರಾಜು (33) ಉದ್ಯೋಗಕ್ಕಾಗಿ ತನ್ನ ಪತ್ನಿ ಸ್ವಪ್ನ ಮತ್ತು ಮಗಳು ಅಕ್ಷರಶ್ರೀ ಜೊತೆ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು.

ಅವರು ಕೆಲವು ಸಮಯದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಮೂತ್ರಪಿಂಡ ಕಸಿ ಜೀವಕ್ಕೆ ಅಪಾಯಕಾರಿಯಲ್ಲ ಎಂದು ವೈದ್ಯರು ಸಲಹೆ ಕೂಡಾ ನೀಡಿದ್ದರು. ಮಗನ ಜೀವ ಉಳಿಸಲು, ತಾಯಿ ಸೋಮಕ್ಕ ತನ್ನ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದರು. 10 ದಿನಗಳ ಹಿಂದೆ ವೈದ್ಯರು ಸೋಮಕ್ಕಳ ಮೂತ್ರಪಿಂಡವನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಾಗರಾಜುಗೆ ಶಸ್ತ್ರಚಿಕಿತ್ಸೆಯ ಮೂಲಕ ಕಸಿ ಮಾಡಿದ್ದರು. ಸೋಮವಾರ ಸೋಮಕ್ಕ ಮತ್ತು ನಾಗರಾಜು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಅವರು ಹೈದರಾಬಾದ್‌ನಲ್ಲಿರುವ ಬಾಡಿಗೆ ಮನೆಗೆ ತೆರಳಿದ್ದರು.

ಮಂಗಳವಾರ ಬೆಳಗಿನ ಜಾವ ನಾಗರಾಜು ಅನಾರೋಗ್ಯಕ್ಕೆ ಒಳಗಾದರು. ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಅವರು ನಿಧನರಾದರು. ಸುಮಾರು 15 ಲಕ್ಷ ರೂ. ಖರ್ಚು ಮಾಡಿದರೂ ಮಗನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ತಾಯಿಯನ್ನು ಕಾಡುತ್ತಿತ್ತು. ಮಗನನ್ನು ಕಳೆದುಕೊಂಡು ರೋಧಿಸುತ್ತಿರುವ ಅವರ ಸ್ಥಿತಿ ಎಂತಹವರ ಕರಳನ್ನು ಚುರಕ್​ ಎನ್ನುವಂತೆ ಮಾಡದಿರದು.

ಅತ್ತ ಕುಟುಂಬದ ಮುಖ್ಯಸ್ಥನ ಸಾವಿನೊಂದಿಗೆ ಹೆಂಡತಿ ಮತ್ತು ಮಗಳ ಪರಿಸ್ಥಿತಿಯೂ ಅಸಹನೀಯವಾಗಿದೆ. ಮೂತ್ರಪಿಂಡ ವೈಫಲ್ಯಕ್ಕೆ ಕಾರಣಗಳೇನು?:ಸಾಮಾನ್ಯವಾಗಿ ಮೂತ್ರಪಿಂಡ ರೋಗಿಗಳಿಗೆ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಸ್ಪಷ್ಟ ಕಾರಣಗಳಿರುತ್ತವೆ. ಇತ್ತೀಚೆಗೆ ಅನೇಕ ಜನರಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ನಿಗೂಢ ಕಾರಣಗಳು ಸಹ ಇವೆ. ಉಸ್ಮಾನಿಯಾ ಸರ್ಕಾರಿ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಮೂತ್ರಪಿಂಡ ಶಾಸ್ತ್ರದ ಹಿರಿಯ ಪ್ರಾಧ್ಯಾಪಕಿ ಡಾ.

ಮನಿಷಾ ಸಹಾಯ್ ಮತ್ತು ಅವರ ತಂಡವು ಮೂತ್ರಪಿಂಡ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 30 - 40 ವರ್ಷ ವಯಸ್ಸಿನ ಸುಮಾರು 75 ಯುವಕರನ್ನು ಅಧ್ಯಯನ ಮಾಡಿದೆ. ಇದರಲ್ಲಿ ಹೈದರಾಬಾದ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಸೇರಿದ್ದರು. ಅವರಿಗೆ ಮಧುಮೇಹ ಮತ್ತು ಮೂತ್ರಪಿಂಡಗಳಿಗೆ ಹಾನಿ ಮಾಡುವ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಇರಲಿಲ್ಲ. ಆದಾಗ್ಯೂ ಅವರೆಲ್ಲ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ರೋಗಿಗಳಲ್ಲಿ ಮೂತ್ರಪಿಂಡದ ಬಯಾಪ್ಸಿ ಮಾಡಿದಾಗ, ಒಳ ಪದರಗಳಲ್ಲಿ ತೀವ್ರವಾದ ಉರಿಯೂತ ಕಂಡುಬಂದಿತ್ತು.

ಈ ತೊಂದರೆಗೊಳಗಾಗಿರುವ ಬಹುತೇಕರು ಸಣ್ಣ ವ್ಯಾಪಾರಿಗಳು, ಚಾಲಕರು ಮತ್ತು ಇತರ ಸಣ್ಣ ಕೆಲಸಗಾರರಾಗಿದ್ದಾರೆ. ಕೆಲವು ರೈತರಲ್ಲೂ ಈ ಸಮಸ್ಯೆಯನ್ನು ಗುರುತಿಸಲಾಗಿದೆ. 'ಬಿಸಿ ವಾತಾವರಣದಲ್ಲಿ ಕೆಲಸ ಮಾಡುವುದು, ವಾಯು ಮಾಲಿನ್ಯ, ನೋವು ನಿವಾರಕಗಳ ಅತಿಯಾದ ಬಳಕೆ ಹಾಗೂ ಇತ್ಯಾದಿ ಕಾರಣಗಳಿಂದಾಗಿಯೇ ಎಂದು ನಾವು ಅಧ್ಯಯನ ಮಾಡಿದ್ದೇವೆ ಎಂದು ಡಾ. ಮನೀಷಾ ಸಹಾಯ್ ತಮ್ಮ ತಂಡ ನಡೆಸಿದ ಅಧ್ಯಯನಗಳ ಬಗ್ಗೆ ವಿವರಿಸಿದರು. ಅಷ್ಟೇ ಅಲ್ಲ ಈ ಬಗ್ಗೆ ಇನ್ನೂ ಆಳವಾದ ಅಧ್ಯಯನದ ಅಗತ್ಯವಿದೆ ಎಂದು ಅವರು ಹೇಳಿದರು.

ಜಾಗೃತಿ ಅಗತ್ಯವಿದೆ:ಡಾ. ಮನೀಷಾ ಸಹಾಯ್:ಪ್ರತಿಯೊಬ್ಬರೂ ಮೂತ್ರಪಿಂಡದ ಆರೋಗ್ಯದ ಬಗ್ಗೆ ತಿಳಿದಿರಬೇಕು. ಮಧುಮೇಹ ಮತ್ತು ಬಿಪಿಯಂತಹ ಕಾಯಿಲೆಗಳು ಅವರಿಗೆ ಇಲ್ಲದಿದ್ದರೂ, ಸಿಕೆಡಿ ಪ್ರಕರಣಗಳು ಹೊರಹೊಮ್ಮುತ್ತಿರುವುದು ಆತಂಕಕಾರಿಯಾಗಿದೆ. ಒಡಿಶಾ, ಪುದುಚೇರಿ ಮತ್ತು ಆಂಧ್ರಪ್ರದೇಶದ ಉದ್ದಾನಂ ಪ್ರದೇಶಗಳಲ್ಲಿ ಯುವಕರಲ್ಲಿ ಮೂತ್ರಪಿಂಡದ ಕಾಯಿಲೆಗಳು ಹೆಚ್ಚು ಹೆಚ್ಚು ಕಂಡು ಬರುತ್ತಿವೆ. ಇದರಿಂದ ದೂರ ಇರಲು ವೈದ್ಯರ ಈ ಸಲಹೆಗಳನ್ನು ಪಾಲಿಸಬೇಕಿದೆ:ಇತರ ದೇಶಗಳಲ್ಲಿಯೂ ಇದೇ ರೀತಿಯ ಪ್ರಕರಣಗಳಿವೆ.

ಅನೇಕ ಸಂದರ್ಭಗಳಲ್ಲಿ ರೋಗವು ಮುಂದುವರಿಯುವವರೆಗೆ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಯಾವುದೇ ದೀರ್ಘಕಾಲದ ಕಾಯಿಲೆಗಳಿಲ್ಲದಿದ್ದರೂ, ವರ್ಷಕ್ಕೊಮ್ಮೆ ಮೂತ್ರಪಿಂಡಗಳನ್ನು ಪರೀಕ್ಷಿಸಬೇಕು. ಬಿಪಿ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ, ಧೂಮಪಾನ, ಮದ್ಯಪಾನ ಮತ್ತು ಇತರ ಮಾದಕ ವಸ್ತುಗಳನ್ನು ಸೇವನೆಯನ್ನು ಬಿಡಬೇಕಿದೆ. ಸಾಕಷ್ಟು ವ್ಯಾಯಾಮ ಮಾಡಿ ಮತ್ತು ಪ್ರತಿದಿನ ಪೌಷ್ಟಿಕ ಆಹಾರವನ್ನು ಸೇವಿಸಬೇಕಾದ ಅಗತ್ಯವಿದೆ. ಅಷ್ಟೇ ಅಲ್ಲ ಸಾಕಷ್ಟು ನೀರು ಕುಡಿಯಬೇಕಿದೆ.

ವೈದ್ಯರ ಸಲಹೆ ಇಲ್ಲದೇ ನೋವು ನಿವಾರಕಗಳು, ಆಂಟಾಸಿಡ್‌ಗಳು ಮತ್ತು ಔಷಧಿಗಳನ್ನು ನೀವೇ ಖರೀದಿಸಿ ಬಳಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದನ್ನು ಓದಿ:.

📚 Related News