ಕುಟುಂಬದ ಸದಸ್ಯರೆಲ್ಲರಿಗೂ ಇಷ್ಟವಾಗುವ ಟೇಸ್ಟಿ ಟೇಸ್ಟಿ ಶ್ಯಾವಿಗೆ ಲಡ್ಡು: ತಯಾರಿಸುವುದು ಅತ್ಯಂತ ಸುಲಭ

ಕುಟುಂಬದ ಸದಸ್ಯರೆಲ್ಲರಿಗೂ ಇಷ್ಟವಾಗುವ ಟೇಸ್ಟಿ ಟೇಸ್ಟಿ ಶ್ಯಾವಿಗೆ ಲಡ್ಡು: ತಯಾರಿಸುವುದು ಅತ್ಯಂತ ಸುಲಭ
By Published : October 30, 2025 at 6:00 AM IST

ಶ್ಯಾವಿಗೆಯಿಂದ ಉಪ್ಪಿಟ್ಟು, ಪಾಯಸ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈ ಬಾರಿ ಶ್ಯಾವಿಗೆ ಲಡ್ಡುವನ್ನು ಹೊಸ ರೀತಿಯಲ್ಲಿ ಮಾಡಿ ನೋಡಿ. ಮನೆಯಲ್ಲಿ ಈ ರೀತಿ ಲಡ್ಡು ಮಾಡಿದರೆ ಮಕ್ಕಳು ಹಾಗೂ ವಯಸ್ಕರು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಮನೆಗೆ ಅತಿಥಿಗಳು ಬಂದಾಗ ಅವರಿಗೆ ಏನಾದರೂ ಸಿಹಿ ನೀಡಲು ನೀವು ಬಯಸಿದರೆ, ಸೂಪರ್ ಸ್ವೀಟ್​ ಇದಾಗಿದೆ. ಈ ರೆಸಿಪಿಯನ್ನು ತುಂಬಾ ಕಡಿಮೆ ಸಮಯದಲ್ಲಿ ಕೆಲವೇ ಕಲವು ಪದಾರ್ಥಗಳೊಂದಿಗೆ ತಯಾರಿಸಬಹುದು.

ಲಡ್ಡುಗಳ ರುಚಿಯು ಕೂಡ ಸೂಪರ್ ಆಗಿರುತ್ತದೆ. ಇದೀಗ ಶ್ಯಾವಿಗೆ ಲಡ್ಡುಗಾಗಿ ಅಗತ್ಯವಿರುವ ಪದಾರ್ಥಗಳು ಹಾಗೂ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ. ಶ್ಯಾವಿಗೆ ಲಡ್ಡುಗಾಗಿ ಬೇಕಾಗುವ ಸಾಮಗ್ರಿಗಳು:ತೆಳುವಾದ ಶ್ಯಾವಿಗೆ - 2 ಕಪ್ಬಾದಾಮಿ ಮತ್ತು ಗೋಡಂಬಿ - 2 ಟೀಸ್ಪೂನ್ತುಪ್ಪ - 1 ಟೀಸ್ಪೂನ್ಬೆಲ್ಲ - 1 ಕಪ್ಏಲಕ್ಕಿ ಪುಡಿ - 2 ಟೀಸ್ಪೂನ್ಶ್ಯಾವಿಗೆ ಲಡ್ಡು ತಯಾರಿಸುವ ವಿಧಾನ:ತುಂಬಾ ರುಚಿಕರವಾದ ಶ್ಯಾವಿಗೆ ಲಡ್ಡು ಸಿದ್ಧಪಡಿಸಲು ಮೊದಲಿಗೆ, ಒಂದು ಬಟ್ಟಲಿನಲ್ಲಿ ಎರಡು ಕಪ್ ತೆಳುವಾದ ಶ್ಯಾವಿಗೆಯನ್ನು ಪುಡಿಮಾಡಿಕೊಳ್ಳಿ. ಮತ್ತೊಂದೆಡೆ, ಎರಡು ಚಮಚ ಬಾದಾಮಿ ಮತ್ತು ಗೋಡಂಬಿಯನ್ನು ಮಿಕ್ಸರ್ ಜಾರ್‌ನಲ್ಲಿ ಪುಡಿಮಾಡಿ. ಬಳಿಕ ಪುಡಿಯನ್ನು ಪಕ್ಕಕ್ಕೆ ಇಡಿ.

ಮತ್ತೊಂದೆಡೆ ಒಲೆ ಆನ್ ಮಾಡಿ ಹಾಗೂ ಕಡಾಯಿಯಲ್ಲಿ ಒಂದು ಚಮಚ ತುಪ್ಪವನ್ನು ಸೇರಿಸಿ. ತುಪ್ಪ ಕರಗಿದ ಬಳಿಕ ಕಡಿಮೆ ಉರಿಯಲ್ಲಿ ಎರಡು ಕಪ್ ಪುಡಿಮಾಡಿದ ಶ್ಯಾವಿಗೆಯನ್ನು ಹಾಕಿ ಹುರಿಯಿರಿ. ಬಾದಾಮಿ ಹಾಗೂ ಗೋಡಂಬಿ ಪುಡಿಯನ್ನು ಸೇರಿಸಿ ಮತ್ತು ಒಂದು ನಿಮಿಷ ಮಿಶ್ರಣ ಮಾಡಿ. ಇದೀಗ ಒಲೆ ಆನ್ ಮಾಡಿ ಹಾಗೂ ಮತ್ತೊಂದು ಕಡಾಯಿ ಇಟ್ಟು ಒಂದು ಕಪ್ ಬೆಲ್ಲ ಹಾಗೂ ಸ್ವಲ್ಪ ನೀರಿನೊಂದಿಗೆ ಕರಗಿಸಿ. ಬೆಲ್ಲ ಪಾಕವಾಗುವವರೆಗೆ ಬೇರೆಸಬೇಕು.

ಪಾಕ ಆಗಿದೆಯೇ ಎಂದು ತಿಳಿಯಲು ಸ್ವಲ್ಪ ಪಾಕ ತೆಗೆದುಕೊಂಡು ನೀರಿಗೆ ಸೇರಿಸಿ. ಇದು ಪೇಸ್ಟ್‌ನಂತೆ ಬಂದರೆ ಪಾಕ ಸರಿಯಾಗಿ ಬೆಂದಿದೆ ಎಂದು ತಿಳಿಯಬೇಕು. ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಬಳಿಕ ತಯಾರಿಸಿದ ಶ್ಯಾವಿಗೆ ಸೇರಿಸಿ ಮಿಶ್ರಣ ಮಾಡಿ ಮತ್ತು ಒಲೆ ಆಫ್ ಮಾಡಬೇಕು. ಈಗ ಕೈಗಳಿಗೆ ಸ್ವಲ್ಪ ತುಪ್ಪ ಹಚ್ಚಿ ಹಾಗೂ ಶ್ಯಾವಿಗೆ ಮಿಶ್ರಣವನ್ನು ಲಡ್ಡುಗಳಂತೆ ಮಾಡಿಕೊಳ್ಳಿ.

ಇದೀಗ ರುಚಿಕರವಾದ ಶ್ಯಾವಿಗೆ ಲಡ್ಡುಗಳು ಸವಿಯಲು ಸಿದ್ಧ. ಈ ಶ್ಯಾವಿಗೆ ಲಡ್ಡುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬೇಕು. ನೀವು ಈ ಲಡ್ಡುಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಬಯಸಿದರೆ ಅದಕ್ಕೆ ಅನುಗುಣವಾಗಿ ಶ್ಯಾವಿಗೆ ಹಾಗೂ ಇತರ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.

📚 Related News