ಜಮ್ಮು ಮತ್ತು ಕಾಶ್ಮೀರದಿಂದ ರಾಜಸ್ಥಾನ, ಪಂಜಾಬ್ವರೆಗೆ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ಉತ್ತರ ಭಾರತವು ಪ್ರವಾಹದ ಹಾನಿಯಿಂದ ತತ್ತರಿಸಿದೆ. ಈ ಬಾರಿಯ ಮಾನ್ಸೂನ್ ಮಳೆಗೆ ಗ್ರಾಮಗಳು, ಮನೆಗಳು ಮತ್ತು ಜನರ ಬದುಕು ಕೊಚ್ಚಿಹೋಗಿದೆ. ಪಂಜಾಬ್ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ 3 ಲಕ್ಷ ಎಕರೆಗೂ ಹೆಚ್ಚು ಬೆಳೆ ಮಣ್ಣುಪಾಲಾಗಿದೆ ಎಂದು ವರದಿಯಾಗಿದೆ. ಮಳೆ ಸಂಬಂಧಿ ಸಂಕಷ್ಟದಿಂದ ರಾಜಸ್ಥಾನವು 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರ ಹೆಚ್ಚು ಹಾನಿಗೊಳಗಾದ ರಾಜ್ಯಗಳಾಗಿವೆ. ಹವಾಮಾನ ಇಲಾಖೆ ಹಿಮಾಚಲ ಪ್ರದೇಶ, ಉತ್ತರಾಖಂಡ, ಛತ್ತೀಸ್‌ಗಢ, ಒಡಿಶಾ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಭೀಕರ ಮಳೆ ಉಂಟಾಗಿದ್ದು, ಇದಕ್ಕೆ ಕಾರಣ ಏನು ಎಂಬುದು ನೋಡುವುದು ಅವಶ್ಯವಾಗಿದೆ.
ಮುಂಬೈ ಮತ್ತು ಪಶ್ಚಿಮ ಭಾರತದಲ್ಲಿ ಭಾರಿ ಮಳೆಯಿಂದ ಆರಂಭವಾದ ಬಳಿ ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆ ವಿನಾಶಕಾರಿ ಪರಿಸ್ಥಿತಿ ನಿರ್ಮಾಣ ಮಾಡಿತು. ಮಾನ್ಸೂನ್ನ ಎರಡನೇ ಅಲೆ ಬಂಗಾಳಕೊಲ್ಲಿಯಿಂದ ಹಿಮಾಲಯದ ಕಡೆ ಚಲಿಸುವ ಮಾರುತಗಳು ಮತ್ತು ಹಿಮಾಲಯದಲ್ಲಿ ಮೇಘಸ್ಫೋಟವು ದೇಶದ ಹೆಚ್ಚಿನ ಭಾಗಗಳನ್ನು ಹಾನಿಗೊಳಿಸಿತು. ದೆಹಲಿ-ಎನ್‌ಸಿಆರ್‌ನಲ್ಲಿ ಯಮುನಾ ನದಿಯು ಅಪಾಯಮಟ್ಟ ಮೀರಿ ಹರಿದ ಪರಿಣಾಮ ಸುತ್ತಲಿನ ಪ್ರದೇಶಗಳು ಮುಳುಗಿದವು.

ಆಗಸ್ಟ್ನಲ್ಲಿ ಪಂಜಾಬ್ 253.7 ಮಿಲಿ ಮೀಟರ್ ಮಳೆಯನ್ನು ಪಡೆದಿದ್ದು, ಭೀಕರ ಪ್ರವಾಹ ಅನುಭವಿಸಿತು. ರಾಜ್ಯದಲ್ಲಿ 1988ರಲ್ಲಿ ಉಂಟಾದ ಪ್ರವಾಹಕ್ಕಿಂತ ಹೆಚ್ಚಿನ ಹಾನಿಯನ್ನು ಇದು ತಂದೊಡ್ಡಿದೆ. ಪಂಜಾಬ್ನಲ್ಲಿ ಸಾಮಾನ್ಯಕ್ಕಿಂತ ಶೇ. 75ರಷ್ಟು ಹೆಚ್ಚಿನ ಮಳೆಯಾಗಿದೆ. ಪರಿಣಾಮವಾಗಿ ಮದೊಪುರ್ನಲ್ಲಿ ಬ್ಯಾರೇಜ್ ತುಂಬಿದೆ. ಅನೇಕ ನದಿಗಳು ಮತ್ತು ನೀರಿನ ಮೂಲಗಳು ಉಕ್ಕಿ ಹರಿಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಆರು ರಾಷ್ಟ್ರೀಯ ಹೆದ್ದಾರಿಗಳು ಕೊಚ್ಚಿ ಹೋಗಿದ್ದು, ಸಂಪಪರ್ಕ ಕಡಿತಗೊಂಡಿದೆ. ಹಿಮಾಚಲ ಪ್ರದೇಶವೊಂದರಲ್ಲೇ 45 ಮೇಘಸ್ಫೋಟ, 95 ಬಾರಿ ಪ್ರವಾಹಗಳು ಉಂಟಾದ ಬಗ್ಗೆ ವರದಿಯಾಗಿದೆ.
ಈ ರೀತಿ ಭೀಕರ ಮಳೆಗೆ ಕಾರಣ: ಈ ಹಿಂದೆ ಕೂಡ ಮೇಘಸ್ಪೋಟದೊಂದಿಗೆ ಭಾರಿ ಮಳೆಯಾಗುತ್ತಿತ್ತು. ಆದರೆ, ಆಗ ಮಳೆಯ ನೀರನ್ನು ತಡೆದು ಹಿಡಿಯುವ ಗುಡ್ಡಗಳ ಹಸಿರು, ಮರಗಳು ಇದ್ದವು. ಇವು ನೀರಿನ ಹರಿವನ್ನು ಕಡಿಮೆ ಮಾಡುತ್ತಿದ್ದವು. ನದಿಗಳು ಮತ್ತು ನೀರಿನ ಮೂಲಗಳು ಕೂಡ ಸುತ್ತಲೂ ದಟ್ಟ ಕಾನನದ ಹಸಿರು ಹೊದಿಕೆಯ ನಡುವೆ ಇದ್ದವು. ಆದರೆ, ಇಂದು ಬಹುತೇಕ ನದಿ ಪ್ರದೇಶಗಳು ಖಾಲಿ ಇದ್ದು, ಬಯಲು ಪ್ರದೇಶವಾಗಿದೆ. ಹಿಮಾಲಯದಲ್ಲಿನ ಟಿಂಬರ್ ಮಾಫಿಯಾ ಅರಣ್ಯ ನಾಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ಬೆಟ್ಟಗಳು ಮತ್ತು ನದಿ ಬಯಲು ಪ್ರದೇಶದಲ್ಲಿನ ಅಕ್ರಮ ಗಣಿಗಾರಿಕೆ ಕೂಡ ಅವುಗಳನ್ನು ಬರಿದಾಗಿಸಿದೆ. ಕೋರ್ಟ್ ಆದೇಶದ ಹೊರತಾಗಿ ಕೂಡ ಗಂಗಾದಿಂದ ಬಿಯಾಸ್ವರೆಗೆ ಗಣಿಗಾರಿಕೆ ಮಾಫಿಯಾ ಸಾಗಿದೆ. ಇವುಗಳು ಕಾಲಾನಂತರದಲ್ಲಿ ನದಿಯ ನೈಸರ್ಗಿಕ ಹರಿವನ್ನು ಹಾನಿ ಮಾಡಿದೆ.

ನದಿ ಹರಿವಿನ ದಿಕ್ಕು ಬದಲಾವಣೆಯು ಪ್ರವಾಹಕ್ಕೆ ಆಹ್ವಾನ ಇತ್ತಂತೆ. ಹಿಮಾಚಲ ಪ್ರದೇಶದ ಧರಾಲಿ ಇದಕ್ಕೆ ಉದಾಹರಣೆಯಾಗಿದೆ. ಹಿಮಾಚಲ ಪ್ರದೇಶ ಹಲವು ಕಡೆ ಈ ರೀತಿ ಅನೇಕ ನೈಸರ್ಗಿಕ ತಾಣಗಳನ್ನು ಹಾನಿಮಾಡಿ ಪ್ರವಾಸಿ ಆಕರ್ಷಣ ತಾಣ ಮಾಡಿದ್ದು, ಪ್ರವಾಹವು ಅದನ್ನು ಒಂದು ನಿಮಿಷದಲ್ಲಿ ಎಲ್ಲವನ್ನು ಕೊಚ್ಚಿ ಹೋಗುವಂತೆ ಮಾಡಿದೆ. ಅವೈಜ್ಞಾನಿಕ ರಸ್ತೆಗಳು, ಜಲವಿದ್ಯುತ್ ಯೋಜನೆಗಳ ನಿರ್ಮಾಣದಿಂದ ಉಂಟಾದ ಅಸಮರ್ಪಕ ಅಭಿವೃದ್ಧಿಯು ಸಂಕಷ್ಟಗಳನ್ನು ಹೆಚ್ಚಿಸಿದೆ.
ಏನು ಮಾಡಬಹುದು: ಪ್ರಾಥಮಿಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರವಾಹದಿಂದ ರಕ್ಷಿಸಲ್ಪಟ್ಟ ವ್ಯಕ್ತಿಗಳು ಮತ್ತು ಮೃತರು ಅಥವಾ ಕಾಣೆಯಾದವರ ಕುಟುಂಬಗಳ ಕುಂದುಕೊರತೆಗಳನ್ನು ಆಲಿಸಲು ರಚಿಸಲಾದ ಆಯೋಗ ಅಥವಾ ಸಮಿತಿಯೊಂದಿಗೆ ಜೀವಿತಾವಧಿ ನಷ್ಟದ ಕುರಿತು ಶ್ವೇತಪತ್ರವನ್ನು ಹೊರಡಿಸಲು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಈ ಮೂಲಕ ನಾವು ಸಂತ್ರಸ್ತರ ನೋವಿಗೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಈ ನಷ್ಟಗಳಲ್ಲಿ ಆದ ಜೀವ ಹಾನಿ, ಆಸ್ತಿಪಾಸ್ತಿಗಳ ಹಾನಿ ಮತ್ತು ಬೆಳೆಗಳ ಹಾನಿ ಕುರಿತು ಪರಿಶೀಲಿಸಬೇಕಿದೆ. ಹಾಗೇ ಮುಂದಿನ ಪ್ರವಾಹ ಮಾದರಿ ಪತ್ತೆ ಮತ್ತು ಸಿದ್ಧತೆಯನ್ನು ನಡೆಸಬೇಕಿದೆ.

ಬೆಟ್ಟಗುಡ್ಡ ಹಾಗೂ ಗಿರಿ ಶಿಖರದಲ್ಲಿ ಭವಿಷ್ಯದ ಎಲ್ಲಾ ನಿರ್ಮಾಣಗಳನ್ನು ಸ್ಥಳೀಯ ಸಮುದಾಯದ ಹಿತಾಸಕ್ತಿ ಪರಿಗಣಿಸಬೇಕಿದೆ. ಸಮುದಾಯಕ್ಕೆ ದುರ್ಬಲವಾಗುವ ಯಾವುದೇ ಯೋಜನೆಯನ್ನು ಸರ್ಕಾರವು ಜಾರಿಗೆ ತರಬಾರದು. ಪ್ರತಿ ಯೋಜನೆ ರೂಪಿಸುವಾಗ ಸ್ಥಳೀಯರ ಮಧ್ಯಸ್ಥಿಕೆ ಅವರ ಸಲಹೆ ಮತ್ತು ಸಹಾಯ ಪಡೆಯುವುದು ಮುಖ್ಯವಾಗಿದೆ. ಸ್ಥಳೀಯರಿಗೆ ಅಲ್ಲಿನ ಭೂ ಪ್ರದೇಶ ರಚನೆ ಬಗ್ಗೆ ಅರಿವಿರುವ ಹಿನ್ನೆಲೆ ಪ್ರತಿಯೊಂದು ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಸಲಹೆ ನೀಡುವ ಮತ್ತು ಸಹಾಯ ಮಾಡುವ ಸ್ಥಳೀಯ ಪಾಲುದಾರರನ್ನು ಹೊಂದಿರಬೇಕು. ಅವರು, ದೆಹಲಿಯ ಕಚೇರಿಯಲ್ಲಿರುವ ಎಂಜಿನಿಯರ್ ಅಥವಾ ಅಧಿಕಾರಿಗಿಂತ ಉತ್ತಮವಾದ ರಚನೆಯ ಸ್ಥಳೀಯ ಜ್ಞಾನವನ್ನು ಹೊಂದಿರುತ್ತಾರೆ. ತಾಂತ್ರಿಕ ಸಲಹೆಗಾಗಿ ಸ್ಥಳೀಯರನ್ನು ಸಂಪರ್ಕಿಸಿದ್ದರೆ, ಬಹುಶಃ ಜೋಶಿಮಠ ಮತ್ತು ಇತರ ಪ್ರದೇಶಗಳಲ್ಲಿನ ದುರಂತ ಎಂದಿಗೂ ಸಂಭವಿಸುತ್ತಿರಲಿಲ್ಲ.
ಹಿಮಾಲಯ ಪರಿಸರ ವ್ಯವಸ್ಥೆಯನ್ನು ಆಧರಿಸಿದ ಯೋಜನೆಗಳಿಗೆ ಪರಿಸರ ಮತ್ತು ಪರಿಸರ ಮೌಲ್ಯಮಾಪನಗಳು ನಿರ್ಣಾಯಕ ಅಂಶವಾಗಿರಬೇಕು, ನಾವು ನೀತಿ ಮತ್ತು ಯೋಜನೆಗಳನ್ನು ಪ್ರಕೃತಿಯೊಂದಿಗೆ ಹೊಂದಿಸದಿದ್ದರೆ, ಅವು ಕೊಚ್ಚಿ ಹೋಗಲಿವೆ.
ಅಗತ್ಯ ಕ್ರಮ: ಮರ ಮತ್ತು ಗಣಿಗಾರಿಕೆ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಅಗತ್ಯವಿದ್ದು, ಈ ಅಪರಾಧಿಗಳನ್ನು ಬಂಧಿಸಬೇಕಿದೆ. ಇನ್ನು ಈ ದುರಂತಗಳಿಗೆ ಪ್ರಮುಖ ಕಾರಣ ಅರಣ್ಯನಾಶವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಮರಗಳು ಈ ಪ್ರದೇಶಗಳಲ್ಲಿ ನದಿ ಬಯಲು ಪ್ರದೇಶಗಳಲ್ಲಿ ಇದ್ದಿದ್ದರೆ, ಈ ಮಟ್ಟದ ದುರಂತಗಳು ಸಂಭವಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಹಿಮಾಲಯದ ಮಧ್ಯ ಮತ್ತು ಮೇಲ್ಬಾಗದಲ್ಲಿ ಅರಣ್ಯೀಕರಣವನ್ನು ತೀವ್ರಮಟ್ಟದಲ್ಲಿ ಉತ್ತೇಜಿಸಬೇಕಿದ್ದು, ಈ ಸಂಬಂಧ ವಿಶೇಷ ಕಾನೂನು ಅವಶ್ಯವಿದೆ. ಹಾಗೇ ಮರಗಳನ್ನು ಕತ್ತರಿಸುವ ಏಜೆಂಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿದೆ. ಅರಣ್ಯ ಪ್ರದೇಶ ರಕ್ಷಣೆ ಮತ್ತು ಮರು ಗಿಡ ನೆಡುವ ಮೂಲಕ ಸ್ಥಳೀಯರು ಮತ್ತು ಗ್ರಾಮದ ಸಮುದಾಯಗಳಿಗೆ ವಿಶೇಷ ಪ್ರಯೋಜನ ನೀಡಬೇಕಿದೆ.

ಪ್ರವಾಹ ಪ್ರದೇಶಗಳನ್ನು ಜನವಸತಿ ಇಲ್ಲದ ಪ್ರದೇಶಗಳಿಗಾಗಿ ಗುರುತಿಸಬೇಕು. ಯಾವುದೇ ಅಧಿಕಾರಿಯು ಈ ಆದೇಶವನ್ನು ರದ್ದುಗೊಳಿಸಲು ಅಸಾಧ್ಯವಾಗುವಂತೆ ಮಾಡಬೇಕು. ಅದೇ ರೀತಿ ಹಿಮಾಲಯದ ರಾಜ್ಯಗಳಲ್ಲಿ ಕೂಡ ಅರಣ್ಯ ಭೂಮಿ ಮತ್ತು ಜಲಾನಯನ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇಡೀ ಪ್ರದೇಶವನ್ನು ರಕ್ಷಿಸಬೇಕು.
ಸ್ಥಳೀಯ ವಿಪತ್ತು ನಿರ್ವಹಣಾ ಸಮುದಾಯವೂ ಕೂಡ ಈ ರೀತಿಯ ಕ್ರಮಗಳಿಗೆ ಮುಂದಾಗಬೇಕು. ಸ್ಥಳೀಯರಲ್ಲಿ ಇಂತಹ ಪ್ರವಾಹ ನಿರ್ವಹಣೆ ಸವಾಲುಗಳನ್ನು ಎದುರಿಸಲು ಐತಿಹಾಸಿಕ ಪರಿಹಾರವನ್ನು ಕೇಳಬೇಕು. ಮುಂಬೈ ಅಥವಾ ದೆಹಲಿ ಅಥವಾ ಪುಣೆಯಂತಹ ಸ್ಥಿತಿ ಬಂದೊದಗಂತೆ ಸ್ಥಳೀಯ ರಾಜ್ಯ ವಿಶ್ವವಿದ್ಯಾಲಯ ಮತ್ತು ಸಮುದಾಯಗಳನ್ನು ಒಳಗೊಂಡು ಕೆಲಸ ನಿರ್ವಹಿಸಬೇಕಿದೆ. ಮೇಘಸ್ಫೋಟ, ಹವಾಮಾನ ಮುನ್ಸೂಚನೆಯಂತಹ ಅಭಿವೃದ್ಧಿ ತಂತ್ರಜ್ಞಾನಗಳನ್ನು ನಿಯೋಜಿಸುವುದು ಕೂಡ ಮುಖ್ಯವಾಗಿದೆ.
- ವರದಿ - ಇಂದ್ರ ಶೇಖರ್ ಸಿಂಗ್