46ನೇ ವಸಂತಕ್ಕೆ ಕಾಲಿಟ್ಟ ಬಾಹುಬಲಿ: ಡಾರ್ಲಿಂಗ್ ಪ್ರಭಾಸ್ ಬಗ್ಗೆ ನೀವು ತಿಳಿಯಲೇಬೇಕು ಈ 5 ಸಂಗತಿ

46ನೇ ವಸಂತಕ್ಕೆ ಕಾಲಿಟ್ಟ ಬಾಹುಬಲಿ: ಡಾರ್ಲಿಂಗ್ ಪ್ರಭಾಸ್ ಬಗ್ಗೆ ನೀವು ತಿಳಿಯಲೇಬೇಕು ಈ 5 ಸಂಗತಿ
By Published : October 23, 2025 at 2:44 PM IST

ತೆಲಗು ಚಿತ್ರರಂಗ ಅಲ್ಲದೇ ಪ್ಯಾನ್ ಇಂಡಿಯಾ ಹೀರೋ, ಅಭಿಮಾನಿಗಳ ಡಾರ್ಲಿಂಗ್ ನಟ ಪ್ರಭಾಸ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟಿರುವ ಬಾಹುಬಲಿ ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಪ್ರಭಾಸ್ ಕೇವಲ ತೆಲುಗು ಭಾಷಿಕ ರಾಜ್ಯಗಳಿಗೆ ಸೀಮಿತವಾಗಿಲ್ಲ. ಬೇರೆ ಭಾಷೆಯಲ್ಲೂ ಲಕ್ಷಾಂತರ ಅಭಿಮಾನಿಗಳು ಇದ್ದು, ಅವರ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲು ಮುಂದಾಗಿದೆ. ಪ್ರಭಾಸ್​​​​ ಅವರ ಪ್ರತಿ ಸಿನಿಮಾ ಅವರ ಅಭಿಮಾನಿ ವಲಯದಲ್ಲಿ ಒಂದು ಉತ್ಸವ.

ಪ್ರತಿ ಶೋ ಸೆನ್ಸೇಷನ್​ ಸೃಷ್ಟಿಸುತ್ತದೆ. ಈ ಅಸಾಮಾನ್ಯ ಸೂಪರ್‌ಸ್ಟಾರ್ ಬಗ್ಗೆ ಅವರ ಬರ್ತ್​ಡೇ ಪ್ರಯುಕ್ತ ನೀವು ತಿಳಿದುಕೊಳ್ಳಲೇಬೇಕಾದ ಐದು ವಿಷಯಗಳು ಇಲ್ಲಿವೆ. 1. ಪ್ಯಾನ್​ ಇಂಡಿಯನ್ ಸೂಪರ್‌ಸ್ಟಾರ್:ಸದ್ಯ ಭಾರತದಲ್ಲಿ ಯಶಸ್ವಿ ಪ್ಯಾನ್ ಇಂಡಿಯನ್ ಹೀರೋ ಯಾರು ಎಂದರೆ, ಮೊದಲಿಗೆ ಬರುವ ಹೆಸರೇ ಪ್ರಭಾಸ್ ಅವರದ್ದು. ಸಾವಿರ ಸಾವಿರ ಕೋಟಿ ಬಾಚಿಕೊಂಡ ಅವರ ಸಿನಿಮಾಗಳೇ ಉದಾಹರಣೆ.

2. ಹುಟ್ಟುಹಬ್ಬಕ್ಕೆ ಪ್ರಭಾಸ್​ ಸಿನಿಮಾಗಳ ಮರು - ಬಿಡುಗಡೆ:​ಪ್ರತಿ ವರ್ಷ ಅಕ್ಟೋಬರ್ ತಿಂಗಳು ಬಂತೆಂದರೆ ಅವರ ಫ್ಯಾನ್ಸ್​ಗಳ ದೃಷ್ಟಿ ಪ್ರಭಾಸ್‌ ಸಿನಿಮಾಗಳ ಮೇಲಿರುತ್ತದೆ. ಟೀಸರ್, ಟ್ರೇಲರ್, ಪೋಸ್ಟರ್​ಗಳ ಮೂಲಕ ಸರ್ಪೈಸ್ ನೀಡುತ್ತಲೇ ಇರುತ್ತಾರೆ. ಬರ್ತಡೇ ಪ್ರಯುಕ್ತ ಪ್ರಭಾಸ್ ಅವರ ಹಲವು ಸಿನಿಮಾಗಳು ಈ ವರ್ಷವೂ ಮರು - ಬಿಡುಗಡೆ ಆಗಲಿವೆ. ಆ ಪೈಕಿ ಸಲಾರ್, ಈಶ್ವರ್, ಮತ್ತು ಪೌರ್ಣಮಿ ಇಂದು ಬಿಡುಗಡೆ ಆಗಲಿದ್ದು, ಬಾಹುಬಲಿ:ದಿ ಎಪಿಕ್ ಅಕ್ಟೋಬರ್ 31 ರಂದು ತೆರೆಗೆ ಬರಲಿದೆ.

3. ಪರದೆಯ ಹಿಂದೆಯೂ ಮಿಸ್ಟರ್ ಪರ್ಫೆಕ್ಟ್ ನಾಯಕ​:ಕೇವಲ ಪ್ಯಾನ್​ ಇಂಡಿಯನ್​ ಸ್ಟಾರ್ ಆಗದೇ ತೆರೆ ಹಿಂದೆ ಮೌನವಾಗಿಯೇ ಸಾಕಷ್ಟು ಜನಪರ ಕಾರ್ಯಗಳನ್ನೂ ಪ್ರಭಾಸ್ ಮಾಡುತ್ತಿದ್ದಾರೆ. ತೆರೆಯ ಮೇಲೆ ಸೂಪರ್‌ಸ್ಟಾರ್ ಮತ್ತು ತೆರೆಯ ಆಚೆಗಿನ ಉದಾತ್ತ ವ್ಯಕ್ತಿ, ಅಭಿಮಾನಿಗಳಿಂದ ಆಳವಾಗಿ ಪ್ರೀತಿಸಲ್ಪಟ್ಟ ಮತ್ತು ಗೌರವಿಸಲ್ಪಟ್ಟ ಡಾರ್ಲಿಂಗ್​ ಇವರು4. Mega line-up-ಬತ್ತಳಿಕೆಯಲ್ಲಿವೆ ಬಿಗ್ ಸಿನಿಮಾಗಳು:​ಪ್ರಭಾಸ್​ ಅವರ ಮುಂದೆ ಸಿನಿಮಾಗಳ ದೊಡ್ಡ ಸಾಲೇ ಇದೆ. ಅವರ ಮುಂಬರುವ ಬಿಡುಗಡೆಗಳಲ್ಲಿ ದಿ ರಾಜಾ ಸಾಬ್ (ಜನವರಿ 9, 2026), ಸಲಾರ್:ಪಾರ್ಟ್ 2 – ಶೌರ್ಯಾಂಗ ಪರ್ವ, ಸ್ಪಿರಿಟ್, ಕಲ್ಕಿ 2898 AD:ಪಾರ್ಟ್ 2, ಮತ್ತು ಫೌಜಿ ಸಿನಿಮಾಗಳು ಪ್ರಭಾಸ್ ಅವರ ಬತ್ತಳಿಕೆಯಲ್ಲಿವೆ.

5. 1000 ಕೋಟಿ ಬಾಕ್ಸ್ ಆಫೀಸ್ - ನಿರ್ಮಾಪಕರ ಪಾಲಿನ ಅಕ್ಷಯಪಾತ್ರೆ: ​ಬಾಹುಬಲಿಯಂತಹ ಚಿತ್ರಗಳು ಪ್ರಭಾಸ್​ಗೆ ಪ್ಯಾನ್ ಇಂಡಿಯನ್ ನಾಯಕನ ಪಟ್ಟ ನೀಡಿವೆ. ಭಾರತ ಮಾತ್ರವಲ್ಲದೇ, ಜಾಗತಿಕವಾಗಿಯೂ ಸ್ಟಾರ್ ಆಗಿ ಬೆಳೆದಿದ್ದಾರೆ. ಕಲ್ಕಿ 2898 AD ಮತ್ತು ಬಾಹುಬಲಿಯಂತಹ ಸಿನಿಮಾಗಳು ಸತತವಾಗಿ ₹1000 ಕೋಟಿ ಗಡಿ ದಾಟುವುದರೊಂದಿಗೆ ಸ್ಟಾರ್ ಡಮ್ ಹೆಚ್ಚಿಸಿವೆ, ಇದು ನಿರ್ಮಾಪಕರ ಪಾಲಿನ ಅಕ್ಷಯಪಾತ್ರೆಯಾಗಿದ್ದಾರೆ.

📚 Related News