ರಾಮಾ ರಾಮಾ ರೇ ಸತ್ಯ ಪ್ರಕಾಶ್ ಜೊತೆ ಧೀರೆನ್ ರಾಮ್ ಕುಮಾರ್ ಹೊಸ ಸಿನಿಮಾ ಅನೌನ್ಸ್: ದೀಪಾವಳಿಗೆ ಬಾರ್ಡರ್ ಡೈರೀಸ್ ಟೈಟಲ್ ರಿವೀಲ್

ರಾಮಾ ರಾಮಾ ರೇ ಸತ್ಯ ಪ್ರಕಾಶ್ ಜೊತೆ ಧೀರೆನ್ ರಾಮ್ ಕುಮಾರ್ ಹೊಸ ಸಿನಿಮಾ ಅನೌನ್ಸ್: ದೀಪಾವಳಿಗೆ ಬಾರ್ಡರ್ ಡೈರೀಸ್ ಟೈಟಲ್ ರಿವೀಲ್
By Published : October 22, 2025 at 10:36 AM IST
Quick Summary

This article highlights: . In context: ಬೆಳಕಿನ ಹಬ್ಬ ದೀಪಾವಳಿಯ ಹೊನ್ನ ಕಿರಣಗಳು ಬಣ್ಣ ಬಣ್ಣದ ಚಿತ್ತಾರಗಳನ್ನು ಎರಕ ಹೊಯ್ಯುವ ಹೊತ್ತಿನಲ್ಲಿ, ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಡಿ. Stay tuned with The Headline World for more insights and details.

ಬೆಳಕಿನ ಹಬ್ಬ ದೀಪಾವಳಿಯ ಹೊನ್ನ ಕಿರಣಗಳು ಬಣ್ಣ ಬಣ್ಣದ ಚಿತ್ತಾರಗಳನ್ನು ಎರಕ ಹೊಯ್ಯುವ ಹೊತ್ತಿನಲ್ಲಿ, ರಾಮಾ ರಾಮಾ ರೇ. ಖ್ಯಾತಿಯ ನಿರ್ದೇಶಕ ಡಿ. ಸತ್ಯ ಪ್ರಕಾಶ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಹೊಸ ಚಿತ್ರದ ನಿರ್ದೇಶನದ ಕಾರ್ಯ ಯೋಜನೆಯೊಂದಿಗೆ ಕಣಕಿಳಿದಿದ್ದಾರೆ. ಈ ಚಿತ್ರಕ್ಕಾಗಿ ಅವರು ನಾಯಕ ನಟ ಶಿವ 143 ಖ್ಯಾತಿಯ ಧೀರೆನ್‌ ರಾಮ್ ಕುಮಾರ್ ಜೊತೆ ಕೈ ಜೋಡಿಸಿದ್ದಾರೆ.

ಸದಾ ಹೊಸತನ, ವಿಶೇಷ ಪ್ರಯೋಗಾತ್ಮಕ ಮತ್ತು ಸಂದೇಶಾತ್ಮಕ ಕಥೆಗಳಿಗೆ ತೊಡಗಿಸಿಕೊಂಡು ಬಂದಿರುವ ನಿರ್ದೇಶಕ ಡಿ. ಸತ್ಯ ಪ್ರಕಾಶ್‌ ಇಲ್ಲೂ ಕುತೂಹಲ ಹೆಚ್ಚಿಸುವ ಕ್ರಿಯಾತ್ಮಕ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಖಂಡಿತ ನಿರೀಕ್ಷಿಸಬಹುದು. ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್‌ ಅವರು ಚಿತ್ರದ ಕಥೆ ಕೇಳಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ತಂಡಕ್ಕೆ ವಿಶೇಷ ಪ್ರೋತ್ಸಾಹ ನೀಡುವುದಾಗಿ ಹೇಳಿಕೊಂಡಿದ್ದಾರೆ.

Dheeren Ram Kumar announces new movie Rama Rama Re

ಈವರೆಗೆ ಡಿ. ಸತ್ಯ ಪ್ರಕಾಶ್‌‌ ನಿರ್ದೇಶನದ ತಮ್ಮ ನಾಲ್ಕು ಚಿತ್ರಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸ ಬಹುದಾಗಿದೆ. ಪ್ರಸ್ತುತ ಹೊಸ ಚಿತ್ರದ ಹೆಚ್ಚುವರಿ ವಿವರಗಳನ್ನು ಅತಿ ಸಮೀಪದಲ್ಲೇ ನೀಡುವುದಾಗಿ ಆರ್‌.ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್‌ ಸಂಸ್ಥೆ ಹೇಳಿಕೊಂಡಿದೆ. ಸದ್ಯದಲ್ಲೇ ಉಳಿದ ತಾರ ಬಳಗ ಹಾಗೂ ತಂತ್ರಜ್ಞಾನರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

Dheeren Ram Kumar announces new movie Rama Rama Re

ಇದನ್ನು ಓದಿ:

ಬರಹಗಾರ ಎಎಸ್ ಜಿ ಈಗ ಡೈರೆಕ್ಟರ್ ದೀಪಾವಳಿ ಹಬ್ಬಕ್ಕೆ ಬಾರ್ಡರ್ ಡೈರೀಸ್ ಟೈಟಲ್ ರಿವೀಲ್
ರಂಗಸಮುದ್ರ ಎಂಬ ಸಿನಿಮಾ ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹೊಯ್ಸಳ‌ ಫಿಲಮ್ಸ್ ಸಂಸ್ಥೆ ಈಗ ಹೊಸ ಚಿತ್ರ‌ ಘೋಷಿಸಿದೆ. ಈ ಬಾರಿ ಹೊಯ್ಸಳ ಫಿಲಮ್ಸ್ ಹೊಸಬರಿಗೆ ವೇದಿಕೆ ಕಲ್ಪಿಸಿದೆ. ಈ ನಿರ್ಮಾಣ ಸಂಸ್ಥೆಯ ಮತ್ತೊಂದು ಸಿನಿಮಾ ಬಾರ್ಡರ್ ಡೈರೀಸ್.

Border Diaries title revealed for Diwali

ದೀಪಾವಳಿ ಹಬ್ಬದ ವಿಶೇಷವಾಗಿ ಇಂದು ಬಾರ್ಡರ್ ಡೈರೀಸ್ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದೆ. ಗದ್ದಲ್ಲದ ಊರಿನಲ್ಲಿ ಸದ್ದಿಲ್ಲದೇ ಅರಳಿದ ಪ್ರೇಮಕಥೆಯನ್ನು ಯುವ ನಿರ್ದೇಶಕ ಎ ಎಸ್ ಜಿ ಹೇಳೋದಿಕ್ಕೆ ಹೊರಟಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ.

ಕಳೆದ ಏಳೆಂಟು ವರ್ಷಗಳಿಂದ ಸಾಹೇಬ, ನನ್ನ ಪ್ರಕಾರ, ತೂತು ಮಡಿಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಎ ಎಸ್ ಜಿ ಈಗ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಅವರ ಮೊದಲ ಪ್ರಯತ್ನಕ್ಕೆ ಬಾರ್ಡರ್ ಡೈರೀಸ್ ಎಂಬ ಟೈಟಲ್ ಇಟ್ಟಿದ್ದಾರೆ.

Border Diaries title revealed for Diwaliಬಾರ್ಡರ್ ಡೈರೀಸ್ ಸಿನಿಮಾದಲ್ಲಿ ಯುವ ನಟ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ಅಶ್ವಿತ ಹೆಗಡೆ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ತಬಲ ನಾಣಿ, ಶರತ್ ಲೋಹಿತಾಶ್ವ, ಮೇಘ ಜಾದವ್, ವೀಣಾ ಸುಂದರ್, ಆನಂದ್ ನೀನಾಸಂ ಕಾಳಿಪ್ರಸಾದ್, ಕುಶಾಲ್ ಬಿಕೆ, ನಾಗರಾಜ ಶಿವ ಸಿಂಪಿ ಇದ್ದಾರೆBorder Diaries title revealed for Diwaliಚಿತ್ರಕ್ಕೆ ಚಮಕ್, ಸಖತ್ ಖ್ಯಾತಿಯ ಜುಡಾ ಸ್ಯಾಂಡಿ ಸಂಗೀತ ನೀಡಿದ್ದು, ಅಚ್ಯುತ್ ಬಿ ಎಸ್ ಅವರ ಛಾಯಾಗ್ರಹಣ ಮತ್ತು ಆಕಾಶ್ ಹಿರೇಮಠ ಅವರ ಸಂಕಲನವಿದೆ. ಚಿತ್ರದ ಚಿತ್ರೀಕರಣ ಕರ್ನಾಟಕ ಮತ್ತು ತಮಿಳುನಾಡು ಬಾರ್ಡರಿನಲ್ಲಿರುವ ಹೊಸೂರಿನ ಕೈಗಾರಿಕ ಪ್ರದೇಶ, ಚನ್ನಪಟ್ಟಣ, ಮಾಗಡಿ ಮತ್ತು ಬೆಂಗಳೂರಿನ ಸುತ್ತಮುತ್ತ ನಡೆದಿದೆ. ಸದ್ಯ ಬಾರ್ಡರ್ ಡೈರೀಸ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದ ತಯಾರಿಯ ಜೊತೆಗೆ ಪೋಸ್ಟ್ ಪ್ರೊಡಕ್ಷನ್ನಿನಲ್ಲಿ ಚಿತ್ರತಂಡ ತೊಡಗಿಕೊಂಡಿದೆ.

ಇದನ್ನು ಓದಿ:

Content compiled and formatted by The Headline World editorial team.

📚 Related News