ಇಂದಿನಿಂದ IND vs AUS ಟಿ20 ಸರಣಿ; ಸಮಯ, ಸಂಭಾವ್ಯ ತಂಡ, ನೇರಪ್ರಸಾರದ ಮಾಹಿತಿ

ಇಂದಿನಿಂದ IND vs AUS ಟಿ20 ಸರಣಿ; ಸಮಯ, ಸಂಭಾವ್ಯ ತಂಡ, ನೇರಪ್ರಸಾರದ ಮಾಹಿತಿ
By Published : October 29, 2025 at 10:40 AM IST | Updated : October 29, 2025 at 11:16 AM IST

IND vs AUS 1st T20I:ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿವೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಬುಧವಾರ (ಇಂದು) ಕ್ಯಾನ್‌ಬೆರಾದ ಮನುಕಾ ಓವಲ್ ಮೈದಾನದಲ್ಲಿ ನಡೆಯಲಿದೆ. ಆಸೀಸ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಸೋಲು ಕಂಡಿದ್ದ ಭಾರತ ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟಿ-20 ಸರಣಿಯನ್ನು ಗೆದ್ದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಕ್ಯಾನ್‌ಬೆರಾದ ಮನುಕಾ ಕ್ರೀಡಾಂಗಣದಲ್ಲಿ ಕೇವಲ ಒಂದು ಟಿ-20ಐ ಪಂದ್ಯವನ್ನು ಮಾತ್ರ ಆಡಿವೆ. ಡಿಸೆಂಬರ್ 4, 2020 ರಂದು ನಡೆದ ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು 11 ರನ್‌ಗಳಿಂದ ಸೋಲಿಸಿತು.

ಈಗ, ಸುಮಾರು ಐದು ವರ್ಷಗಳ ನಂತರ, ಎರಡೂ ತಂಡಗಳು ಈ ಸ್ಥಳದಲ್ಲಿ ಮತ್ತೆ ಮುಖಾಮುಖಿಯಾಗಲಿವೆ. ಸದ್ಯ ಭಾರತ ಟಿ20 ಸ್ವರೂಪದಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದು ಇತ್ತೀಚೆಗೆ ಟಿ20 ಸ್ವರೂಪದಲ್ಲಿ ನಡೆದಿದ್ದ ಏಷ್ಯಾಕಪ್ ಅನ್ನು ಅಜೇಯವಾಗಿ ಗೆದ್ದುಕೊಂಡಿತ್ತು. ಇಲ್ಲಿಯೂ ಅದೇ ಫಾರ್ಮ್ ಕಾಯ್ದುಕೊಳ್ಳಲು ಸೂರ್ಯ ಪಡೆ ಯೋಜನೆ ರೂಪಿಸಿಕೊಂಡಿದೆ. ಹೆಡ್​ ಟು ಹೆಡ್​ ದಾಖಲೆ:ಉಭಯ ತಂಡಗಳ 2007ರಲ್ಲಿ ಡರ್ಬನ್‌ನಲ್ಲಿ ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಿದ್ದವು. ಅಂದಿನಿಂದ ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು 32 ಟಿ20 ಪಂದ್ಯಗಳು ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾ 20 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದ್ದರೇ ಆಸ್ಟ್ರೇಲಿಯಾ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಈ ಅಂಕಿ - ಅಂಶ ಗಮನಿಸಿದರೇ ಟಿ20 ಮಾದರಿಯಲ್ಲಿ ಭಾರತ ಆಸೀಸ್​ ಗಿಂತಲೂ ಪ್ರಾಬಲ್ಯವಾಗಿದೆ. ಹಿಂದಿನ ಸರಣಿ ಫಲಿತಾಂಶ:ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಹಿಂದಿನ 3 ಸರಣಿಯಲ್ಲಿ ಟೀಮ್​ ಇಂಡಿಯಾ ಗೆಲುವು ಸಾಧಿಸಿದೆ. ಎರಡೂ ತಂಡಗಳು 2023 - 24ರಲ್ಲಿ ಕೊನೆಯ ಬಾರಿಗೆ ಟಿ20 ಸರಣಿಯನ್ನು ಆಡಿದ್ದವು. ಇದರಲ್ಲಿ ಭಾರತ 4 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿತ್ತು.

Ind vs Aus ಪಂದ್ಯ ಸಮಯ:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ಮಧ್ಯಾಹ್ನ 1:45ಕ್ಕೆಪ್ರಾರಂಭವಾಗುತ್ತದೆ. ಟಾಸ್ ಪ್ರಕ್ರಿಯೆ 1:15ಕ್ಕೆನಡೆಯಲಿದೆ. IND vs AUS ನೇರ ಪ್ರಸಾರ ಮತ್ತು ಲೈವ್​ ಸ್ಟ್ರೀಮಿಂಗ್​ ಎಲ್ಲಿ? ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಪ್ರಸಾರ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹೊಂದಿದೆ. ಫ್ಯಾನ್ಸ್​ಗಳು ಈ ಪಂದ್ಯದ ಲೈವ್​ ಸ್ಟ್ರೀಮಿಂಗ್​ ಮೊಬೈಲ್​ನಲ್ಲಿ ಜಿಯೋ ಹಾಟ್‌ಸ್ಟಾರ್ ಆ್ಯಪ್​ನಲ್ಲಿ ನೋಡಬಹುದಾಗಿದೆ. ಮೊದಲ ಟಿ20ಗೆ ಭಾರತ ಸಂಭಾವ್ಯ ತಂಡ:ಸೂರ್ಯಕುಮಾರ್​ ಯಾದವ್​ (ನಾಯಕ), ಅಭಿಷೇಕ್​ ಶರ್ಮಾ, ಶುಭ್​ಮನ್​ ​ಗಿಲ್​ (ಉಪನಾಯಕ), ತಿಲಕ್ ವರ್ಮಾ​, ಸಂಜು ಸ್ಯಾಮ್ಸನ್ (ವಿಕೇಟ್​ ಕೀಪರ್), ಶಿವಂ ದುಬೆ, ಅಕ್ಷರ್​ ಪಟೇಲ್​, ವರುಣ್​ ಚಕ್ರವರ್ತಿ, ಜಸ್ಪ್ರೀತ್​ ಬುಮ್ರಾ, ಅರ್ಷದೀಪ್​ ಸಿಂಗ್​, ಕುಲ್ದೀಪ್​ ಯಾದವ್​.

ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ಡಾರ್ಶಿಯಸ್​, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿ. ಕೀ), ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.

📚 Related News