Oneplus 15 Launched :"OnePlus 15" ಫೋನ್ ಮಾರುಕಟ್ಟೆಗೆ ಬರುವುದನ್ನು OnePlus ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಈಗ ಈ ಕಾಯುವಿಕೆ ಮುಕ್ತಾಯಗೊಂಡಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆಯಾದ "OnePlus 13" ನ ರೂಪಾಂತರವಾಗಿದೆ. ಇದು ತನ್ನ ಹಿಂದಿನ ಮಾದರಿಗಿಂತ ವಿವಿಧ ಅಪ್‌ಗ್ರೇಡ್‌ಗಳನ್ನು ನೀಡುತ್ತದೆ. ಆದರೆ ಕಂಪನಿಯು ಈ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಇದೀಗ ತನ್ನ ತವರು ಮಾರುಕಟ್ಟೆಯಾದ ಚೀನಾಕ್ಕೆ ಸೀಮಿತಗೊಳಿಸಿದೆ.
ಇದನ್ನು ಶೀಘ್ರದಲ್ಲೇ ಭಾರತಕ್ಕೂ ತರಲಾಗುವುದು. ಚೀನಾದಲ್ಲಿ ಇದರ ಬೆಲೆ ಮತ್ತು ವೈಶಿಷ್ಟ್ಯಗಳ ವಿವರ ಹೀಗಿದೆ. OnePlus 15 ರೂಪಾಂತರಗಳು ಮತ್ತು ಬೆಲೆ:ಕಂಪನಿಯು ಇದನ್ನು ಚೀನಿ ಮಾರುಕಟ್ಟೆಯಲ್ಲಿ ಐದು ರೂಪಾಂತರಗಳಲ್ಲಿ ತಂದಿದೆ. 12GB RAM + 256GB ಸ್ಟೋರೇಜ್ ಬೆಲೆ:CNY 3,999 (ಅಂದಾಜು ರೂ. 50,000)16GB RAM + 256GB ಸ್ಟೋರೇಜ್ ಬೆಲೆ:CNY 4,299 (ಅಂದಾಜು ರೂ.
53,000)12GB RAM + 512GB ಸ್ಟೋರೇಜ್ ಬೆಲೆ:CNY 4,599 (ಅಂದಾಜು ರೂ. 57,000)16GB RAM + 512GB ಸ್ಟೋರೇಜ್ ಬೆಲೆ:CNY 4,899 (ಅಂದಾಜು ರೂ. 61,000)16GB RAM + 1TB ಸ್ಟೋರೇಜ್ ಬೆಲೆ:CNY 5,399 (ಅಂದಾಜು ರೂ. 67,000)ಕಲರ್ ಆಪ್ಶನ್:ಈ ಫೋನ್ ಚೀನಿ ಮಾರುಕಟ್ಟೆಯಲ್ಲಿ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಅವುಗಳೆಂದರೆ:ಅಬ್ಸೊಲ್ಯೂಟ್ಬ್ಲ್ಯಾಕ್ಮಿಸ್ಟಿ ಪರ್ಪಲ್ಸ್ಯಾಂಡ್ ಡ್ಯೂನ್ಮಾರಾಟದ ವಿವರಗಳು:ಈ "ಒನ್‌ಪ್ಲಸ್ 15" ಫೋನ್ ಇಂದು (ಅಕ್ಟೋಬರ್ 28) ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ಚೀನಾದಲ್ಲಿ ಮಾರಾಟಕ್ಕೆ ಬರಲಿದೆ.
OnePlus 15 ವೈಶಿಷ್ಟ್ಯ, ವಿಶೇಷತೆಗಳು:ಡಿಸ್ಪ್ಲೇ:ಈ ಫೋನ್ 6. 78-ಇಂಚಿನ ಮೂರನೇ ತಲೆಮಾರಿನ BOE ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, 165Hz ವರೆಗಿನ ರಿಫ್ರೆಶ್ ರೇಟ್, 1. 5K (1,272x2,772 ಪಿಕ್ಸೆಲ್‌ಗಳು) ರೆಸಲ್ಯೂಶನ್, 1,800 nits ಪೀಕ್ ಬ್ರೈಟ್ನೆಸ್, 330Hz ವರೆಗೆ ಟಚ್ ಶಾಂಪ್ಲಿಂಗ್ ರೇಟ್ ಮತ್ತು 450 ppi ಪಿಕ್ಸೆಲ್ ಡೆನ್ಸಿಟಿ ಹೊಂದಿದೆ. ಈ ಸ್ಕ್ರೀನ್ 100 ಪ್ರತಿಶತ DCI-P3 ಕಲರ್ನ ಗ್ಯಾಮಟ್, 1. 07 ಬಿಲಿಯನ್ ಬಣ್ಣಗಳನ್ನು ಸಹ ಬೆಂಬಲಿಸುತ್ತದೆ.
ಪ್ರೊಸೆಸರ್:ಇದು ಕ್ವಾಲ್ಕಾಮ್ ಆಕ್ಟಾ-ಕೋರ್ 3nm ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ಅಡ್ರಿನೊ 840 GPU ನೊಂದಿಗೆ ಬರುತ್ತದೆ. ಈ ಚಿಪ್‌ಸೆಟ್ 2 ಕಾರ್ಯಕ್ಷಮತೆ ಕೋರ್‌ಗಳು ಮತ್ತು 6 ಎಫಿಶಿಯೆನ್ಸಿ ಕೋರ್‌ಗಳನ್ನು ಹೊಂದಿದೆ. ಇದು 4. 608GHz ನ ಗರಿಷ್ಠ ಗಡಿಯಾರದ ವೇಗವನ್ನು ನೀಡುತ್ತದೆ.
ಇದು 16GB ವರೆಗೆ LPDDR5X RAM, 1TB ವರೆಗೆ UFS 4. 1 ಆನ್‌ಬೋರ್ಡ್ ಸ್ಟೋರೇಜ್ನೊಂದಿಗೆ ಬರುತ್ತದೆ. ಬ್ಯಾಟರಿ ಸಾಮರ್ಥ್ಯ:ಈ ಹೊಸ ಫ್ಲ್ಯಾಗ್‌ಶಿಪ್ ಫೋನ್ 7,300mAh ಬ್ಯಾಟರಿಯನ್ನು ಹೊಂದಿದೆ. ಇದು 120W ಸೂಪರ್ ಫ್ಲ್ಯಾಶ್ ಚಾರ್ಜ್ ವೈರ್ಡ್ ಚಾರ್ಜಿಂಗ್, 50W ವೈರ್‌ಲೆಸ್ ಫ್ಲ್ಯಾಶ್ ಚಾರ್ಜ್ ಬೆಂಬಲವನ್ನು ನೀಡುತ್ತದೆ. ಕ್ಯಾಮೆರಾ ಸೆಟಪ್:ಆಪ್ಟಿಕಲ್ಸ್ ವಿಷಯದಲ್ಲಿ "ಒನ್‌ಪ್ಲಸ್ 15" ಟ್ರಿಪಲ್-ರಿಯರ್ ಕ್ಯಾಮರಾ ಯುನಿಟ್, 24mm ಫೋಕಲ್ ಲೆಂತ್‌ನೊಂದಿಗೆ 50-ಮೆಗಾಪಿಕ್ಸೆಲ್ (f/1.
8) ಪ್ರೈಮರಿ ಶೂಟರ್, 50-ಮೆಗಾಪಿಕ್ಸೆಲ್ (f/2. 0) ಅಲ್ಟ್ರಾವೈಡ್ ಕ್ಯಾಮರಾ, 50-ಮೆಗಾಪಿಕ್ಸೆಲ್ (f/1. 8) ಟೆಲಿಫೋಟೋ ಕ್ಯಾಮರಾವನ್ನು ಸಹ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್ಸ್ಗಾಗಿ ಫೋನ್ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ (f/2. 4) ಸೆಲ್ಫಿ ಕ್ಯಾಮರಾವನ್ನು ಅಳವಡಿಸಲಾಗಿದೆ.
ಇದರ ರಿಯರ್ ಕ್ಯಾಮರಾ ಸೆಟಪ್ 30 fps ನಲ್ಲಿ 8K ರೆಸಲ್ಯೂಶನ್ ವಿಡಿಯೋಗಳನ್ನು ಶೂಟ್ ಮಾಡಬಹುದು. ಆನ್‌ಬೋರ್ಡ್ ಸೆನ್ಸಾರ್‌ಗಳ ಲಿಸ್ಟ್ನಲ್ಲಿ ಪ್ರಾಕ್ಸಿಮಿಟಿ ಸೆನ್ಸಾರ್, ಆ್ಯಂಬಿಯಂಟ್ ಲೈಟ್ ಸೆನ್ಸಾರ್, ಕಲರ್ ಟೆಂಪರೇಚರ್ ಸೆನ್ಸಾರ್, ಎಲೆಕ್ಟ್ರಾನಿಕ್ ಕಂಪಾಸ್, ಆಕ್ಸಿಲರೇಷನ್ ಸೆನ್ಸಾರ್, ಗೈರೊಸ್ಕೋಪ್, ಹಾಲ್ ಸೆನ್ಸಾರ್, ಲೇಸರ್ ಫೋಕಸ್ ಸೆನ್ಸಾರ್, ಸ್ಪೆಕ್ಟ್ರಮ್ ಸೆನ್ಸಾರ್ ಮತ್ತು IR ಬ್ಲಾಸ್ಟರ್ ಸೇರಿವೆ. ಭದ್ರತೆ ಮತ್ತು ಸಂಪರ್ಕ ವೈಶಿಷ್ಟ್ಯಗಳು:ಇದು ಭದ್ರತೆಗಾಗಿ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ. ಕನೆಕ್ಟಿವಿಟಿ ಆಪ್ಶನ್ ವಿಷಯಕ್ಕೆ ಬಂದರೆ, ಫೋನ್ 5G, Wi-Fi 7, NFC, Beidou, GPS, GLONASS, Galileo, QZSS ಅನ್ನು ಬೆಂಬಲಿಸುತ್ತದೆ. ಆಪರೇಟಿಂಗ್ ಸಿಸ್ಟಮ್:ಈ ಫೋನ್ ಚೀನಾದಲ್ಲಿ Android 16-ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಆಯಾಮಗಳು, ತೂಕ:ಇದು 161. 42x76. 67x8. 10mm ಅಳತೆ ಮತ್ತು 211 ಗ್ರಾಂ ತೂಗುತ್ತದೆ. ಈ ಫೋನ್ ಭಾರತಕ್ಕೆ ಯಾವಾಗ ಬರುತ್ತದೆ ಮತ್ತು ಯಾವ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಓದಿ:.








