50MP AI ಕ್ಯಾಮೆರಾ, 4GB RAM, 64GB ಸ್ಟೋರೇಜ್, 5000mAh ಬ್ಯಾಟರಿ: ಈ ಸ್ಮಾರ್ಟ್​ಫೋನ್​​ಗೆ ಕೇವಲ ರೂ. 6999!

50MP AI ಕ್ಯಾಮೆರಾ, 4GB RAM, 64GB ಸ್ಟೋರೇಜ್, 5000mAh ಬ್ಯಾಟರಿ: ಈ ಸ್ಮಾರ್ಟ್​ಫೋನ್​​ಗೆ ಕೇವಲ ರೂ. 6999!
By Published : October 28, 2025 at 11:58 AM IST

Lava Shark 2 4G Launched:ಲಾವಾ ಶೀಘ್ರದಲ್ಲೇ ಅಗ್ನಿ 4 5G ಫೋನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇತ್ತೀಚೆಗೆ ಈ ಹ್ಯಾಂಡ್‌ಸೆಟ್ ಕುರಿತು ಹಲವು ವಿವರಗಳು ಸೋರಿಕೆಯಾಗಿವೆ. ಆದರೆ, ಕಂಪನಿಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಇನ್ನು ಇತ್ತೀಚೆಗೆ ಲಾವಾದಿಂದ ಆರಂಭಿಕ ಮಟ್ಟದ ಬೆಲೆಯಲ್ಲಿ ಮತ್ತೊಂದು ಫೋನ್ ಲಭ್ಯವಾಗಿದೆ. ಇದು ಹೆಚ್ಚು ಸಾಫ್ಟ್‌ವೇರ್ ಅನುಭವವನ್ನು ನೀಡುತ್ತದೆ.

ಈ ಲಾವಾ ಶಾರ್ಕ್ 2 4G ಸ್ಮಾರ್ಟ್‌ಫೋನ್‌ನ ವಿಶೇಷಣಗಳು, ವೈಶಿಷ್ಟ್ಯಗಳು, ಬೆಲೆ, ಮಾರಾಟ ಸೇರಿದಂತೆ ಇತರ ಮಾಹಿತಿಗಳು ಇಲ್ಲಿವೆ. ಲಾವಾ ಶಾರ್ಕ್ 2 4G ಸ್ಮಾರ್ಟ್‌ಫೋನ್ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು:ಈ ಫೋನ್ ಪ್ರಭಾವಶಾಲಿ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ. ಈ ಹ್ಯಾಂಡ್‌ಸೆಟ್ 120Hz ರಿಫ್ರೆಶ್ ರೇಟ್​ನೊಂದಿಗೆ 6. 75-ಇಂಚಿನ HD+ ಡಿಸ್ಪ್ಲೇ, ಪಂಚ್ ಹೋಲ್ ಕಟೌಟ್ ವಿನ್ಯಾಸ, IP54 ರೇಟಿಂಗ್‌ನೊಂದಿಗೆ ಡಸ್ಟ್​ ಮತ್ತು ಸ್ಪ್ಲಾಶ್ ರೆಸಿಸ್ಟೆನ್ಸಿ ಹೊಂದಿದೆ. ವರ್ಚುಯಲ್ RAM ವೈಶಿಷ್ಟ್ಯ:ಈ ಲಾವಾ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ UNISOC T7250 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

ಈ ಫೋನ್ 4GB RAM ಮತ್ತು 64GB ಸ್ಟೋರೇಜ್​ನೊಂದಿಗೆ ಜೋಡಿಸಲ್ಪಟ್ಟಿದೆ. ವರ್ಚುಯಲ್ RAM ವೈಶಿಷ್ಟ್ಯದೊಂದಿಗೆ RAM ಅನ್ನು ಹೆಚ್ಚುವರಿಯಾಗಿ 4GB ವರೆಗೆ ವಿಸ್ತರಿಸಬಹುದಾಗಿದೆ. ಇದು ಆಂಡ್ರಾಯ್ಡ್ 15 ಆಧಾರಿತ OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಎರಡು ವರ್ಷಗಳ ಕಾಲ ಭದ್ರತಾ ನವೀಕರಣಗಳೊಂದಿಗೆ ಆಂಡ್ರಾಯ್ಡ್ 16 OS ಅಪ್​ಡೇಟ್​ ಅನ್ನು ಪಡೆಯುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಮನೆಯಲ್ಲಿ ಉಚಿತವಾಗಿ ಸರ್ವೀಸ್​ ಮಾಡಿಸಿಕೊಳ್ಳಬಹುದು.

ಈ ಸೌಲಭ್ಯವು ದೇಶಾದ್ಯಂತ ಲಭ್ಯವಿದೆ ಎಂದು ಲಾವಾ ಹೇಳಿದೆ. ಕ್ಯಾಮೆರಾ ವಿಭಾಗದ ವಿಷಯದಲ್ಲಿ, ಈ ಲಾವಾ ಶಾರ್ಕ್ 2 4G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 50MP AI ಕ್ಯಾಮೆರಾ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಹ್ಯಾಂಡ್‌ಸೆಟ್ 18W ವೇಗದ ಚಾರ್ಜಿಂಗ್ ಸಪೋರ್ಟ್​ನೊಂದಿಗೆ 5000mAh ಬ್ಯಾಟರಿ ಹೊಂದಿದೆ. ಇದು USB-C ಚಾರ್ಜಿಂಗ್ ಪೋರ್ಟ್ ಹೊಂದಿದೆ.

ಆದರೆ, ಈ ಫೋನ್ 10W ಚಾರ್ಜರ್‌ನೊಂದಿಗೆ ಬರುತ್ತದೆ. ಲಾವಾ ಶಾರ್ಕ್ 2 4G ಸ್ಮಾರ್ಟ್‌ಫೋನ್ ಬೆಲೆ, ಮಾರಾಟ:ಈ ಲಾವಾ ಶಾರ್ಕ್ 2 4G ಸ್ಮಾರ್ಟ್‌ಫೋನ್​ನ 4GB RAM + 64GB ಸ್ಟೋರೇಜ್ ರೂಪಾಂತರ ಬೆಲೆ ರೂ. 6,999. ಇದು ಪ್ರಸ್ತುತ ಆಫ್‌ಲೈನ್ ಅಂಗಡಿಗಳಲ್ಲಿ ಲಭ್ಯವಿದೆ. ಫೋನ್ ಎಕ್ಲಿಪ್ಸ್ ಗ್ರೇ ಮತ್ತು ಅರೋರಾ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ.

ಲಾವಾ ಅಗ್ನಿ 4 5G ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಈ ಫೋನ್ ಫ್ಲಾಟ್ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ ಎಂದು ತೋರುತ್ತದೆ. ಈ ಫೋನ್ 7000mAh ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಟರಿಯೊಂದಿಗೆ ಲಭ್ಯವಿರುತ್ತದೆ. ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿರುವ ಅಗ್ನಿ 4 5G ಫೋನ್ ಇತ್ತೀಚೆಗೆ BIS ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಓದಿ:.

📚 Related News