ಜಗತ್ತಿನಲ್ಲಿ ವೇಗವಾಗಿ ಜನಪ್ರಿಯತೆ ಪಡೆಯುತ್ತಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ವಿಶ್ವದ 110ಕ್ಕೂ ಹೆಚ್ಚಿನ ತಂಡಗಳು ಐಸಿಸಿಯಿಂದ ಮಾನ್ಯತೆ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿವೆ. ಇವುಗಳಲ್ಲಿ ಭಾರತ ಸೇರಿದಂತೆ 12 ದೇಶಗಳು ಪೂರ್ಣ ಸದಸ್ಯತ್ಯ ಹೊಂದಿದ್ದು ಟೆಸ್ಟ್, ಏಕದಿನ, ಟಿ20 ಪಂದ್ಯಗಳನ್ನು ಆಡುತ್ತಿವೆ. ಉಳಿದ 98 ತಂಡಗಳು ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಮಾತ್ರ ಭಾಗಿಯಾಗುತ್ತಿವೆ. ವಿಶ್ವದಲ್ಲಿ ಪ್ರತಿದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತಲೇ ಇರುತ್ತವೆ.
ದಿನವೊಂದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನಿಷ್ಠ 5ರಿಂದ 6 ಪಂದ್ಯಗಳಾದರೂ ನಡೆಯುತ್ತವೆ. ಒಂದು ವರ್ಷಕ್ಕೆ ಕನಿಷ್ಠ 500ರಿಂದ 600 ಪಂದ್ಯಗಳನ್ನು ನಡೆಸಲಾಗುತ್ತದೆ. ಆದರೆ ಈ ಎಲ್ಲ ಪಂದ್ಯಗಳಲ್ಲಿ ಬಳಸಿದ ಚೆಂಡುಗಳನ್ನು ಬಳಿಕ ಏನು ಮಾಡಲಾಗುತ್ತದೆ?. ಇವುಗಳ ಮರುಬಳಕೆ ಆಗುತ್ತಾ? ಇಲ್ಲವಾ? ಎಂಬುದನ್ನು ವಿವರವಾಗಿ ನೋಡೋಣ. ಒಂದು ವರ್ಷಕ್ಕೆ ಎಷ್ಟು ಚೆಂಡುಗಳು ಬಳಕೆಯಾಗುತ್ತವೆ?:ಒಂದುವರ್ಷದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಎಷ್ಟು ಚೆಂಡುಗಳನ್ನು ಬಳಸಲಾಗುತ್ತದೆ ಎಂಬುದರ ಕುರಿತು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಆದರೆ, ಒಂದು ಪಂದ್ಯದಲ್ಲಿ ಬಳಸಬಹುದಾದ ಚೆಂಡುಗಳ ಸಂಖ್ಯೆ ಆಧರಿಸಿ ಒಂದು ವರ್ಷದಲ್ಲಿ ಬಳಸಲಾಗುವ ಚೆಂಡುಗಳ ಸಂಖ್ಯೆಯನ್ನು ಕಂಡುಕೊಳ್ಳಬಹುದು. ಏಕದಿನ ಪಂದ್ಯಗಳಲ್ಲಿ ಅಕ್ಟೋಬರ್ 14, 2011ರಿಂದ ಪ್ರತಿ ಇನ್ನಿಂಗ್ಸ್‌ಗೆ ಎರಡು ಚೆಂಡುಗಳನ್ನು ಬಳಸುವ ನಿಯಮ ಜಾರಿಗೆ ತರಲಾಗಿದೆ. ಅಂದರೆ ಒಂದು ಪಂದ್ಯದಲ್ಲಿ 4 ಚೆಂಡುಗಳ ಬಳಕೆ ಮಾಡಲಾಗುತ್ತದೆ. ಇದಕ್ಕೂ ಮೊದಲು ಪ್ರತಿ ಇನ್ನಿಂಗ್ಸ್‌ಗೆ ಒಂದು ಚೆಂಡನ್ನು ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದ್ದರಿಂದ ಒಂದು ಪಂದ್ಯದಲ್ಲಿ 2 ಚೆಂಡುಗಳ ಬಳಕೆಯಾಗುತಿದ್ದವು.
ಟಿ20 ಪಂದ್ಯಗಳಲ್ಲಿ ಪ್ರತಿ ಇನ್ನಿಂಗ್ಸ್‌ಗೆ ಒಂದು ಚೆಂಡನ್ನು ಬಳಸಲಾಗುತ್ತದೆ. ಆದ್ದರಿಂದ ಒಂದು ಪಂದ್ಯದಲ್ಲಿ ಎರಡು ಚೆಂಡುಗಳನ್ನು ಉಪಯೋಗಿಸಲಾಗುತ್ತದೆ. ಟೆಸ್ಟ್ ಪಂದ್ಯಗಳಲ್ಲಿ ಬಳಕೆ ಮಾಡುವ ಚೆಂಡುಗಳ ಎಣಿಕೆಯನ್ನು ನಿರ್ಧರಿಸುವಲ್ಲಿ ಪ್ರಾಯೋಗಿಕ ತೊಂದರೆಗಳಿವೆ. ಸಾಮಾನ್ಯವಾಗಿ, ಫೀಲ್ಡಿಂಗ್ ತಂಡದ ನಾಯಕ 80 ಓವರ್‌ಗಳ ನಂತರ ಹೊಸ ಚೆಂಡನ್ನು ಬಳಕೆ ಮಾಡಬಹುದು, ಇಲ್ಲದಿರಬಹುದು. ಆದ್ದರಿಂದ, ಒಂದೇ ಇನ್ನಿಂಗ್ಸ್‌ನಲ್ಲಿ 1-3 ಚೆಂಡುಗಳನ್ನು ಬಳಸಬಹುದು.
ಮತ್ತೊಂದು ಅಂಶವೆಂದರೆ, ಎಲ್ಲ ಟೆಸ್ಟ್ ಪಂದ್ಯಗಳನ್ನೂ 4 ಇನ್ನಿಂಗ್ಸ್‌ಗಳಲ್ಲಿ ಆಡಲಾಗುವುದಿಲ್ಲ. ಕೆಲವು ಪಂದ್ಯಗಳು ಮೂರು ಇನ್ನಿಂಗ್ಸ್‌ನಲ್ಲಿ ಕೊನೆಗೊಳ್ಳುತ್ತವೆ. ಹಾಗಾಗಿ, ಟೆಸ್ಟ್‌ನಲ್ಲಿ ಒಂದು ವರ್ಷಕ್ಕೆ ಎಷ್ಟು ಚೆಂಡುಗಳ ಬಳಕೆಯಾಗುತ್ತವೆ ಎಂಬುದನ್ನು ಹೇಳುವುದು ಕಷ್ಟ. 2024ರಲ್ಲಿ ಬಳಕೆಯಾದ ಚೆಂಡುಗಳ ಸಂಖ್ಯೆ ಎಷ್ಟು?:ಕಳೆದವರ್ಷ ದಾಖಲೆಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ. 2022ರ (735 ಪಂದ್ಯಗಳ) ಬಳಿಕ 2024ರಲ್ಲಿ ಅತೀ ಹೆಚ್ಚು ಕ್ರಿಕೆಟ್ ಪಂದ್ಯಗಳು ನಡೆದಿದ್ದು ಒಂದು ದಾಖಲೆ.
ಕಳೆದ ವರ್ಷ ಟೆಸ್ಟ್, ಏಕದಿನ ಟಿ20I ಸೇರಿ 811 ಅಂತಾರಾಷ್ಟ್ರೀಯ (104 ಏಕದಿನ, 53 ಟೆಸ್ಟ್, 654 ಟಿ20ಐ) ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಟೆಸ್ಟ್ ಪಂದ್ಯಾವಳಿಯಲ್ಲಿ ಸರಿಸುಮಾರು 260+ ಚೆಂಡುಗಳು ಬಳಕೆಯಾಗಿದ್ದರೆ, ಏಕದಿನ ಪಂದ್ಯಗಳಲ್ಲಿ 416, ಟಿ20ಗಳಲ್ಲಿ 1308 ಚೆಂಡುಗಳನ್ನು ಬಳಕೆ ಮಾಡಲಾಗಿತ್ತು. ಹೀಗೆ ಪ್ರತೀ ವರ್ಷ 1500ರಿಂದ 2000 ಚೆಂಡುಗಳು ಬಳಕೆಯಾಗುತ್ತವೆ. 2000ರಿಂದ ಏಕದಿನ, ಟಿ20ಗಳಲ್ಲಿ ಬಳಸಲಾದ ಚೆಂಡುಗಳ ಸಂಖ್ಯೆ:ವರ್ಷಏಕದಿನಟಿ20 2025 (ಅ. 26 ವರೆಗೆ)3849062024416130820238728862022644106220212846662020176190201960061420185121622017516126201639620020155841222014484122201354410620123601642011344422010284136200930096200825258200738276200632018200521462004256 2003294200229020012402000262ಬಳಸಿದ ಚೆಂಡುಗಳನ್ನು ಏನು ಮಾಡುತ್ತಾರೆ?:ಅಭ್ಯಾಸ,ಸ್ಥಳೀಯ ಕ್ರಿಕೆಟ್ಗೆ ಬಳಕೆ:ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಳಕೆಯಾದ ಚೆಂಡುಗಳನ್ನು ನಂತರ ಆಟಗಾರರ ಅಭ್ಯಾಸಕ್ಕಾಗಿ ಬಳಸಲಾಗುತ್ತದೆ.
ಅಲ್ಲದೇ ಸ್ಥಳೀಯ ಕ್ರಿಕೆಟ್ಗಳಲ್ಲೂ ಇವುಗಳನ್ನು ಬಳಸಲಾಗುತ್ತದೆ. ಚೆಂಡುಗಳ ಹರಾಜು:ವಿಶ್ವಕಪ್ ಫೈನಲ್‌ಗಳಂತಹ ಮಹತ್ವದ ಪಂದ್ಯಗಳಲ್ಲಿ ಬಳಸಲಾದ ಚೆಂಡುಗಳನ್ನು ಕೆಲವೊಮ್ಮೆ ಹರಾಜಿಗೆ ಇಡಲಾಗುತ್ತದೆ. ಅದರಿಂದ ಬಂದ ಹಣವನ್ನು ಚಾರಿಟಿಗಳಿಗೆ ನೀಡಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪಂದ್ಯದಲ್ಲಿ ಬಳಕೆಯಾದ ಚೆಂಡುಗಳನ್ನು ವಿಜೇತ ತಂಡಗಳು ನೆನಪಿಗಾಗಿ ತಮ್ಮದೇ ಆದ ಟ್ರೋಫಿ ಕೊಠಡಿಗಳಲ್ಲಿ ಭದ್ರವಾಗಿ ಇರಿಸುತ್ತವೆ. ಚೆಂಡುಗಳ ಸಂಗ್ರಹಾಲಯ:ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪಂದ್ಯದಲ್ಲಿ ಬಳಸಿದ ಚೆಂಡುಗಳು ಉತ್ತಮ ಸ್ಥಿತಿಯಲ್ಲಿದ್ದರೆ ಅವುಗಳನ್ನು 'ಬಾಲ್ ಲೈಬ್ರರಿ'ಯಲ್ಲಿ ಇಡಲಾಗುತ್ತದೆ.
ಇವುಗಳನ್ನು ಪಂದ್ಯದ ವೇಳೆ ಚೆಂಡು ಹಾನಿಗೊಳಗಾದರೆ ಅಥವಾ ಕಳೆದುಹೋದರೆ ಬದಲಿಯಾಗಿ ಬಳಸಲಾಗುತ್ತದೆ. ಆಟಗಾರರಿಗೆ ಹಸ್ತಾಂತರ: ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಅಥವಾ ಗಮನಾರ್ಹ ಪ್ರದರ್ಶನ ನೀಡಿದ ಬೌಲರ್‌ಗಳಿಗೆ ಸ್ಮರಣಿಕೆಯಂತೆ ನೀಡಲಾಗುತ್ತದೆ.








