ಢಾಕಾ:ಬಾಂಗ್ಲಾದೇಶದ ಉಚ್ಛಾಟಿತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಚುನಾವಣಾ ಸ್ಪರ್ಧೆಯಿಂದ ನಿರ್ಬಂಧಿಸಿರುವುದರಿಂದಾಗಿ, ಯೋಜಿತ ಸಾರ್ವತ್ರಿಕ ಚುನಾವಣೆಗಳನ್ನು ವಿಫಲಗೊಳಿಸಲು ದೇಶದೊಳಗಿನ ಮತ್ತು ವಿದೇಶದಿಂದ ಬರುವ ಶಕ್ತಿಗಳು ಪ್ರಯತ್ನಿಸುತ್ತವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದೊಳಗಿನ ಮತ್ತು ಹೊರಗಿನ ಅನೇಕ ಶಕ್ತಿಗಳು ಚುನಾವಣೆಯನ್ನು ಹಾಳುಮಾಡಲು ಕೆಲಸ ಮಾಡುತ್ತವೆ. ಸಣ್ಣದಲ್ಲ, ಬಹಳ ಶಕ್ತಿಶಾಲಿ ಶಕ್ತಿಗಳೇ ಅದನ್ನು ತಡೆಯಲು ಯತ್ನಿಸುತ್ತವೆ. ಹಠಾತ್ ದಾಳಿಗಳು ಬರಬಹುದು ಎಂದು ಯೂನಸ್ ಅವರ ಪ್ರೆಸ್ ಸೆಕ್ರೆಟರಿ ಶಫಿಕುಲ್ ಆಲಂ ಅವರು ಚುನಾವಣಾ ಸಿದ್ಧತೆಗಳ ಕುರಿತಾದ ಉನ್ನತ ಮಟ್ಟದ ಸಭೆಯಲ್ಲಿ ಯೂನಸ್ ಹೇಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳಿಗೆ ಬುಧವಾರ ಮಾಹಿತಿ ನೀಡಿದ್ದಾರೆ. ಮುಖ್ಯ ಸಲಹೆಗಾರ ಯೂನಸ್ ಅವರು ಸಭೆಯಲ್ಲಿ ಚುನಾವಣೆ ಸವಾಲುದಾಯಕವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಏಕೆಂದರೆ ದೇಶದೊಳಗಿನ ಮತ್ತು ಹೊರಗಿನಿಂದ ಯೋಜಿತ ರೀತಿಯಲ್ಲಿ ವಿವಿಧ ಬಗೆಯ ಪ್ರಚಾರಗಳು ನಡೆಯುತ್ತವೆ. ಎಐ-ರಚಿತ ಚಿತ್ರಗಳು ಮತ್ತು ವಿಡಿಯೋಗಳು ಆನ್‌ಲೈನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಂತಹ ವಿಷಯಗಳ ಹರಡುವಿಕೆಯನ್ನು ತಕ್ಷಣವೇ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಾವು ಎಲ್ಲವನ್ನೂ ದಾಟಿ ಮುಂದೆ ಸಾಗಬೇಕು:ನಾವು ಅವೆಲ್ಲವನ್ನೂ ದಾಟಿ ಮುಂದುವರಿಯಬೇಕು ಎಂದು ಇದೇ ವೇಳೆ 85 ವರ್ಷ ವಯಸ್ಸಿನ ಯೂನಸ್ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರ ಈ ಹೇಳಿಕೆಗಳು ಅದೇ ದಿನ ಶೇಖ್ ಹಸೀನಾ ಅವರು ವಿದೇಶಿ ಸುದ್ದಿ ಸಂಸ್ಥೆಗಳು ಮತ್ತು ಯುಕೆ ಆಧಾರಿತ ‘ದಿ ಇಂಡಿಪೆಂಡೆಂಟ್’ ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ.
ಈ ಬೆನ್ನಲ್ಲೇ ಯೂನಸ್ ಅವರ ಈ ಕಳವಳ ವ್ಯಕ್ತವಾಗಿದೆ. ಕಳೆದ ವರ್ಷ ಆಗಸ್ಟ್ 5 ರಂದು ವಿದ್ಯಾರ್ಥಿ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆಯಿಂದ ಹಸೀನಾ ಅವರ ಸರ್ಕಾರ ಉರುಳಿದ ನಂತರ, ಮುಖ್ಯವಾಹಿನಿ ಮಾಧ್ಯಮಗಳೊಂದಿಗೆ ಅವರು ಇದೇ ಮೊದಲ ಬಾರಿಗೆ ಅವರು ಮಾತನಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಅವರ ಸರ್ಕಾರದ ಉಚ್ಛಾಟನೆಯ ಬಳಿಕ 78 ವರ್ಷ ವಯಸ್ಸಿನ ಹಸೀನಾ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರ ಪಕ್ಷ ಮತ್ತು ಸರ್ಕಾರದ ಹೆಚ್ಚಿನ ನಾಯಕರು ದೇಶದೊಳಗೆ ಅಥವಾ ವಿದೇಶದಲ್ಲಿ ಜೈಲಿನಲ್ಲಿದ್ದಾರೆ ಅಥವಾ ಪರಾರಿಯಾಗಿದ್ದಾರೆ. ಹಸೀನಾ ಉಚ್ಛಾಟನೆಯ ಮೂರು ದಿನಗಳ ನಂತರ ಪ್ಯಾರಿಸ್‌ನಿಂದ ಬಾಂಗ್ಲಾಕ್ಕೆ ಬಂದ ಯೂನಸ್ ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಚುನಾವಣಾ ಆಯೋಗವು ಅವಾಮಿ ಲೀಗ್‌ನ ನೋಂದಣಿಯನ್ನು ಅಮಾನತುಗೊಳಿಸಿ, ಪಕ್ಷವನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಿ ಆದೇಶಿಸಿದೆ. ಈ ನಡುವೆ ಬುಧವಾರದ ಸಂದರ್ಶನಗಳಲ್ಲಿ ಮಾತನಾಡಿರುವ ಹಸೀನಾ, ಪಕ್ಷದ ದಶಲಕ್ಷಗಟ್ಟಲೆ ಬೆಂಬಲಿಗರು ಚುನಾವಣೆಯನ್ನು ಬಹಿಷ್ಕರಿಸುತ್ತಾರೆ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಖಾಲೇದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅವಾಮಿ ಲೀಗ್ ಅನುಪಸ್ಥಿತಿಯಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚಿನ ತಿಂಗಳುಗಳಲ್ಲಿ ಅವಾಮಿ ಲೀಗ್ ಬೆಂಬಲಿಗರು ರಾಜಧಾನಿಯಲ್ಲಿ ಹಠಾತ್ ಮೆರವಣಿಗೆಗಳನ್ನು ನಡೆಸಿ ತಮ್ಮ ಉಪಸ್ಥಿತಿಯನ್ನು ತೋರಿಸುತ್ತಿದ್ದಾರೆ. ವಿದೇಶದಲ್ಲಿ ವಾಸಿಸುತ್ತಿರುವುದರ ಹೊರತಾಗಿಯೂ ಹಸೀನಾ ಅವರು, ತಮ್ಮ ಸಂದರ್ಶನಗಳಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಕೇವಲ ಮುಕ್ತ, ನ್ಯಾಯಸಮ್ಮತ ಚುನಾವಣೆಗಳು ಮಾತ್ರ ದೇಶವನ್ನು ಗುಣಪಡಿಸಬಲ್ಲವು ಎಂದು ಅವರು ಯುಕೆಯ ‘ದಿ ಇಂಡಿಪೆಂಡೆಂಟ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದನ್ನು ಓದಿ:.








