ಸ್ಮಾರ್ಟ್​ಫೋನ್ ಮಾರ್ಕೆಟ್​ಗೆ ಕಾಲಿಡುತ್ತಿದೆ ಬೆಂಗಳೂರು ಮೂಲದ ಕಂಪನಿ​! ಹೇಗಿದೆ ಗೊತ್ತಾ ಲುಕ್​?

ಸ್ಮಾರ್ಟ್​ಫೋನ್ ಮಾರ್ಕೆಟ್​ಗೆ ಕಾಲಿಡುತ್ತಿದೆ ಬೆಂಗಳೂರು ಮೂಲದ ಕಂಪನಿ​! ಹೇಗಿದೆ ಗೊತ್ತಾ ಲುಕ್​?
By Published : October 29, 2025 at 7:52 AM IST | Updated : October 29, 2025 at 9:32 AM IST

Wobble Smartphone:ಇಂಡ್ಕಲ್ ಟೆಕ್ನಾಲಜೀಸ್‌ನ (Indkal Technologies) ಆಂತರಿಕ ಬ್ರ್ಯಾಂಡ್ ವೊಬಲ್ (Wobble) ಮುಂದಿನ ತಿಂಗಳು ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಪ್ರಸ್ತುತ ಸ್ಮಾರ್ಟ್ ಟಿವಿ ಮತ್ತು ಡಿಸ್ಪ್ಲೇ ವಿಭಾಗಗಳಲ್ಲಿ ಅಸ್ತಿತ್ವದಲ್ಲಿದೆ. ಆದರೆ, ಈಗ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ವರದಿಗಳ ಪ್ರಕಾರ, ವೊಬಲ್‌ನ ಮೊದಲ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 5G ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಮತ್ತು ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸಲಿದೆ. ಹೌದು, ಮುಂದಿನ ತಿಂಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ವೊಬಲ್ ಘೋಷಿಸಿದೆ.

ಕನ್ಸ್ಯೂಮರ್​ ಟೆಕ್​ ಬ್ರ್ಯಾಂಡ್ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಬೆಂಗಳೂರು ಮೂಲದ ಇಂಡ್ಕಲ್ ಟೆಕ್ನಾಲಜೀಸ್‌ನ ಆಂತರಿಕ ಬ್ರ್ಯಾಂಡ್ ಆಗಿರುವ ವೊಬಲ್, ಪ್ರಸ್ತುತ ದೇಶದಲ್ಲಿ ಹಲವಾರು ಡಿಸ್ಪ್ಲೇಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ನೀಡುತ್ತದೆ. ಕಂಪನಿಯು ತನ್ನ ಮುಂಬರುವ ಸ್ಮಾರ್ಟ್‌ಫೋನ್‌ನ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಇತ್ತೀಚಿನ ವರದಿಯ ಪ್ರಕಾರ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 5G ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ವೊಬಲ್‌ನ ಹೊಸ ಸ್ಮಾರ್ಟ್‌ಫೋನ್ ಯಾವಾಗ ಲಾಂಚ್​?:ನವೆಂಬರ್ 19 ರಂದು ನವದೆಹಲಿಯಲ್ಲಿ ವೊಬಲ್ ತನ್ನ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎಂದು ಕಂಪನಿ ಮಂಗಳವಾರ ಘೋಷಿಸಿದೆ.

ಇಂಡ್ಕಲ್ ಟೆಕ್ನಾಲಜೀಸ್ ಒಡೆತನದ ಈ ಬ್ರ್ಯಾಂಡ್ ಪ್ರಸ್ತುತ ಭಾರತದಲ್ಲಿ ಡಿಸ್ಪ್ಲೇಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ನೀಡುತ್ತದೆ. ಮುಂಬರುವ ವೊಬಲ್ ಸ್ಮಾರ್ಟ್‌ಫೋನ್‌ನ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಮತ್ತು ಕಂಪನಿಯು ಅದರ ವಿಶೇಷಣಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಒದಗಿಸಿಲ್ಲ. ಆದರೆ ಟೀಸರ್​ ಚಿತ್ರದಲ್ಲಿ ಇದು ಸ್ಲಿಮ್ ಫೋನ್ ಆಗಿ ಕಂಡುಬಂದಿದೆ. ವೊಬಲ್ ಫೋನಿನ ಸೈಡ್ ಪ್ರೊಫೈಲ್ ಅನ್ನು ತೋರಿಸುವ ಟೀಸರ್ ಚಿತ್ರವನ್ನು ಸಹ ಹಂಚಿಕೊಂಡಿದ್ದು, ಅದರ ಸ್ಲಿಮ್ ವಿನ್ಯಾಸವನ್ನು ಬಹಿರಂಗಪಡಿಸಿದೆ. ಫೋನ್ ಫ್ಲಾಟ್ ಫ್ರೇಮ್ ಮತ್ತು ಸ್ಲಿಮ್ ಬಾಡಿ ಪ್ರೊಫೈಲ್ ಅನ್ನು ಹೊಂದಿದೆ.

ಬಿಗ್​ ರಿಯರ್​ ಕ್ಯಾಮೆರಾ ಮಾಡ್ಯೂಲ್ ಗೋಚರಿಸುತ್ತದೆ. ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಫ್ರೇಮ್‌ನೊಂದಿಗೆ ಫ್ಲಶ್ ಆಗಿವೆ. ವೊಬಲ್ ಸ್ಮಾರ್ಟ್‌ಫೋನ್‌ನ ಸುತ್ತಲಿನ ವದಂತಿಗಳು ಸೆಪ್ಟೆಂಬರ್‌ನಿಂದ ಹರಡುತ್ತಿವೆ. ವರದಿಗಳ ಪ್ರಕಾರ, ಫೋನ್ IMEI ಡೇಟಾಬೇಸ್ ಮತ್ತು ಗೀಕ್‌ಬೆಂಚ್ ವೆಬ್‌ಸೈಟ್‌ನಲ್ಲಿ ಮಾದರಿ ಸಂಖ್ಯೆ WB25SPMTA15P2 ನೊಂದಿಗೆ ಕಾಣಿಸಿಕೊಂಡಿದೆ. ಈ ಲಿಸ್ಟ್​ ಫೋನ್‌ನ ಚಿಪ್‌ಸೆಟ್ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿಯನ್ನು ಬಹಿರಂಗಪಡಿಸಿವೆ.

ಈ ಮುಂಬರುವ ಹ್ಯಾಂಡ್‌ಸೆಟ್ ವೊಬಲ್ 1 ಹೆಸರಿನೊಂದಿಗೆ ಬಿಡುಗಡೆಯಾಗಬಹುದು ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 7400 5G ಚಿಪ್‌ಸೆಟ್ ಅನ್ನು ಒಳಗೊಂಡಿರಬಹುದು. ವರದಿಗಳ ಪ್ರಕಾರ, ಫೋನ್ 8GB RAM ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಓದಿ:.

📚 Related News