ಪ್ರತಿಷ್ಟಿತ ಟೆನಿಸ್ 'ಬಿಲ್ಲಿ ಜೀನ್ ಕಿಂಗ್ ಕಪ್​' ಪ್ಲೇ-ಆಫ್​ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ

ಪ್ರತಿಷ್ಟಿತ ಟೆನಿಸ್ 'ಬಿಲ್ಲಿ ಜೀನ್ ಕಿಂಗ್ ಕಪ್​' ಪ್ಲೇ-ಆಫ್​ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ
By Published : October 30, 2025 at 11:31 AM IST

ಬೆಂಗಳೂರು:ವಿಶ್ವ ದರ್ಜೆಯ ಟೆನ್ನಿಸ್‌ ಋತುವಿಗೆ ಗಾರ್ಡನ್ ಸಿಟಿ ಬೆಂಗಳೂರು ಸಜ್ಜುಗೊಂಡಿದೆ. ಭಾರತದಲ್ಲೇ ಮೊದಲ ಬಾರಿಗೆ ಬಿಲ್ಲಿ ಜೀನ್ ಕಿಂಗ್ (ಬಿಜಿಕೆ) ಕಪ್ ಪ್ಲೇ-ಆಫ್‌ ಪಂದ್ಯಗಳು ಎಸ್‌. ಎಂ ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನವೆಂಬರ್ 14 ರಿಂದ 16ರ ವರೆಗೆ ನಡೆಯಲಿವೆ. ನಂತರ ಜನವರಿಯಲ್ಲಿ ಬೆಂಗಳೂರು ಓಪನ್ ಹಾಗೂ 2026ರಲ್ಲಿ ಐಟಿಎಫ್ ಡಬ್ಲ್ಯೂ 100 ಈವೆಂಟ್‌ಗೆ ಬೆಂಗಳೂರು ವೇದಿಕೆಯಾಗಲಿದ್ದು, ಟೆನ್ನಿಸ್ ಪ್ರಿಯರಿಗೆ ಹಬ್ಬವಾಗಿರಲಿದೆ. ಬಿಜಿಕೆ ಕಪ್‌ನ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕುರಿತು ಬುಧವಾರ ಮಾಧ್ಯಮ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಮಹೇಶ್ವರ್ ರಾವ್ (ಐಎಎಸ್) ''ಬೆಂಗಳೂರು ಜಾಗತಿಕ ಟೆನ್ನಿಸ್ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಗಳಿಸಿದೆ ಮತ್ತು ಈ ಮುಂಬರುವ ಟೆನ್ನಿಸ್ ಋತುವು ಆ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿರಲಿದೆ.

ಬಿಲ್ಲಿ ಜೀನ್ ಕಿಂಗ್ ಕಪ್, ಬೆಂಗಳೂರು ಓಪನ್ ಮತ್ತು ಐಟಿಎಫ್ ಡಬ್ಲ್ಯೂ 100ನ್ನ ಆಯೋಜಿಸುವುದು ನಮ್ಮ ನಗರದ ವಿಶ್ವದರ್ಜೆಯ ಪ್ರತಿಭೆಗಳು ಮತ್ತು ಟೆನ್ನಿಸ್ ಪ್ರಿಯರನ್ನ ಒಟ್ಟುಗೂಡಿಸಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು. ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್ (ಐಪಿಎಸ್) ಮಾತನಾಡಿ "ಬಿಜಿಕೆ ಕಪ್ ಪಂದ್ಯಗಳಿಗೆ ನಾವು ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. ನಮ್ಮ ವೃತ್ತಿಪರ ಟೆನ್ನಿಸ್ ಆಟಗಾರರಿಗೆ ಮಾತ್ರವಲ್ಲದೆ ಭವಿಷ್ಯದ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೂ ಇದು ದೊಡ್ಡ ಪ್ರೇರಣೆಯಾಗಿರಲಿದೆ. ಇದು ನಮ್ಮ ನಗರದ ಟೆನಿಸ್ ಪ್ರಿಯರಿಗೆ ವಿಶ್ವ ದರ್ಜೆಯ ಟೆನ್ನಿಸ್ ಪಂದ್ಯಗಳನ್ನ ವೀಕ್ಷಿಸಲು ಉತ್ತಮ ಅವಕಾಶವಾಗಿದೆ" ಎಂದರು. ಬಿಜಿಕೆ ಕಪ್‌ನ ಪ್ಲೇ-ಆಫ್ ಪಂದ್ಯಗಳಿಗಾಗಿ ನವೆಂಬರ್ 7ರಂದು ಸ್ಲೊವೇನಿಯಾ ಹಾಗೂ ನವೆಂಬರ್ 9ರಂದು ನೆದರ್ಲ್ಯಾಂಡ್ಸ್ ತಂಡಗಳು ಬೆಂಗಳೂರಿಗೆ ಆಗಮಿಸಲಿದ್ದು ಮುಂದಿನ ಬಾರಿಯ ಬಿಲ್ಲಿ ಜೀನ್ ಕಿಂಗ್ ಕಪ್ ಅರ್ಹತಾ ಪಂದ್ಯಗಳಲ್ಲಿ ಅಪೇಕ್ಷಿತ ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿದೆ.

ಭಾರತ ತಂಡವು ಅಂಕಿತಾ ರೈನಾ, ಶ್ರೀವಲ್ಲಿ ಭಮಿಡಿಪತಿ, ಸಹಜ ಯಮಲಪಲ್ಲಿ, ಪ್ರಾರ್ಥನಾ ಥೋಂಬರೆ ಮತ್ತು ರಿಯಾ ಭಾಟಿಯಾ ಅವರನ್ನು ಒಳಗೊಂಡಿದೆ. ಸ್ಲೊವೇನಿಯಾ ತಂಡವು ತಮಾರಾ ಜಿಡಾನ್ಸೆಕ್, ಕಾಜಾ ಜುವಾನ್, ದಲಿಲಾ ಜಕುಪೊವಿಕ್ ಮತ್ತು ನಿಕಾ ರಾಡಿಸಿಕ್ ಅವರನ್ನು ಒಳಗೊಂಡಿದೆ. ಹಾಗೂ ನೆದರ್ಲ್ಯಾಂಡ್ಸ್ ಸುಜಾನ್ ಲ್ಯಾಮೆನ್ಸ್, ಅರಾಂಟ್ಕ್ಸಾ ರಸ್, ಅನೌಕ್ ಕೊವರ್ಮನ್ಸ್ ಮತ್ತು ಡೆಮಿ ಶುರ್ಸ್ ಅವರನ್ನೊಳಗೊಂಡಿದೆ. ಪುಣೆಯಲ್ಲಿ ನಡೆದ ಏಷ್ಯಾ / ಓಷಿಯಾನಿಯಾ ಗ್ರೂಪ್ -I ಟೈನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತ ತಂಡ ಬಿಲ್ಲಿ ಜೀನ್ ಕಪ್‌ನ ಇತಿಹಾಸದಲ್ಲೇ ಎರಡನೇ ಬಾರಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ ಈ ಟೂರ್ನಿಯಲ್ಲಿ ಭಾರತವು ಸ್ಲೊವೇನಿಯಾ ಹಾಗೂ ನೆದರ್ಲೆಂಡ್ಸ್‌ ತಂಡಗಳ ಜೊತೆಗೆ ಗ್ರೂಪ್ - ಜಿ ನಲ್ಲಿದೆ. ಎ ನಿಂದ ಜಿ ಗ್ರೂಪ್​ ನಲ್ಲಿರುವ ತಂಡಗಳುA ಗ್ರೂಪ್ - ಕೆನಡಾ, ಮೆಕ್ಸಿಕೊ ಮತ್ತು ಡೆನ್ಮಾರ್ಕ್​ B ಗ್ರೂಪ್ - ಪೋಲೆಂಡ್, ನ್ಯೂಜಿಲೆಂಡ್ ಮತ್ತು ರೊಮೇನಿಯಾ C ಗ್ರೂಪ್ - ಸ್ಲೊವಾಕಿಯಾ, ಸ್ವಿಟ್ಜರ್ಲೆಂಡ್‌‌ ಮತ್ತು ಅರ್ಜೆಂಟೀನಾ D ಗ್ರೂಪ್ - ಜೆಕ್ ರಿಪಬ್ಲಿಕ್, ಕೊಲಂಬಿಯಾ ಮತ್ತು ಕ್ರೊಯೇಷಿಯಾ E ಗ್ರೂಪ್ - ಆಸ್ಟ್ರೇಲಿಯಾ, ಪೋರ್ಚುಗಲ್ ಮತ್ತು ಬ್ರೆಜಿಲ್F ಗ್ರೂಪ್ - ಜರ್ಮನಿ, ಬೆಲ್ಜಿಯಂ ಮತ್ತು ಟರ್ಕಿG ಗ್ರೂಪ್ - ಭಾರತ, ಸ್ಲೋವೇನಿಯಾ ಮತ್ತು ನೆದರ್ಲೆಂಡ್ಸ್‌ಟಿಕೆಟ್‌ ದರ: ಬಿಲ್ಲಿ ಜೀನ್ ಕಿಂಗ್ ಕಪ್‌ಗಾಗಿ ಸೀಸನ್ ಪಾಸ್‌ಗಳು ಲಭ್ಯವಿದ್ದು 600/- ರಿಂದ ಪ್ರಾರಂಭವಾಗಲಿವೆ.

ಆದರೆ ಡೇ ಪಾಸ್‌ಗಳು 200/- ರಿಂದ ಪ್ರಾರಂಭವಾಗುತ್ತವೆ. ಟೆನ್ನಿಸ್ ಪ್ರಿಯರು ತಮ್ಮ ಟಿಕೆಟ್‌ಗಳನ್ನು ಮೂಲಕ ಖರೀದಿಸಬಹುದಾಗಿದೆ.

📚 Related News