600 ವರ್ಷಗಳಿಂದ ಈ ಗ್ರಾಮ ಮದ್ಯ, ಮಾಂಸ, ಮಾದಕವಸ್ತುಗಳಿಂದ ಮುಕ್ತ ಮುಕ್ತ!; ಇಲ್ಲಿ ಸೇವನೆ, ಮಾರಾಟ ನಿಷಿದ್ಧ; ಈರುಳ್ಳಿ- ಬೆಳ್ಳುಳ್ಳಿಗೂ ಇಲ್ಲ ಆಸ್ಪದ!

600 ವರ್ಷಗಳಿಂದ ಈ ಗ್ರಾಮ ಮದ್ಯ, ಮಾಂಸ, ಮಾದಕವಸ್ತುಗಳಿಂದ ಮುಕ್ತ ಮುಕ್ತ!; ಇಲ್ಲಿ ಸೇವನೆ, ಮಾರಾಟ ನಿಷಿದ್ಧ; ಈರುಳ್ಳಿ- ಬೆಳ್ಳುಳ್ಳಿಗೂ ಇಲ್ಲ ಆಸ್ಪದ!
By Published : October 29, 2025 at 10:50 AM IST

ಸಹರಾನ್‌ಪುರ, ಉತ್ತರಪ್ರದೇಶ:ಬದಲಾಗುತ್ತಿರುವ ಕಾಲ ಮತ್ತು ಜೀವನಶೈಲಿಯಲ್ಲಿ ಮದ್ಯ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಸಾಮಾನ್ಯವಾಗಿದೆ. ವಿಶೇಷವಾಗಿ ಯುವ ಪೀಳಿಗೆ ವ್ಯಸನಕ್ಕೆ ವೇಗವಾಗಿ ಬಲಿಯಾಗುತ್ತಿದೆ. ಜನರು ಅವುಗಳನ್ನು ಬಳಸದಂತೆ ಮಾಡಲು ಹಲವಾರು ಪ್ರಯತ್ನಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಲಾಗುತ್ತಿದೆ. ಇದರ ಹೊರತಾಗಿಯೂ ಈ ಸಮಸ್ಯೆ ಕಡಿಮೆಯಾಗಿಲ್ಲ. ವ್ಯಸನಿಗಳಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅದು ಫಲ ನೀಡಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಸಹರಾನ್‌ಪುರದ ಈ ಗ್ರಾಮವು ವ್ಯಸನ ಮುಕ್ತವಾಗಿದ್ದು, ಎಲ್ಲರಿಗೂ ಒಂದು ಉದಾಹರಣೆಯಾಗಿದೆ. ಇಲ್ಲಿ ಕಳೆದ 600 ವರ್ಷಗಳಿಂದ ಮದ್ಯ, ಮಾಂಸ ಮತ್ತು 36 ತಾಮಸಿಕ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಗ್ರಾಮದಲ್ಲಿ ಯಾರೂ ಮಾದಕ ವಸ್ತುಗಳನ್ನು ಸೇವಿಸುವುದಿಲ್ಲ ಅಥವಾ ಯಾವುದೇ ಮಾದಕ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಇಲ್ಲಿ ಬೆಳ್ಳುಳ್ಳು - ಈರುಳ್ಳಿ ಸಹ ಕಂಡು ಬರುವುದಿಲ್ಲ:ಇಲ್ಲಿನ ಅಂಗಡಿಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕೂಡ ಕಂಡು ಬರುವುದಿಲ್ಲ. ಈ ಗ್ರಾಮದ ಹೆಸರು ಮಿರ್ಗ್‌ಪುರ.

ಸರ್ಕಾರವು ಮಾದಕ ದ್ರವ್ಯ ಮುಕ್ತ ಗ್ರಾಮ ಎಂಬ ಪ್ರಮಾಣಪತ್ರವನ್ನು ಸಹ ನೀಡಿದೆ. ಇದಲ್ಲದೇ ಈ ಗ್ರಾಮವನ್ನು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ನೋಂದಾಯಿಸಲಾಗಿದೆ. ಆದಾಗ್ಯೂ ಈ ಗ್ರಾಮ ಶತಮಾನಗಳಷ್ಟು ಹಿಂದಿನಿಂದ ಮಾದಕ ದ್ರವ್ಯಗಳಿಂದ ದೂರವಿರುವ ಸಂಪ್ರದಾಯ ಇದೆ. ಈ ಹಿಂದೆ ಒಂದು ಆಸಕ್ತಿದಾಯಕ ಕಥೆ ಇದೆ. ಬಾಬಾ ಫಕೀರ್​ ದಾಸ್ ನೀಡಿದ್ದರಂತೆ ವರದಾನ; ಮಿರ್ಗ್‌ಪುರ ಗ್ರಾಮವು ಸಹರಾನ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ.

ಸುಮಾರು 20 ತಲೆಮಾರುಗಳಿಂದ ಇಲ್ಲಿನ ಜನರು ಎಲ್ಲ ರೀತಿಯ ಮಾದಕ ದ್ರವ್ಯಗಳಿಂದ ದೂರವಿದ್ದಾರೆ. ಯಾರೂ ಮದ್ಯಪಾನ ಮಾಡುವುದಿಲ್ಲ ಅಥವಾ ತಂಬಾಕುಯುಕ್ತ ಬೀಡಿ, ಸಿಗರೇಟು ಸೇದುವುದಿಲ್ಲ. ಇದಲ್ಲದೇ ಈ ಗ್ರಾಮದಲ್ಲಿ ಯಾರೂ ಮಾಂಸಾಹಾರಿಗಳಲ್ಲ. ಸಸ್ಯಾಹಾರಿ ಆಹಾರದಲ್ಲಿಯೂ ಸಹ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ವಾಸ್ತವವಾಗಿ ಈ ಗ್ರಾಮವು ಬಾಬಾ ಫಕೀರಾ ದಾಸ್ ಅವರಿಂದ ತನ್ನ ಗುರುತನ್ನು ಪಡೆದುಕೊಂಡಿದೆ.

ಗ್ರಾಮದ ನಿವಾಸಿ 85 ವರ್ಷದ ರಾಜ್‌ಪಾಲ್ ಮಾತನಾಡಿ, ಬಾಬಾ ಫಕೀರಾ ದಾಸ್ ಸುಮಾರು 600 ವರ್ಷಗಳ ಹಿಂದೆ ಗ್ರಾಮಕ್ಕೆ ಬಂದರು ಎಂದು ವಿವರಿಸುತ್ತಾರೆ. ಆ ಸಮಯದಲ್ಲಿ ಐದು ಸಹೋದರರನ್ನು ಒಳಗೊಂಡ ಒಂದೇ ಒಂದು ಹಿಂದೂ ಕುಟುಂಬ ಗ್ರಾಮದಲ್ಲಿ ವಾಸಿಸುತ್ತಿತ್ತು. ಬಾಬಾ ಫಕೀರ್​ ದಾಸ್ ಗ್ರಾಮವನ್ನು ಮಾದಕ ದ್ರವ್ಯ ಮುಕ್ತ ಮಾಡಲು ಆಶೀರ್ವದಿಸಿದರು. ಅಂದಿನಿಂದ ಗ್ರಾಮದಲ್ಲಿ ಯಾರೂ ಯಾವುದೇ ರೀತಿಯ ಮಾದಕ ದ್ರವ್ಯವನ್ನು ಸೇವಿಸಿಲ್ಲ. ಇಂದು, ಗ್ರಾಮದ ಜನಸಂಖ್ಯೆಯು 5,000 ಕ್ಕಿಂತ ಹೆಚ್ಚಾಗಿದೆ.

ಇಲ್ಲಿ ಬೀಡಿ ಮತ್ತು ಸಿಗರೇಟ್ ಮಾರಾಟ ಮಾಡುವುದಿಲ್ಲ:ಈ ಗ್ರಾಮದಲ್ಲಿ 50 ಅಂಗಡಿಗಳಿವೆ. ಇಲ್ಲಿ ದಿನನಿತ್ಯದ ಅಗತ್ಯ ವಸ್ತುಗಳು ಲಭ್ಯವಿದೆ. ಆದರೆ, ಮಾದಕ ವಸ್ತುಗಳು ಅಥವಾ ತಾಮಸಿಕ ಆಹಾರಕ್ಕೆ ಸಂಬಂಧಿಸಿದ ಯಾವುದೇ ಉತ್ಪನ್ನಗಳನ್ನು ಇಡುವುದಿಲ್ಲ ಮತ್ತು ಮಾರಾಟ ಮಾಡುವುದಿಲ್ಲ ಎಂದು ಅಂಗಡಿ ನಡೆಸುವ ರಾಜ್‌ಕರನ್ ಹೇಳಿದರು. "ಇಲ್ಲಿ ಯಾವುದೇ ಅಂಗಡಿಯಲ್ಲಿ ತಂಬಾಕು ಮಾತ್ರವಲ್ಲ, ಬೆಳ್ಳುಳ್ಳಿ ಮತ್ತು ಈರುಳ್ಳಿ ಕೂಡ ಲಭ್ಯವಿಲ್ಲ. ಅವುಗಳ ಖರೀದಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೊಸ ಪೀಳಿಗೆಯು ಇದೇ ಸಂಪ್ರದಾಯಕ್ಕೆ ಹೊಂದಿಕೊಂಡಿದೆ; ಮಿರ್ಗ್‌ಪುರ ಗ್ರಾಮವು ಆಧುನಿಕತೆಯಿಂದ ದೂರವಿದೆ ಎಂದಲ್ಲ. ಮಾದಕ ವಸ್ತು ತಮ್ಮ ಹತ್ತಿರ ಬರಲು ಅವರು ಅನುಮತಿಸಿಲ್ಲ ಅಷ್ಟೇ. ಪೀಳಿಗೆಯಿಂದ ಪೀಳಿಗೆಗೆ ಮಾದಕ ವಸ್ತುಗಳಿಂದ ದೂರ ಇರುವ ಸಂಕಲ್ಪದೊಂದಿಗೆ ಮುಂದುವರಿಯುತ್ತದೆ. ತಮ್ಮ ಹಿರಿಯರನ್ನು ನೋಡಿ ಮಕ್ಕಳು ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೇ ರುಚಿಕರವಾದ ಆಹಾರ:ಹಳ್ಳಿಯ 100 ವರ್ಷದ ರಾಜ್‌ಕಳಿ ಎಂಬುವರು ಮಾತನಾಡಿ, ಸುಮಾರು 75 ವರ್ಷಗಳ ಹಿಂದೆ ತನ್ನ ಹೆತ್ತವರ ಮನೆಯಲ್ಲಿ ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿಂದಿದ್ದೆ ಎಂದು ನೆನಪು ಮಾಡಿಕೊಂಡರು.

ಅಂದಿನಿಂದ ನಾನು ಅದನ್ನು ಮುಟ್ಟಿಲ್ಲ ಎಂದು ಹೇಳಿದ್ದಾರೆ. ಇನ್ನು ಬೆಳ್ಳುಳ್ಳಿ ಅಥವಾ ಈರುಳ್ಳಿ ಇಲ್ಲದೆ ರುಚಿಕರವಾದ ಆಹಾರ ತಯಾರಿಸಲಾಗುತ್ತದೆ ಎಂದು ಹಳ್ಳಿಯ ಮತ್ತೊಬ್ಬ ಮಹಿಳೆ ಪಾಲಿ ಹೇಳಿದರು. ಭಜನೆ ಮತ್ತು ಹಾಡು; ಹಳ್ಳಿಗಳಲ್ಲಿ ನೀವು ಸಾಮಾನ್ಯವಾಗಿ ಹುಕ್ಕಾ ಸೇದುವ ಅಥವಾ ತಂಬಾಕು ಸೇದುವ ಜನರನ್ನು ಕಾಣಬಹುದು. ಮಿರ್ಗ್‌ಪುರದಲ್ಲಿ ಹಾಗಲ್ಲ. ಇಲ್ಲಿ ಜನರು ಭಜನೆಗಳನ್ನು ಕೇಳುತ್ತಾ ಮತ್ತು ಹಾಡುತ್ತಾ ತಮ್ಮ ಸಮಯವನ್ನು ಕಳೆಯುತ್ತಾರೆ.

ಮಾದಕ ವಸ್ತುಗಳ ನಿಷೇಧವು ಸಮೃದ್ಧಿಗೆ ಕಾರಣ ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದನ್ನು ಓದಿ:.

📚 Related News