ಹೋಂಡಾ ಹೊಸ ಎಲೆಕ್ಟ್ರಿಕ್​ ಎಸ್​ಯುವಿ ಕಾನ್ಸೆಪ್ಟ್​ ರಿವೀಲ್​: ಹೇಗಿದೆ ಗೊತ್ತಾ?

ಹೋಂಡಾ ಹೊಸ ಎಲೆಕ್ಟ್ರಿಕ್​ ಎಸ್​ಯುವಿ ಕಾನ್ಸೆಪ್ಟ್​ ರಿವೀಲ್​: ಹೇಗಿದೆ ಗೊತ್ತಾ?
By Published : October 30, 2025 at 10:48 AM IST

Honda 0 Alpha Electric SUV Concept:ಜಪಾನ್ ಕಾರು ತಯಾರಕ ಕಂಪನಿ ಹೋಂಡಾ ಜಪಾನ್ ಮೊಬಿಲಿಟಿ ಶೋ 2025ರಲ್ಲಿ ತನ್ನ ಸಂಪೂರ್ಣ ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಜಪಾನ್ ಮೊಬಿಲಿಟಿ ಶೋ 2025ರ ಮೊದಲ ದಿನದಂದು ಹೋಂಡಾ ತನ್ನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯನ್ನು "ಹೋಂಡಾ 0 α (ಆಲ್ಫಾ) ಎಲೆಕ್ಟ್ರಿಕ್ SUV" ಎಂದು ಪರಿಚಯಿಸಿತು. ಈ SUVಯ ಉತ್ಪಾದನೆಯು 2027ರಲ್ಲಿ ಪ್ರಾರಂಭವಾಗಲಿದೆ. ಅದೇ ವರ್ಷ ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಕಾರನ್ನು ಬಿಡುಗಡೆ ಮಾಡಲಾಗುವುದು. ಹೋಂಡಾ 0α ಕಂಪನಿಯ 0-ಸೀರಿಸ್​ EV ಕುಟುಂಬದಲ್ಲಿ ಅತ್ಯಂತ ಚಿಕ್ಕ ಮತ್ತು ಅತ್ಯಂತ ಕೈಗೆಟುಕುವ ಮಾದರಿಯಾಗಿದೆ.

ಕಂಪನಿಯು ಆರಂಭದಲ್ಲಿ ಇದನ್ನು ಜಪಾನೀಸ್ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆ ಮಾಡುವ ಗುರಿ ಹೊಂದಿದೆ. ಹೋಂಡಾದ ಮಾತಿನಲ್ಲಿ ಹೇಳುವುದಾದರೆ, ಈ "0 α" ಮಾದರಿಯನ್ನು ನಗರ ಮತ್ತು ನೈಸರ್ಗಿಕ ಪರಿಸರಗಳಿಗೆ ಸೂಕ್ತವಾದ SUV ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು "ಅತ್ಯುತ್ತಮ ಪ್ರಯಾಣಿಕರ ಸೌಕರ್ಯ"ವನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಹೋಂಡಾ 0α SUV ಡಿಸೈನ್​ ಮತ್ತು ಆ್ಯಂಗಲ್ಸ್​:ಹೊಸ "ಹೋಂಡಾ 0α" 2025ರಲ್ಲಿ ಈ ಹಿಂದೆ ಅನಾವರಣಗೊಂಡ ದೊಡ್ಡ ಹೋಂಡಾ 0 SUVಯ ಸ್ಕೇಲ್​-ಡೌನ್​ ವರ್ಷನ್​ ಆಗಿದೆ. ಇದು ಅದೇ ‘Thin, Light, and Wise’ ಅಭಿವೃದ್ಧಿ ತತ್ವವನ್ನು ಅಳವಡಿಸಿಕೊಂಡಿದೆ.

ಹೋಂಡಾ ಸಾಕಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ SUV ನಿರ್ಮಾಣ ಮಾಡಲು ಬಯಸಿದೆ. ಆದರೆ ಅದು ಹೆಚ್ಚು ಉದ್ದವಾಗಿರಲಿಲ್ಲ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು, SUVಯಿಂದ ನಿರೀಕ್ಷಿಸಲಾದ ವಿಶಾಲವಾದ ರಚನೆಯನ್ನು ಕಾಯ್ದುಕೊಳ್ಳುವಾಗ 'Thin' ಕ್ಯಾಬಿನ್ ಅನ್ನು ವಿನ್ಯಾಸಗೊಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಗ್ರಿಲ್ ಪ್ರದೇಶವನ್ನು ಸೀಲ್ಡ್​, ಗ್ಲಾಸ್​ ಬ್ಲ್ಯಾಕ್​ ಪ್ಯಾನೆಲ್​ನಿಂದ ಬದಲಾಯಿಸಲಾಗಿದೆ. ಇದು ಚಾರ್ಜಿಂಗ್ ಪೋರ್ಟ್ ಹೊಂದಿದೆ.

ಅದರ ಮೇಲೆ LED ಹೆಡ್‌ಲೈಟ್‌ಗಳಿಗೆ ಹರಿಯುವ ಫುಲ್-ವಿಡ್ತ್​ LED ಡೇಟೈಮ್ ರನ್ನಿಂಗ್ ಲೈಟ್‌ಗಳಿವೆ. ಮುಂಭಾಗದ ಬಂಪರ್ ಸಿಲ್ವರ್​ ಇನ್ಸ್​ರ್ಟ್​ನಲ್ಲಿ ಸ್ಕಿಡ್ ಪ್ಲೇಟ್‌ನಂತಹ ವಿಜುವಲ್​ ಎಫೆಕ್ಟ್​ ಸೃಷ್ಟಿಸುತ್ತದೆ. ಮೂಲ ಮಾದರಿಯು ಗುಡ್‌ಇಯರ್ ಟೈರ್‌ಗಳೊಂದಿಗೆ ಡ್ಯುಯಲ್-ಟೋನ್, 19-ಇಂಚಿನ ವೀಲ್​ಗಳ ಮೇಲೆ ಸವಾರಿ ಮಾಡುತ್ತದೆ. ಈ ಕಾರು ರೂಫ್​ಗೆ ಬ್ಲ್ಯಾಕ್​ ಕಲರ್​ ಫಿನಿಷಿಂಗ್​ ಹೊಂದಿದೆ. ಇದರ A- ಮತ್ತು B-ಪಿಲ್ಲರ್‌ಗಳನ್ನು ಸಹ ಬ್ಲ್ಯಾಕ್​ ಕಲರ್​ನಿಂದ ಚಿತ್ರಿಸಲಾಗಿದೆ.

C-ಪಿಲ್ಲರ್ ಗಮನಾರ್ಹವಾಗಿ ದಪ್ಪ ಮತ್ತು ಅಗಲವಾಗಿದೆ. ಹಿಂಭಾಗದ ಬಾಕ್ಸ್​ ಡಿಸೈನ್​ ಹೊಂದಿದೆ. ಇದು ಸ್ಲ್ಯಾಬ್-ಸೈಡೆಡ್, ಬಹುತೇಕ MPV-ತರಹದ, U-ಆಕಾರದ, ಅಗಲವಾದ ಟೈಲ್‌ಲೈಟ್‌ಗಳನ್ನು ಹೊಂದಿದೆ. ಕಂಪನಿಯು ತನ್ನ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸದಿದ್ದರೂ, ಈ ಹೊಸ "0α" SUV ಹುಂಡೈ "ಕ್ರೆಟಾ ಎಲೆಕ್ಟ್ರಿಕ್", ಮಾರುತಿ ಸುಜುಕಿ "ಇ-ವಿಟಾರಾ" ನಂತಹ ಕಾರುಗಳಿಗಿಂತ ದೊಡ್ಡದಾಗಿರುತ್ತದೆ ಮತ್ತು "BYD Atto 3" ಗೆ ಹತ್ತಿರವಾಗಿರುತ್ತದೆ ಎಂದು ತಿಳಿದು ಬಂದಿದೆ. ಹೋಂಡಾ 0α SUV ಬ್ಯಾಟರಿ, ಮೋಟಾರ್:ಪ್ರೊಡಕ್ಷನ್​-ಸ್ಪೆಕ್ ಹೋಂಡಾ "0α" SUV ಪರಿಚಯಿಸಲು ಕಂಪನಿಯು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು.

ಆದರೆ, ಇದು ಫ್ರಂಟ್​ ವೀಲ್ಸ್​ ಚಾಲನೆ ಮಾಡುವ ಸಿಂಗಲ್​ - ಮೋಟಾರ್ ಸೆಟಪ್ ಬಳಸುತ್ತದೆ ಎಂಬುದು ಸ್ಪಷ್ಟವಾಗಿದೆ. ಇದರ ಬ್ಯಾಟರಿ ಗಾತ್ರ 50-70 kWh ನಡುವೆ ಇರಬಹುದು. ಹೋಂಡಾ "0α" SUV 400 ರಿಂದ 500 ಕಿಮೀ ವ್ಯಾಪ್ತಿಯನ್ನು ನೀಡುವ ನಿರೀಕ್ಷೆಯಿದೆ. ಹೋಂಡಾ 0α SUV ಬೆಲೆ:ಹೋಂಡಾ 2027ರಲ್ಲಿ ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೋಂಡಾ 0α ಎಲೆಕ್ಟ್ರಿಕ್ SUV ಅನ್ನು ಸ್ಥಳೀಯವಾಗಿ ಉತ್ಪಾದಿಸಲಾಗುವುದು.

ಆದರೆ ಅದರ ಗಾತ್ರ ಮತ್ತು ಬ್ಯಾಟರಿ ಆಯ್ಕೆಗಳನ್ನು ಪರಿಗಣಿಸಿ ಇದರ ಬೆಲೆ ರೂ. 20 ಲಕ್ಷದಿಂದ ರೂ. 30 ಲಕ್ಷ (ಎಕ್ಸ್-ಶೋರೂಂ) ನಡುವೆ ಇರುವ ಸಾಧ್ಯತೆಯಿದೆ. ಓದಿ:.

📚 Related News