Microsoft Azure Down:ಮೈಕ್ರೋಸಾಫ್ಟ್‌ನ ಕ್ಲೌಡ್ ಪ್ಲಾಟ್‌ಫಾರ್ಮ್ ಅಜುರೆನಲ್ಲಿನ ತಾಂತ್ರಿಕ ದೋಷದಿಂದ ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಮೈಕ್ರೋಸಾಫ್ಟ್ 365, ಟೀಮ್ಸ್, ವರ್ಡ್ ಮತ್ತು ಸ್ಟೋರ್‌ನಂತಹ ಸೇವೆಗಳು ಸ್ಥಗಿತಗೊಂಡಿದ್ದವು. ಡೌನ್‌ಡೆಕ್ಟರ್ ಪ್ರಕಾರ, 16,000ಕ್ಕೂ ಹೆಚ್ಚು ಬಳಕೆದಾರರು ಈ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಇದು ಅನೇಕ ಕಂಪನಿಗಳ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಅಮೆಜಾನ್ ಎಡಬ್ಲ್ಯೂಎಸ್ ಸರ್ವರ್‌ಗಳು ಡೌನ್ ಆದ ಕೆಲವೇ ದಿನಗಳಲ್ಲಿ ಮೈಕ್ರೋಸಾಫ್ಟ್‌ನ ಪ್ರಮುಖ ಕ್ಲೌಡ್ ಸೇವೆಯಾದ ಅಜುರೆ ಕೂಡ ಪ್ರಮುಖ ತಾಂತ್ರಿಕ ದೋಷವನ್ನು ಅನುಭವಿಸಿದೆ.
ಇಂಟರ್ನೆಟ್‌ನ ಬೆನ್ನೆಲುಬು ಎಂದು ಪರಿಗಣಿಸಲಾದ ಅಮೆಜಾನ್ ವೆಬ್ ಸರ್ವೀಸ್ (AWS) ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಸ್ಥಗಿತಗೊಂಡಿದೆ. ಬುಧವಾರ (ಅಕ್ಟೋಬರ್ 29) ಪ್ರಾರಂಭವಾದ ಈ ತಾಂತ್ರಿಕ ದೋಷವು ಪ್ರಪಂಚದಾದ್ಯಂತ ಅನೇಕ ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು ಮತ್ತು ಕ್ಲೌಡ್ - ಆಧಾರಿತ ಪ್ಲಾಟ್‌ಫಾರ್ಮ್‌ಗಳ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಡೌನ್‌ಡೆಟೆಕ್ಟರ್ ಪ್ರಕಾರ, ಸಾವಿರಾರು ಬಳಕೆದಾರರು AWS-ಸಂಬಂಧಿತ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇ-ಕಾಮರ್ಸ್ ಸೈಟ್‌ಗಳು, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಎಂಟರ್‌ಪ್ರೈಸ್ ಪರಿಕರಗಳು ಬಾಧಿತ ಸೇವೆಗಳಲ್ಲಿ ಸೇರಿವೆ. ಆದರೆ, ಅಮೆಜಾನ್ "AWS ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ" ಮತ್ತು ಅನೇಕ ವರದಿಗಳು ನಿಖರವಾಗಿಲ್ಲ ಎಂದು ಹೇಳಿದೆ.
ನಿಖರವಾದ ಮಾಹಿತಿಗಾಗಿ AWS ಹೆಲ್ತ್ ಡ್ಯಾಶ್‌ಬೋರ್ಡ್ ಪರಿಶೀಲಿಸಲು ಕಂಪನಿಯು ಬಳಕೆದಾರರಿಗೆ ಸಲಹೆ ನೀಡಿದೆ. ಯಾವುದರ ಮೇಲೆ ಎಫೆಕ್ಟ್?:ಈ ಇತ್ತೀಚಿನ ಅಡಚಣೆಯು ಹಲವಾರು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಸ್ನ್ಯಾಪ್‌ಚಾಟ್, ರೆಡ್ಡಿಟ್ ಮತ್ತು ಸ್ಲಾಕ್‌ನಂತಹ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎಂದು ವರದಿಗಳು ಸೂಚಿಸುತ್ತವೆ. ಅಮೆಜಾನ್‌ನ ಸ್ವಂತ ಇ-ಕಾಮರ್ಸ್ ಸೈಟ್ ಮತ್ತು ಹಲವಾರು ಕ್ಲೌಡ್ - ಆಧಾರಿತ ಉತ್ಪಾದಕತಾ ಪರಿಕರಗಳೂ ಸಹ ಸೇವಾ ಸಮಸ್ಯೆಗಳನ್ನು ವರದಿ ಮಾಡಿವೆ. EC2, S3 ಮತ್ತು DynamoDB ನಂತಹ AWS ಸೇವೆಗಳನ್ನು ಅವಲಂಬಿಸಿರುವ ಎಂಟರ್‌ಪ್ರೈಸ್ ಅಪ್ಲಿಕೇಶನ್‌ಗಳು ಸಹ ಅಡಚಣೆಗಳನ್ನು ಅನುಭವಿಸಿದವು, ಇದು ತಾತ್ಕಾಲಿಕವಾಗಿ ವಿಶ್ವಾದ್ಯಂತ ಕಂಪನಿಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿತು.
ಸರ್ವರ್ ಸಮಸ್ಯೆಗಳು ಹೆಚ್ಚುತ್ತಲೇ ಇವೆ:ಈ AWS ಸ್ಥಗಿತವು ಅಕ್ಟೋಬರ್ 20 ರಂದು ಸಂಭವಿಸಿದಂತೆಯೇ ಇದೆ ಎಂದು ಹೇಳಲಾಗುತ್ತದೆ. ಆಗ ಸೇವೆಯು ಸರಿಸುಮಾರು 15 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ DNS ವೈಫಲ್ಯವು ಸಿಸ್ಟಮ್ ಅನ್ನು ಸ್ಥಗಿತಗೊಳಿಸಲು ಕಾರಣವಾಯಿತು. ಇದರ ಪರಿಣಾಮವಾಗಿ ಅಮೆಜಾನ್‌ಗೆ ಸುಮಾರು $581 ಮಿಲಿಯನ್ ವಿಮಾ ನಷ್ಟ ಸಂಭವಿಸಿದೆ. ಈ ಸ್ಥಗಿತವು AWS ನ ಅತ್ಯಂತ ಜನನಿಬಿಡ ಡೇಟಾ ಕೇಂದ್ರಗಳಲ್ಲಿ ಒಂದಾದ US-EAST-1 ಪ್ರದೇಶಕ್ಕೂ ಸಂಬಂಧಿಸಿದೆ ಎಂದು ವರದಿಯಾಗಿದೆ.
ನಿರಂತರ ಸ್ಥಗಿತಗಳು ಕ್ಲೌಡ್ ಮೂಲಸೌಕರ್ಯದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಎಂದು ತಜ್ಞರು ಹೇಳುತ್ತಾರೆ. ಕಳವಳ ಹುಟ್ಟುಹಾಕಿದ ಸಮಸ್ಯೆಗಳು:ಕಳೆದ ಕೆಲವು ವರ್ಷಗಳಲ್ಲಿ AWS, Microsoft Azure ಮತ್ತು Google Cloud ನಂತಹ ಪ್ರಮುಖ ಕಂಪನಿಗಳ ಡೇಟಾ ಸರ್ವರ್‌ಗಳ ಮೇಲಿನ ಲೋಡ್ ಮತ್ತು ಸೈಬರ್ ಒತ್ತಡ ಹೆಚ್ಚಾಗುತ್ತಿರುವುದು ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣವಾಗಿದೆ. AWS ಜಾಗತಿಕ ಕ್ಲೌಡ್ ಮಾರುಕಟ್ಟೆಯ ಸರಿಸುಮಾರು ಶೇ. 30ರಷ್ಟು ನಿಯಂತ್ರಿಸುತ್ತದೆ. ಆದ್ದರಿಂದ ಕೆಲವು ಗಂಟೆಗಳ ಸ್ಥಗಿತವು ಸಹ ಅನೇಕ ದೇಶಗಳ ಡಿಜಿಟಲ್ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.
ಓದಿ:.








