ನವದೆಹಲಿ:2024 ರಲ್ಲಿ ಭಾರತದಲ್ಲಿ ಪ್ರತಿಯೊಬ್ಬರೂ ಸರಾಸರಿ 20 ಶಾಖದ ಅಲೆಯ ದಿನಗಳ ಅನುಭವ ಪಡೆದಿದ್ದು, ಈ ದಿನಗಳಲ್ಲಿ ಜನರು ತೀವ್ರ ಸಂಕಷ್ಟವನ್ನು ಎದುರಿಸಿದ್ದಾರೆ. ಇದರಲ್ಲಿ ಸುಮಾರು 6. 5 ದಿನಗಳು ಹವಾಮಾನ ಬದಲಾವಣೆಗೆ ಸಂಬಂಧಿಸಿದ್ದಾಗಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ ಎಂದು ದಿ ಲ್ಯಾನ್ಸೆಟ್ ಜರ್ನಲ್ ಪ್ರಕಟಿಸಿದ ಹೊಸ ಜಾಗತಿಕ ವರದಿ ತಿಳಿಸಿದೆ. 2024 ರಲ್ಲಿ ಆದ ಈ ಬದಲಾವಣೆಯಿಂದ ಹಾಗೂ ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ರಕ್ಷಿಸಿಕೊಳ್ಳುವುದಕ್ಕಾಗಿ ವರ್ಷಕ್ಕೆ 247 ಶತಕೋಟಿ ಸಂಭಾವ್ಯ ಕಾರ್ಮಿಕ ಗಂಟೆಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದು ಪ್ರತಿ ವ್ಯಕ್ತಿಗೆ ಸುಮಾರು 420 ಗಂಟೆಗಳ ದಾಖಲೆಯ ಗರಿಷ್ಠ - ಮತ್ತು 1990-1999 ರ ಅವಧಿಯಲ್ಲಿನ ನಷ್ಟಕ್ಕಿಂತ 124 ಪ್ರತಿಶತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಕುರಿತಾದ ಲ್ಯಾನ್ಸೆಟ್ ಕೌಂಟ್‌ಡೌನ್ 2025ರ ವರದಿ' ಪ್ರಕಾರ 2024 ರಲ್ಲಿ ಕೃಷಿ ವಲಯವು ಶೇ. 66 ರಷ್ಟು ಮತ್ತು ನಿರ್ಮಾಣ ವಲಯವು ಶೇ. 20 ರಷ್ಟು ನಷ್ಟವನ್ನು ಅನುಭವಿಸಿದೆ. ಬಿಸಿಲಿನಿಂದ ಕಾರ್ಮಿಕರ ಸಾಮರ್ಥ್ಯ ಕುಸಿತ:ತೀವ್ರ ಶಾಖದಿಂದಾಗಿ ಕಾರ್ಮಿಕರ ಸಾಮರ್ಥ್ಯ ಕಡಿಮೆಯಾಗಿರುವುದು ಕಂಡು ಬಂದಿದೆ. 2024 ರಲ್ಲಿ 194 ಶತಕೋಟಿ ಅಮೆರಿಕನ್ ಡಾಲರ್ ಆದಾಯ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ನೇತೃತ್ವದ 71 ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಏಜೆನ್ಸಿಗಳ 128 ತಜ್ಞರ ಅಂತಾರಾಷ್ಟ್ರೀಯ ತಂಡವು ವರದಿಯ ಒಂಬತ್ತನೇ ಆವೃತ್ತಿಯನ್ನು ತಯಾರಿಸುವಲ್ಲಿ ಭಾಗಿಯಾಗಿದೆ. 30 ನೇ ವಿಶ್ವಸಂಸ್ಥೆಯ ಕಾನ್ಫರೆನ್ಸ್ ಆಫ್ ದಿ ಪಾರ್ಟಿಸ್ (COP30) ಗಿಂತ ಮುಂಚಿತವಾಗಿ ಪ್ರಕಟವಾದ ಈ ವರದಿಯು ಹವಾಮಾನ ಬದಲಾವಣೆ ಮತ್ತು ಆರೋಗ್ಯದ ನಡುವಿನ ಸಂಪರ್ಕಗಳ ಇಲ್ಲಿಯವರೆಗಿನ ಅತ್ಯಂತ ಸಮಗ್ರ ಮೌಲ್ಯಮಾಪನವನ್ನು ಒದಗಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಳೆಯುಳಿಕೆ ಇಂಧನಗಳ ಮೇಲಿನ ನಿರಂತರ ಅತಿಯಾದ ಅವಲಂಬನೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಲ್ಲಿನ ವೈಫಲ್ಯವು ಜನರ ಜೀವನ, ಆರೋಗ್ಯ ಮತ್ತು ಜೀವನೋಪಾಯವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ. 20 ಸೂಚಕಗಳಲ್ಲಿ 12 ಆರೋಗ್ಯ ಸಂಬಂಧಿತ ಬೆದರಿಕೆಗಳನ್ನು ಸೂಚಿಸುತ್ತದೆ ಎಂದು ಉಲ್ಲೇಖಿಸಲಾಗಿದೆ. 1990 ರ ದಶಕದಿಂದ ಶಾಖ - ಸಂಬಂಧಿತ ಸಾವುಗಳು ಶೇಕಡಾ 23 ರಷ್ಟು ಹೆಚ್ಚಾಗಿದ್ದು, ವರ್ಷಕ್ಕೆ 546,000 ಕ್ಕೆ ತಲುಪಿವೆ, ಆದರೆ 1950 ರ ದಶಕದಿಂದ ಜಾಗತಿಕವಾಗಿ ಡೆಂಗ್ಯೂ ಹರಡುವಿಕೆಯ ಸರಾಸರಿ ಸಾಮರ್ಥ್ಯವು ಶೇಕಡಾ 49 ರಷ್ಟು ಹೆಚ್ಚಾಗಿದೆ ಎಂದು ಸಂಶೋಧನಾ ತಂಡವು ಕಂಡುಕೊಂಡಿದೆ.
ಕಾಳ್ಗಿಚ್ಚಿನಿಂದ ವಾರ್ಷಿಕ ಸರಾಸರಿ 10,200 ಸಾವು:2024ರಲ್ಲಿ ಭಾರತದಲ್ಲಿ ಜನರು ಸರಾಸರಿ 19. 8 ದಿನಗಳ ಕಾಲ ಶಾಖದ ಅಲೆಗಳಿಗೆ ಒಡ್ಡಿಕೊಂಡಿದ್ದರು. ಇವುಗಳಲ್ಲಿ, ಹವಾಮಾನ ಬದಲಾವಣೆ ಇಲ್ಲದಿದ್ದರೆ 6. 6 ದಿನಗಳ ಕಾಲ ಒಡ್ಡಿಕೊಳ್ಳುವುದು ಅಸಾಧ್ಯ ಎಂದು ಸಂಶೋಧಕರ ತಂಡ ತನ್ನ ವರದಿಯಲ್ಲಿ ಹೇಳಿದೆ. ಇದಲ್ಲದೇ , 2020-2024 ರ ಅವಧಿಯಲ್ಲಿ ಭಾರತದಲ್ಲಿ ವರ್ಷಕ್ಕೆ ಸರಾಸರಿ 10,200 ಸಾವುಗಳು ಅರಣ್ಯಕ್ಕೆ ಹೊತ್ತಿಕೊಂಡ ಬೆಂಕಿಯಿಂದ ಉಂಟಾದ PM2.
5 ಮಾಲಿನ್ಯಕ್ಕೆ ಕಾರಣ ಎಂದು ಕಂಡುಕೊಳ್ಳಲಾಗಿದೆ. ಇದು 2003-2012 ರ ದರಗಳಿಗಿಂತ ಶೇಕಡಾ 28 ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಪೆಟ್ರೋಲ್ ಬಳಕೆಯಿಂದ 2. 69 ಲಕ್ಷ ಸಾವು:ಮಾನವ ಸಂಬಂಧಿತ PM2. 5 ಮಾಲಿನ್ಯವು 2022 ರಲ್ಲಿ 17 ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ.
2010 ರಿಂದ ಶೇಕಡಾ 38 ರಷ್ಟು ಹೆಚ್ಚಾಗಿದೆ. ಕಲ್ಲಿದ್ದಲು ಮತ್ತು ದ್ರವ ಅನಿಲದಂತಹ ಪಳೆಯುಳಿಕೆ ಇಂಧನಗಳ ಬಳಕೆಯು ಸಾವುಗಳಲ್ಲಿ ಶೇಕಡಾ 44 ರಷ್ಟು ಪಾಲನ್ನು ನೀಡಿದೆ ಎಂದು ವರದಿ ತಿಳಿಸಿದೆ. ರಸ್ತೆ ಸಾರಿಗೆಗೆ ಪೆಟ್ರೋಲ್ ಬಳಕೆಯು 2. 69 ಲಕ್ಷ ಸಾವುಗಳಿಗೆ ಕಾರಣವಾಗಿದೆ ಎಂದು ಅದರಲ್ಲಿ ಹೇಳಿದೆ. ಇದನ್ನು ಓದಿ:.








