IND vs AUS, 2nd ODI: ಅರ್ಧಶತಕ ಸಿಡಿಸಿ ಗಂಗೂಲಿ, ಗಿಲ್​ಕ್ರಿಸ್ಟ್​ ದಾಖಲೆ ಮುರಿದ ಹಿಟ್‌ಮ್ಯಾನ್

IND vs AUS, 2nd ODI: ಅರ್ಧಶತಕ ಸಿಡಿಸಿ ಗಂಗೂಲಿ, ಗಿಲ್​ಕ್ರಿಸ್ಟ್​ ದಾಖಲೆ ಮುರಿದ ಹಿಟ್‌ಮ್ಯಾನ್
By Published : October 23, 2025 at 1:11 PM IST | Updated : October 23, 2025 at 2:48 PM IST

Ind vs Aus 2nd ODI Rohit Sharma Record:ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್​ ಸೋತ ಭಾರತ ಮೊದಲು ಬ್ಯಾಟಿಂಗ್​ ಮಾಡುತ್ತಿದೆ. ಅಡಿಲೇಡ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ತಂಡ ಕಳಪೆ ಆರಂಭ ಪಡೆಯಿತು. ಆರಂಭಿಕ ಶುಭ್​ಮನ್​ ಗಿಲ್​ ಕೇವಲ 9 ರನ್​ ಗಳಿಸಿ ನಿರ್ಗಮಿಸಿದರೆ, ವಿರಾಟ್​ ಕೊಹ್ಲಿ ಮತ್ತೊಮ್ಮೆ ಡಕೌಟ್​ ಆದರು. ಇಬ್ಬರ ಬ್ಯಾಟಿಂಗ್​ ವೈಫಲ್ಯದಿಂದಾಗಿ ಭಾರತ ಕೇವಲ 17 ರನ್​ಗಳಿಗೆ ಪ್ರಮುಖ 2 ವಿಕೆಟ್​ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ರೋಹಿತ್​ ಶರ್ಮಾ ಮತ್ತು ಶ್ರೇಯಸ್​ ಅಯ್ಯರ್ ಇನ್ನಿಂಗ್ಸ್​ ಸುಧಾರಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಮೊದಲ ಪಂದ್ಯದಲ್ಲಿ ಫ್ಲಾಪ್​ ಆಗಿದ್ದ ರೋಹಿತ್​ ಈ ಪಂದ್ಯದಲ್ಲಿ ಅತ್ಯುತ್ತಮ ಇನ್ನಿಂಗ್ಸ್​ ಆಡಿ ಕಮ್​ಬ್ಯಾಕ್​ ಮಾಡಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್​​ ಆರಂಭಿಸಿದ ಹಿಟ್​ಮ್ಯಾನ್​ ನಂತರ ಚೇತರಿಸಿಕೊಂಡು 59ನೇ ಏಕದಿನ ಅರ್ಧಶತಕ ಸಿಡಿಸಿದರು. ಈ ಮೂಲಕ ಸೌರವ್ ಗಂಗೂಲಿ ಮತ್ತು ಆ್ಯಡಮ್ ಗಿಲ್‌ಕ್ರಿಸ್ಟ್‌ ಅವರನ್ನು ಹಿಂದಿಕ್ಕಿದರು. ಪಂದ್ಯದಲ್ಲಿ 8 ರನ್​ ಗಳಿಸುತ್ತಿದ್ದಂತೆ ರೋಹಿತ್ ಶರ್ಮಾ ಗಂಗೂಲಿ ಅವರನ್ನು ಹಿಂದಿಕ್ಕಿದರು.

275 ಏಕದಿನ ಪಂದ್ಯಗಳಲ್ಲಿ 32 ಶತಕ ಮತ್ತು 59 ಅರ್ಧಶತಕಗಳ ಸಹಾಯದಿಂದ ಶರ್ಮಾ 11,225 ರನ್‌ಗಳನ್ನು ಕಲೆಹಾಕಿದ್ದಾರೆ. ಸೌರವ್​ ಗಂಗೂಲಿ 308 ಪಂದ್ಯಗಳಲ್ಲಿ 22 ಶತಕ ಮತ್ತು 71 ಅರ್ಧಶತಕಗಳ ಸಹಾಯದಿಂದ 11,221 ರನ್​ ಪೇರಿಸಿದ್ದಾರೆ. ಇದೀಗ ಇವರನ್ನು ರೋಹಿತ್​ ಹಿಂದಿಕ್ಕಿ ಭಾರತದ ಪರ ಏಕದಿನ ಸ್ವರೂಪದಲ್ಲಿ ಹೆಚ್ಚು ರನ್​ ಗಳಿಸಿದ 3ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್​ ತೆಂಡೂಲ್ಕರ್ (18,426 ರನ್​) ಅಗ್ರ ಸ್ಥಾನದಲ್ಲಿದ್ದರೆ, ವಿರಾಟ್​ ಕೊಹ್ಲಿ (14,181 ರನ್​) ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ರಾಹುಲ್​ ದ್ರಾವಿಡ್​ (10,768 ರನ್​) 5ನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್​ ಅತಿ ಹೆಚ್ಚು ರನ್​ಗಳಿಸಿದ ಆಟಗಾರರುಆಟಗಾರರುಪಂದ್ಯಗಳುರನ್​ಹೈಸ್ಕೋರ್100/50ಸಚಿನ್​ ತೆಂಡೂಲ್ಕರ್​ 46318,426200*49/96ವಿರಾಟ್​ ಕೊಹ್ಲಿ304*14,18118351/74ರೋಹಿತ್​ ಶರ್ಮಾ275*11,225*26432/59ಸೌರವ್​ ಗಂಗೂಲಿ30811,22118322/71ರಾಹುಲ್​ ದ್ರಾವಿಡ್​34010,76815312/82ಇಂದಿನ ಪಂದ್ಯದಲ್ಲಿ 73 ರನ್​ಗಳ ಇನ್ನಿಂಗ್ಸ್​ ಆಡಿದ ರೋಹಿತ್​ ಶರ್ಮಾ ಆಸ್ಟ್ರೇಲಿಯಾದ ದಿಗ್ಗಜ ಆ್ಯಡಮ್​ ಗಿಲ್​ಕ್ರಿಸ್ಟ್​ ದಾಖಲೆ ಮುರಿದರು. ಏಕದಿನ ಕ್ರಿಕೆಟ್​ನಲ್ಲಿ ಓಪನರ್​ ಆಗಿ ಗಿಲ್​ಕ್ರಿಸ್ಟ್​ 9200 ರನ್ ​ಕಲೆಹಾಕಿದ್ದರು. ಇದೀಗ ರೋಹಿತ್​ ಓಪನರ್​​ ಆಗಿ 9219 ರನ್​ ಗಳಿಸಿ ಗಿಲ್​ಕ್ರಿಸ್ಟ್​ ಹಿಂದಿಕ್ಕಿ ವಿಶ್ವದ ನಾಲ್ಕನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಓಪನರ್​ ಆಗಿ ಹೆಚ್ಚು ರನ್​ ಗಳಿಸಿದ ಆಟಗಾರರು:ಆಟಗಾರರುತಂಡಪಂದ್ಯರನ್​ಸಚಿನ್​ತೆಂಡೂಲ್ಕರ್​ಭಾರತ34415,310ಸನತ್​ ಜಯಸೂರ್ಯಶ್ರೀಲಂಕಾ38812,740ಕ್ರಿಸ್​ ಗೇಲ್​ವೆಸ್ಟ್​ ಇಂಡೀಸ್28010,179ರೋಹಿತ್​ ಶರ್ಮಾ ​ಭಾರತ 188*9219 ಆ್ಯಡಮ್​ ಗಿಲ್​ಕ್ರಿಸ್ಟ್ಆಸ್ಟ್ರೇಲಿಯಾ260 9200 ಸೌರವ್​ ಗಂಗೂಲಿಭಾರತ2429146ಆಸ್ಟ್ರೇಲಿಯಾ ವಿರುದ್ಧ ಸಾವಿರ ರನ್​:ಮಿಚೆಲ್​ ಸ್ಟಾರ್ಕ್​ ಎಸೆದ ಮೂರನೇ ಓವರ್​ನ 5ನೇ ಎಸೆತದಲ್ಲಿ ರೋಹಿತ್​ ಶರ್ಮಾ ಬೌಂಡರಿ ಬಾರಿಸುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮಾದರಿಯಲ್ಲಿ 1000 ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಆಸೀಸ್​ ವಿರುದ್ಧ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 21 ಪಂದ್ಯಗಳನ್ನು ಆಡಿರುವ ರೋಹಿತ್ 55. 77ರ ಸರಾಸರಿಯಲ್ಲಿ 4 ಶತಕ ಮತ್ತು 3 ಅರ್ಧಶತಕಗಳೊಂದಿಗೆ 1047 ರನ್​ಗಳನ್ನು ಸಂಪಾದಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ (802 ರನ್​) ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತ vs ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್​ ಗಳಿಸಿದ ಆಟಗಾರರು:ಆಟಗಾರರುತಂಡಪಂದ್ಯಗಳುರನ್​ಹೈಸ್ಕೋರ್ಸರಾಸರಿ100/504/6ರೋಹಿತ್​ ಶರ್ಮಾಭಾರತ21*1047*171*55. 774/380/31ವಿರಾಟ್​ ಕೊಹ್ಲಿಭಾರತ20*802*11744.

553/460/9ಸಚಿನ್​ ತೆಂಡೂಲ್ಕರ್​ಭಾರತ25740117*30. 831/564/1ಎಮ್​. ಎಸ್​. ಧೋನಿಭಾರತ2168487*45. 600/532/12ಸ್ಟೀವ್​ ಸ್ಮಿತ್ಆಸ್ಟ್ರೇಲಿಯಾ1168314968.

304/169/13ಆ್ಯರೋನ್​ ಫಿಂಚ್ಆಸ್ಟ್ರೇಲಿಯಾ1466511451. 152/556/12ಡೇವಿಡ್​ ಬೂಮ್​ಆಸ್ಟ್ರೇಲಿಯಾ14646102*53. 831/554/0ಅಲನ್​ ಬಾರ್ಡರ್​ಆಸ್ಟ್ರೇಲಿಯಾ20595105*42. 501/445/2ಡೇವಿಡ್​ ವಾರ್ನರ್​ಆಸ್ಟ್ರೇಲಿಯಾ1254312249. 361/453/9ಮ್ಯಾಥ್ಯೂ ಹೇಡನ್​ಆಸ್ಟ್ರೇಲಿಯಾ1053412653.

402/455/5.

📚 Related News