Oppo Enco X3s Earbuds Launched:ಒಪ್ಪೋ ತನ್ನ ಹೊಸ ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್‌ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಅವುಗಳನ್ನು "ಒಪ್ಪೋ ಎನ್‌ಕೋ X3S" ಎಂದು ಹೆಸರಿಸಿದೆ. 4. 7 ಗ್ರಾಂ ತೂಕದ ಈ ಲೈಟ್ವೇಟ್ ಇಯರ್‌ಬಡ್ಸ್ IP55 ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿ ಹೊಂದಿವೆ. ಅವು 11mm + 6mm ಡ್ಯುಯಲ್ ಡ್ರೈವರ್ ಸಿಸ್ಟಮ್‌ನೊಂದಿಗೆ 55dB ವರೆಗೆ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸ್ಲೇಷನ್ (ANC) ನೊಂದಿಗೆ ಬರುತ್ತವೆ.
ಅವು ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 45 ಗಂಟೆಗಳ ಪ್ಲೇಬ್ಯಾಕ್ ನೀಡುತ್ತವೆ. ಚಾರ್ಜಿಂಗ್ ಕೇಸ್‌ನಲ್ಲಿರುವ ಡೈನಾಡಿಯೊ ಲೋಗೋ ಆಕರ್ಷಕವಾಗಿದೆ. ಒಪ್ಪೋ ಎನ್‌ಕೋ X3S ಬೆಲೆ:ಸಿಂಗಾಪುರದಲ್ಲಿ ಅವುಗಳ ಬೆಲೆ 189 ಸಿಂಗಾಪುರ್ ಡಾಲರ್‌ಗಳು (ಸುಮಾರು ರೂ. 12,900). ಇದು ಕಂಪನಿಯ ಅಧಿಕೃತ ಇ-ಸ್ಟೋರ್‌ನಲ್ಲಿ ನೆಬ್ಯುಲಾ ಸಿಲ್ವರ್ ಕಲರ್ನಲ್ಲಿ ಲಭ್ಯವಿದೆ.
ಆದರೆ, ಈ ಇಯರ್‌ಬಡ್‌ಗಳನ್ನು ಭಾರತಕ್ಕೆ ತರಲಾಗುತ್ತದೆಯೇ? ಇಲ್ಲವೇ? ಕಂಪನಿಯು ಇದನ್ನು ಇನ್ನೂ ದೃಢಪಡಿಸಿಲ್ಲ. ನಾಲ್ಕು ಸೌಂಡ್ ಪ್ರೊಫೈಲ್ಸ್:ಈ ಇಯರ್‌ಬಡ್ಸ್ 11mm ಮತ್ತು 6mm ಡ್ಯುಯಲ್ ಡೈನಾಮಿಕ್ ಡ್ರೈವರ್‌ಗಳೊಂದಿಗೆ ಕೊನ್ಸಿಯಲ್ ಸೆಟಪ್‌ನಲ್ಲಿ ಬರುತ್ತವೆ. ಡ್ಯಾನಿಶ್ ಆಡಿಯೊ ಕಂಪನಿ ಡೈನಾಡಿಯೊ ಇದರಲ್ಲಿ ಲಭ್ಯವಿರುವ 4 ಸೌಂಡ್ ಪ್ರೊಫೈಲ್‌ಗಳನ್ನು ಟ್ಯೂನ್ ಮಾಡಿದೆ. ಅವುಗಳು:ಡೈನಾಡಿಯೊ ಅಥೆಂಟಿಕ್ ಲೈವ್ (Dynaudio Authentic Live)ಪ್ಯೂರ್ ವೋಕಲ್ಸ್ (Pure Vocals)ಅಲ್ಟಿಮೇಟ್ ಸೌಂಡ್ (Ultimate Sound)ಥಂಡರಿಂಗ್ ಬಾಸ್ (Thundering Bass)ಡ್ಯುಯಲ್ - ಫೀಡ್ ಎಎನ್‌ಸಿ ಸಿಸ್ಟಮ್:ಪ್ರತಿ ಇಯರ್‌ಫೋನ್ ನಾಯ್ಸ್ ಕಂಟ್ರೋಲ್ಗಾಗಿ ಮೂರು ಮೈಕ್ರೊಫೋನ್‌ಗಳೊಂದಿಗೆ ಡ್ಯುಯಲ್-ಫೀಡ್ ಎಎನ್‌ಸಿ ಸಿಸ್ಟಮ್ ಅನ್ನು ಹೊಂದಿದೆ. ಇದು 55 ಡಿಬಿ ವರೆಗೆ ನಾಯ್ಸ್ ರಿಡಕ್ಷನ್ ಒದಗಿಸುತ್ತದೆ.
'ರಿಯಲ್-ಟೈಮ್ ಡೈನಾಮಿಕ್ ಎಎನ್‌ಸಿ' ಸಾರ್ವಜನಿಕ ಸಾರಿಗೆ ಅಥವಾ ಕಾರ್ಯನಿರತ ಕಚೇರಿಯಂತಹ ಬದಲಾಗುತ್ತಿರುವ ಪರಿಸರಗಳಿಗೆ ಹೊಂದಿಕೊಳ್ಳುತ್ತದೆ. ಇದರ ಅಡಾಪ್ಟಿವ್ ಮೋಡ್ ಆಟೋಮೆಟಿಕ್ ಆಗಿ ಎಎನ್‌ಸಿ ಮತ್ತು ಪಾರದರ್ಶಕತೆಯ ಮಟ್ಟವನ್ನು ಸರಿಹೊಂದಿಸುತ್ತದೆ. ಬಿರುಗಾಳಿಯ ಪರಿಸ್ಥಿತಿಗಳಲ್ಲಿಯೂ ಸಹ ಈ ಇಯರ್‌ಬಡ್‌ಗಳನ್ನು ಸ್ಪಷ್ಟವಾಗಿ ಕರೆಗಳನ್ನು ಮಾಡಲು ಬಳಸಬಹುದು ಎಂದು ಕಂಪನಿ ಹೇಳುತ್ತದೆ. ಕನೆಕ್ಟಿವಿಟಿ:ಬ್ಲೂಟೂತ್ 5. 4 ಕನೆಕ್ಟಿವಿಟಿ, LHDC 5.
0, AAC, 5. 0, SBC ಕೊಡೆಕ್ಸ್ ಹೈ ರೆಸಲ್ಯೂಶನ್ ಆಡಿಯೊವನ್ನು ಒದಗಿಸುತ್ತವೆ. ಗೇಮ್ ಮೋಡ್ ಲೆಟೆನ್ಸಿ ಕಡಿಮೆ ಮಾಡುತ್ತದೆ. ಆದರೆ, ಒಪ್ಪೋ ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಿದಾಗ ಅದರ AI ಟ್ರಾನ್ಸ್ಲೇಟ್ 20ಕ್ಕೂ ಹೆಚ್ಚು ಭಾಷೆಗಳಲ್ಲಿ ನೈಜ - ಸಮಯದ ಅನುವಾದವನ್ನು ಒದಗಿಸುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಹೆಮೆಲೋಡಿ ಅಪ್ಲಿಕೇಶನ್ ಮೂಲಕ ಇತರ ಕಸ್ಟ್ಮೈಸೇಶನ್ ಮತ್ತು ಅಪ್ಡೇಟ್ಸ್ ಸಹ ಲಭ್ಯವಿದೆ.
45 ಗಂಟೆಗಳ ಪ್ಲೇಬ್ಯಾಕ್:ಈ ಇಯರ್‌ಬಡ್ಸ್ ANC ಆಫ್‌ನೊಂದಿಗೆ 11 ಗಂಟೆಗಳ ಪ್ಲೇಬ್ಯಾಕ್ ಮತ್ತು ANC ಆನ್‌ನೊಂದಿಗೆ 6 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತವೆ. ಚಾರ್ಜಿಂಗ್ ಕೇಸ್‌ನೊಂದಿಗೆ ನೀವು 45 ಗಂಟೆಗಳ ಪ್ಲೇಬ್ಯಾಕ್ ಪಡೆಯಬಹುದು. ಕೇಸ್‌ನಲ್ಲಿರುವ USB ಟೈಪ್ - ಸಿ ಮೂಲಕ ಇಯರ್‌ಬಡ್‌ಗಳು 80 ನಿಮಿಷಗಳಲ್ಲಿ ಚಾರ್ಜ್ ಆಗುತ್ತವೆ. ಪ್ರತಿ ಇಯರ್‌ಬಡ್ 4. 73 ಗ್ರಾಂ ತೂಗುತ್ತದೆ ಮತ್ತು ಕೇಸ್ 49.
02 ಗ್ರಾಂ ತೂಗುತ್ತದೆ. ಓದಿ:.








